ಕೊರೋನಾ ಆತಂಕದಲ್ಲಿದ್ದ ಡಿಸಿಎಂ ಗೋವಿಂದ ಕಾರಜೋಳಗೆ ಬಿಗ್ ರಿಲೀಫ್..!
ಗೋವಿಂದ ಕಾರಜೋಳಗೆ ಭದ್ರತೆ ವೇಳೆ ಸೋಂಕಿತ ಪೇದೆ ಇರಲಿಲ್ಲ ಎಂದು ಬಾಗಲಕೋಟೆ ಎಸ್.ಪಿ. ಲೋಕೇಶ್ ಸ್ಪಷ್ಟಪಡಿಸಿದ್ದು,ಜಿಲ್ಲಾ ಪ್ರವಾಸದ ವೇಳೆ ಕೊರೋನಾ ಸೋಂಕಿತ ಪೇದೆ ಗೋವಿಂದ್ ಕಾರಜೊಳ ಅವರ ಸಂಪರ್ಕದಲ್ಲಿ ಇಲ್ಲ ಎಂದು ಖಚಿತಪಡಿಸಿದರು. ಈ ಹಿನ್ನೆಲೆ ಗೋವಿಂದ ಕಾರಜೋಳ ಅವರು ನಿರಾಳರಾಗಿದ್ದಾರೆ.
ಕೊರೋನಾ ಭೀತಿ: ಕ್ವಾರಂಟೈನ್‌ನಲ್ಲಿ ಪೊಲೀಸ್ ಪೇದೆ!
ಬಾಗಲಕೋಟೆಯ ಮುಧೋಳ ಪೊಲೀಸ್ ಠಾಣೆಯ ಕರ್ತವ್ಯ ನಿರತರಾಗಿದ್ದ ಪೇದೆಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿರುವ ಹಿನ್ನೆಲೆಯಲ್ಲಿ ಮುಧೋಳ ಸಿಪಿಐ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ಸಿಪಿಐ ಸೇರಿದಂತೆ 8 ಜನರನ್ನು ಬಾಗಲಕೋಟೆ ಲಾಡ್ಜ್ ನಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಪೇದೆಗೆ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಆತಂಕ ಶುರುವಾಗಿತ್ತು. ಮುಧೋಳ ಸಿಪಿಐ, ಪಿಎಸ್ಐ ಹಾಗೂ ಇತರೆ ಪೇದೆಗಳು ಮಾರ್ಚ್ 28, 30 ಹಾಗೂ ಏಪ್ರಿಲ್ 4, 7, 11 ರಂದು ಡಿಸಿಎಂ ಕಾರಜೋಳಗೆ ಭದ್ರತೆ ನೀಡಿದ್ದರು.
ಬಾಗಲಕೋಟೆಯಲ್ಲಿ ಕೋವಿಡ್-19 ಸಭೆ ಹಾಗೂ ಮುಧೋಳ ಪ್ರವಾಸ ಸಂದರ್ಭದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು. ಮಾರ್ಚ್ 28 ರಂದು ಮುಧೋಳ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ಜಾಗೃತಿ ವೇಳೆಯೂ ಈ ಪೊಲೀಸರು ಭದ್ರತೆಯಲ್ಲಿದ್ದರು.
ಗೋವಿಂದ ಕಾರಜೋಳಗೆ ಭದ್ರತೆ ಒದಗಿಸಿದ ಹಿನ್ನೆಲೆ ಸೋಂಕಿತ ಪೇದೆ ಸಂಪರ್ಕಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಗೋವಿಂದ ಕಾರಜೋಳಗೆ ಕೊರೋನಾ ಭೀತಿ ಶುರುವಾಗಿತ್ತು. ಆದ್ರೆ, ಇದೀಗ ಎಸ್‌ಪಿ ಅವರು ಹೇಳಿದ ಪ್ರಕಾರ ಆ ಪೊಲೀಸ್ ಪೇದೆ ಡಿಸಿಎಂ ಸಂಪರ್ಕಕ್ಕೆ ಇಲ್ಲ ಎಂದು ಖಚಿತಪಡಿಸಿದ್ದಾರೆ.
ಆದರೂ ಪೇದೆ ಸಂಪರ್ಕದಲ್ಲಿದ್ದ ಸಿಪಿಐ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಕಾರಳಜೋಳ ಅವರ ಭದ್ರತೆಯಲ್ಲಿ ಇರಬಹುದು. ಯಾವುದಕ್ಕೂ ಮುಂಜಾಗ್ರತಾವಾಗಿ ಡಿಸಿಎಂ ಸಾಹೇಬ್ರು ಯಾವುದಕ್ಕೂ ತಪಾಸಣೆಗೆ ಒಳಗಾಗುವುದು ಒಳಿತು.