ಬೆಂಗಳೂರು, (ಏ.26) : ಕೊರೋನಾ ಸೋಂಕು ತಗುಲಿರುವ ಆತಂಕದಲ್ಲಿದ್ದ ಕರ್ನಾಟಕದ ಇಬ್ಬರು ಸಚಿವರು ನಿರಾಳರಾಗಿದ್ದಾರೆ. 

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆಗೊಳಗಾಗಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಸಚಿವ ಡಾ. ಕೆ.ಸುಧಾಕರ್ ಅವರ ರಿಪೋರ್ಟ್ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರಿಬ್ಬರು ನಿಟ್ಟುಸಿರು ಬಿಟ್ಟಿದ್ದಾರೆ.

ಕೊರೋನಾ ಆತಂಕದಲ್ಲಿದ್ದ ಡಿಸಿಎಂ ಗೋವಿಂದ ಕಾರಜೋಳಗೆ ಬಿಗ್ ರಿಲೀಫ್..! 

ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಬ್ಬರೂ ರಾಜ್ಯದಲ್ಲಿ ಮಾರಕ ಸೋಂಕು ಎದುರಾದಾಗಿನಿಂದಲೂ  ಶ್ರಮ ವಹಿಸಿದ್ದಾರೆ. ಇದರ ಮಧ್ಯೆ ಕನ್ನಡ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. 

ಇದರಿಂದ ಇಬ್ಬರು ಸಚಿವರಿಗೆ ಮುಂಜಾಗ್ರತೆಯಾಗಿ ಸೇಫ್ಟಿ ಟೆಸ್ಟ್ ಮಾಡಿಸಲಾಗಿತ್ತು. ಈಗ ಇಬ್ಬರು ಸಚಿವರ ವೈದ್ಯಕೀಯ ರಿಪೋರ್ಟ್ ಕೈಸೇರಿದ್ದು, ಶ್ರೀರಾಮುಲು ಹಾಗೂ ಸುಧಾಕರ್ ಇಬ್ಬರಲ್ಲೂ ಕೊರೊನಾ ಸೋಂಕು ನೆಗೆಟಿವ್ ಬಂದಿದೆ. 

ಕನ್ನಡ ಪತ್ರಕರ್ತನಿಗೆ ವಕ್ಕರಿಸಿದ ಕೊರೋನಾ: ಹಲವು ಮಾಧ್ಯಮ ಸಿಬ್ಬಂದಿ ಕ್ವಾರಂಟೈನ್

ಶಾಸಕ ಜಮೀರ್ ಅಹ್ಮದ್‌ ಸೇಫ್
ಹೌದು..ಕೊರೋನಾ ಬಂದಾಗಿನಿಂದ ಬೆಂಗಳೂರಿನ ಹಾಟ್‌ಸ್ಪಾಟ್‌ ಆಗಿದ್ದ ಪಾದರಾಯನಪುರದಲ್ಲಿ ಶಾಸಕ ಜಮೀರ್ ಅಹ್ಮದ್ ಸುತ್ತಾಡುತ್ತಿದ್ದಾರೆ. ಅಲ್ಲದೇ ಕ್ವಾರಂಟೈನ್‌ನಲ್ಲಿದ್ದವನ್ನೂ ಸಹ ಭೇಟಿ ಮಾಡಿದ್ದರು. ಇದಲ್ಲದೇ ಓರ್ವ ಕೊರೋನಾ ಸೊಂಕಿತ ಮಹಿಳೆಯ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದರು. ಈ ಕಾರಣಕ್ಕಾಗಿ ಜಮೀರ್ ಅವರನ್ನು ಬಿಬಿಎಂಪಿ ತಪಾಸಣೆಗೊಳಪಡಿಸಿದ್ದು, ನೆಗೆಟಿವ್ ಅಂತ ವರದಿ ಬಂದಿದೆ.

ಬಾಗಲಕೋಟೆಯಲ್ಲಿ ಪೊಲೀಸ್ ಪೇದೆಗೆ ಕೊರೋನಾ ತಗುಲಿದ್ದರಿಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವವರಿಗೂ ವೈರಸ್ ಭಯವಿತ್ತು. ಆದ್ರೆ, ಸೊಂಕು ಪೀಡಿತ ಪೇದೆ ಡಿಸಿಎಂ ಸಾಹೇಬರ ಸಂಪರ್ಕದಲ್ಲಿರಲಿಲ್ಲ ಎಂದು ಜಿಲ್ಲಾ ಎಸ್ಪಿ ಸ್ಪಷ್ಟಪಡಿಸಿದ್ದರು. ಈ ಮೂಲಕ ಗೋವಿಂದ ಕಾರಜೋಳ ಅವರು ನಿರಾಳರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.