ನೂತನ ಸಿಎಂ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್: ಹೊಸ ಮುಖ್ಯಮಂತ್ರಿ ಯಾರು?
* ನೂತನ ಸಿಎಂ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್
* ರಾಜ್ಯಪಾಲರ ಕಚೇರಿಯಿಂದ ಮುಖ್ಯಕಾರ್ಯದರ್ಶಿಗೆ ಸೂಚನೆ
* ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ
ಬೆಂಗಳೂರು, (ಜು.27): ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ ಹೊಸ ಸಿಎಂ ಆಯ್ಕೆ ತ್ವರಿಗತಿಯಲ್ಲಿ ಸಾಗಿದ್ದು, ನೂತನ ಸಿಎಂ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಎಂದು ತಿಳಿದುಬಂದಿದೆ.
ಹೌದು...ನಾಳೆಯೇ (ಜು.28) ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ. ಇದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯಪಾಲರ ಕಚೇರಿಯಿಂದ ಮುಖ್ಯಕಾರ್ಯದರ್ಶಿಗೆ ಸೂಚನೆ ರವಾನೆಯಾಗಿದೆ. ಆದ್ರೆ, ಮುಖ್ಯಮಂತ್ರಿ ಯಾರು ಆಗುತ್ತಾರೆ ಎನ್ನುವುದು ಮಾತ್ರ ನಿನ್ನೂ ನಿಗೂಢವಾಗಿ ಉಳಿದಿದೆ.
ಸಿಎಂ ರೇಸ್‌ನಲ್ಲಿ ಐವರು ನಾಯಕರು: ಒಬ್ಬರಿಗೆ ಒಲಿಯುತ್ತಾ ಸಿಎಂ ಪಟ್ಟ?
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಈ ಮಧ್ಯೆ 5-6 ನಾಯಕರ ಹೆಸರು ಕೇಳಿಬಂದಿದ್ದು, ಈ ಪೈಕಿ ಅರವಿಂದ್ ಬೆಲ್ಲದ್ ಅವರ ಹೆಸರು ಮುಚೂಣೆಯಲ್ಲಿ ಕೇಳಿಬರುತ್ತಿದೆ.
ಆದರೆ, ಸಿಎಂ ಆಗ್ತಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆಗಲೇ ಸಿಎಂ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಮಾಡಿರುವುದು ಭಾರೀ ಸಂಚಲನ ಮೂಡಿಸಿದೆ. ಇನ್ನು ಇಂದು (ಜು.27) ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯ ನಿರ್ಧಾರದ ಮೇಲೆ ಅಂತಿಮ ತಿರ್ಮಾನವಾಗುವ ಎಲ್ಲಾ ಸಾಧ್ಯತೆಗಳಿವೆ.
ಶಾಸಕರ ಅಭಿಪ್ರಾಯ ಸಂಗ್ರಹಿಸಿ ನಂತರ ಹೈಕಮಾಂಡ್ ಘೋಷಣೆ ಮಾಡುವ ಸಾದ್ಯತೆಗಳಿವೆ. ಒಂದು ವೇಳೆ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗೆ ಬಗ್ಗೆ ಕೊಂಚ ಏನಾದ್ರೂ ವಿರೋಧ ವ್ಯಕ್ತವಾದ್ರೆ, ವೀಕ್ಷಕರ ತಂಡ ಅದನ್ನ ಅಮಿತ್ ಶಾ, ನಡ್ಡಾ ಹಾಗೂ ಮೋದಿಗೆ ವರದಿ ನೀಡಲಿದೆ. ಬಳಿಕ ದೆಹಲಿಯಿಂದಲೇ ನಡ್ಡಾ ಅವರು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಬಹುದು...