Parliament Winter Session: ಹೈವೋಲ್ಟೇಜ್‌ ಸಂಸತ್‌ ಕಲಾಪ, ದಾಳಿ, ಪ್ರತಿದಾಳಿಗೆ ಕಾಂಗ್ರೆಸ್‌, ಬಿಜೆಪಿ ಸಜ್ಜು!

* ಕೃಷಿ ಮಸೂದೆ, ಚೀನಾ, ರಫೇಲ್‌ ಬಗ್ಗೆ ವಾಕ್ಸಮರ

* ಇಂದಿನಿಂದ ಹೈವೋಲ್ಟೇಜ್‌ ಸಂಸತ್‌ ಕಲಾಪ

* ದಾಳಿ, ಪ್ರತಿದಾಳಿಗೆ ಕಾಂಗ್ರೆಸ್‌, ಬಿಜೆಪಿ ಸಜ್ಜು

* ಮೊದಲ ದಿನವೇ ಕೃಷಿ ಕಾಯ್ದೆ ರದ್ದತಿ ಸಾಧ್ಯತೆ

Parliament Winter Session 26 Bills to be tabled Opposition to press for law on MSP pod

ನವದೆಹಲಿ(ನ.29): ಸಂಸತ್ತಿನ ಚಳಿಗಾಲದ ಅಧಿವೇಶನ (Parliament Winter Session) ಸೋಮವಾರ (ನ.29)ದಿಂದ ಆರಂಭವಾಗಲಿದ್ದು, ಕೃಷಿ ಕಾಯ್ದೆ, ಪಂಚರಾಜ್ಯ ಚುನಾವಣೆ (Five State Elections), ಬೆಲೆಯೇರಿಕೆ, ಪೆಗಾಸಸ್‌ ಬೇಹುಗಾರಿಕೆ ಮುಂತಾದ ವಿಷಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಭಾರಿ ವಾಕ್ಸಮರ, ಜಟಾಪಟಿ ನಡೆಯುವ ಸಾಧ್ಯತೆಯಿದೆ. ಡಿ.23ರವರೆಗೆ ನಡೆಯುವ ಅಧಿವೇಶನದಲ್ಲಿ ಬಿಜೆಪಿ (BJP) ವಿರುದ್ಧ ಮುಗಿಬೀಳಲು ಕಾಂಗ್ರೆಸ್‌ (Congress) ಹಾಗೂ ಇನ್ನಿತರ ವಿಪಕ್ಷಗಳು ಸಾಕಷ್ಟುವಿಷಯಗಳನ್ನು ಸಿದ್ಧಪಡಿಸಿಕೊಂಡಿವೆ. ಆದರೆ, ಅವುಗಳಿಗೆ ಸೂಕ್ತ ತಿರುಗೇಟು ನೀಡಲು ಬಿಜೆಪಿ ಕೂಡ ಸಜ್ಜಾಗಿದೆ.

ಮೊದಲ ದಿನವೇ ಕೃಷಿ ಕಾಯ್ದೆ ರದ್ದು:

ಅಧಿವೇಶನದ ಮೊದಲ ದಿನವೇ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ (Narendra Singh Tomar) 3 ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಮಸೂದೆ ಮಂಡಿಸಲಿದ್ದು, ಅಂದೇ ಅದನ್ನು ಅಂಗೀಕರಿಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಆದರೆ, ಈ ಕಾಯ್ದೆಯ ವಿಚಾರದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿ, ಸುದೀರ್ಘ ಚರ್ಚೆ ನಡೆಸಲು ಕಾಂಗ್ರೆಸ್‌ ಪಟ್ಟುಹಿಡಿಯಲಿದೆ ಎನ್ನಲಾಗಿದೆ.

ದಾಳಿ-ಪ್ರತಿದಾಳಿಯ ವಿಚಾರಗಳು:

ನಂತರ ಚೀನಾದ ಒಳನುಸುಳುವಿಕೆಯನ್ನು ಮುಂದಿಟ್ಟು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್‌ ಸಜ್ಜಾಗಿದ್ದರೆ, 26/11 ಮುಂಬೈ ದಾಳಿಯ (Mumbai Terror Attack)  ನಂತರ ಮನಮೋಹನ ಸಿಂಗ್‌ ಸರ್ಕಾರ ಮೆದುವಾಗಿ ನಡೆದುಕೊಂಡಿತು ಎಂಬ ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿಯ ಪುಸ್ತಕದಲ್ಲಿರುವ ವಿಚಾರಗಳು ಹಾಗೂ ಮೋದಿ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಮೇಲೆ ನಡೆದ ಸರ್ಜಿಕಲ್‌ ದಾಳಿಯ ವಿಷಯವನ್ನಿಟ್ಟುಕೊಂಡು ತಿರುಗೇಟು ನೀಡಲು ಬಿಜೆಪಿ ನಿರ್ಧರಿಸಿದೆ.

ಇನ್ನು, ರಫೇಲ್‌ ಒಪ್ಪಂದದ ಕುರಿತು ವಾಗ್ದಾಳಿಗೆ ಕಾಂಗ್ರೆಸ್‌ ಸಜ್ಜಾಗಿದ್ದರೆ, 2007-12ರ ಅವಧಿಯಲ್ಲಿ ರಫೇಲ್‌ ವ್ಯವಹಾರದಲ್ಲಿ ಭಾರತದ ಆಡಳಿತಾರೂಢ ರಾಜಕಾರಣಿಗೆ 65 ಕೋಟಿ ರು. ಕಮಿಷನ್‌ ನೀಡಲಾಗಿದೆ ಎಂಬ ಫ್ರಾನ್ಸ್‌ ಮಾಧ್ಯಮದ ವರದಿಯನ್ನಟ್ಟಿಕೊಂಡು ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ. ಇದೇ ವೇಳೆ, ಅಗತ್ಯ ವಸ್ತುಗಳ ಬೆಲೆಯೇರಿಕೆ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯ ಬಗ್ಗೆ ಕಾಂಗ್ರೆಸ್‌ ಪ್ರಸ್ತಾಪಿಸಲಿದ್ದು, ಅದಕ್ಕೆ ಐತಿಹಾಸಿಕ ಲಸಿಕಾಕರಣದ ಪ್ರಗತಿಯನ್ನು ತೋರಿಸಿ ಬಿಜೆಪಿ ತಿರುಗೇಟು ನೀಡಲಿದೆ.

Farmers Protest:ಸಂಸತ್ ಚಲೋ ಟ್ರಾಕ್ಟರ್ ರ‍್ಯಾಲಿ ಮುಂದೂಡಿಕೆ, ಹೋರಾಟ ನಿರಂತರ ಎಂದ ರೈತ ಸಂಘಟನೆ!

26 ಮಸೂದೆಗಳ ಮಂಡನೆ:

ಪೆಗಾಸಸ್‌, ಹಿಂದುತ್ವದ ಬಗ್ಗೆ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷೀದ್‌ ಬರೆದ ವಿವಾದಾಸ್ಪದ ವಿಚಾರಗಳು, ಜಮ್ಮು ಕಾಶ್ಮೀರದಲ್ಲಿನ ದಾಳಿಗಳು, ತ್ರಿಪುರಾದಲ್ಲಿನ ಹಿಂಸಾಚಾರ, ಬಂಗಾಳದಲ್ಲಿ ಕೇಸರಿ ಕಾರ್ಯಕರ್ತರ ಹತ್ಯೆ ಮುಂತಾದವುಗಳ ಬಗ್ಗೆಯೂ ಕಾವೇರಿದ ಚರ್ಚೆಗಳು ನಡೆಯುವ ಸಾಧ್ಯತೆಯಿದೆ. ಒಟ್ಟು 26 ಮಸೂದೆಗಳು ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ಅವುಗಳ ಕುರಿತು ಚರ್ಚೆ ನಡೆಯಲಿದೆ.

ಮಂಡನೆಯಾಗಲಿರುವ ಪ್ರಮುಖ ಮಸೂದೆಗಳು

1 ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಮಸೂದೆ

2 ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧ ಕಾಯ್ದೆ ಮತ್ತು ಕೆಲವು ಅಧಿಕೃತ ಡಿಜಿಟಲ್‌ ಕರೆನ್ಸಿಗಳಿಗೆ ಮಾನ್ಯತೆ

3 ರಾಷ್ಟ್ರೀಯ ಮಾದಕ ವಸ್ತು ವಿರೋಧಿ ಮಸೂದೆ 2021

4 ಮಾನವ ಕಳ್ಳಸಾಗಾಣಿಕೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2021

5 ಸಂವಿಧಾನ (ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ) ಆದೇಶ ಮಸೂದೆ

ಈ ಒಂದು ಕಾರಣಕ್ಕೆ ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ಘೋಷಿಸಿದ ದೀದಿ!

ತರ ರಾಜ್ಯಗಳಲ್ಲೂ ಪಕ್ಷ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರನ್ನು (Congress Leaders) ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ತೃಣಮೂಲ ಕಾಂಗ್ರೆಸ್ (Trinamool Congress), ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Parliament Winter Session) ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸುವ ಉಳಿಯುವ ಭರವಸೆ ನೀಡಿದೆ. ಕಾಂಗ್ರೆಸ್ ಜೊತೆಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಟಿಎಂಸಿಯು (TMC) ಸಂಯುಕ್ತ ವಿರೋಧ ಪಕ್ಷದ ಭಾಗವಾಗಿ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಎರಡು ಪಕ್ಷಗಳು ಚುನಾವಣಾ ಮೈತ್ರಿ ಮಾಡಿಕೊಂಡಿಲ್ಲವಾದ್ದರಿಂದ ಕಾಂಗ್ರೆಸ್‌ನೊಂದಿಗಿನ ಅದರ ಸಮೀಕರಣವು ಇತರ ಪಕ್ಷಗಳಂತೆಯೇ ಇಲ್ಲ ಎಂದು ಪಕ್ಷದ ಹಿರಿಯ ನಾಯಕ ಡೆರೆಕ್ ಒ'ಬ್ರಿಯಾನ್ (Derek O' Brien ) ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios