* ಈ ಬಾರಿ ಉಪಮುಖ್ಯಮಂತ್ರಿ ಹುದ್ದೆ ಇಲ್ಲ* ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಶಪಥ* ಸುಮಾರು 20 ರಿಂದ 24 ಮಂತ್ರಿಗಳ ಪ್ರಮಾಣ ವಚನ

ಬೆಂಗಳೂರು(ಆ.04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ಬುಧವಾರ ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮಂಗಳವಾರ ತಡರಾತ್ರಿ ದೆಹಲಿಯಲ್ಲಿ ಅಂತಿಮ ಸುತ್ತಿನ ಮಾತುಕತೆ ನಡೆದ ಬಳಿಕ ಸಂಪುಟ ರಚನೆಗೆ ವರಿಷ್ಠರು ಹಸಿರು ನಿಶಾನೆ ತೋರಿದ್ದು, ಮೊದಲ ಹಂತದಲ್ಲಿ 20ರಿಂದ 24 ಮಂದಿ ಸಂಪುಟ ಸೇರ್ಪಡೆಯಾಗುವ ಸಂಭವವಿದೆ. ಅಧಿಕೃತವಾಗಿ ಬೊಮ್ಮಾಯಿ ಅವರ ಸಂಪುಟದಲ್ಲಿ ಎಷ್ಟುಮಂದಿ ಮತ್ತು ಯಾರಾರ‍ಯರು ಇರಲಿದ್ದಾರೆ ಎಂಬುದರ ಅಧಿಕೃತ ಮಾಹಿತಿ ಬೆಳಗ್ಗೆಯೇ ಹೊರಬೀಳಲಿದೆ.

ಮತ್ತೆ ಕಿಂಗ್‌ ಮೇಕರ್ ಆದ ಬಿಎಸ್‌ವೈ: ವಿರೋಧಿಗಳಿಗೆ ಪಾಠ ಕಲಿಸಿದ ರಾಜಾಹುಲಿ!

ಈ ಬಾರಿಯ ಒಂದು ವಿಶೇಷತೆ ಎಂದರೆ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ವರಿಷ್ಠರು ಒಲವು ತೋರಿಲ್ಲ. ಹಿಂದಿನ ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಮೂವರು ಉಪಮುಖ್ಯಮಂತ್ರಿಗಳಿದ್ದರು. ಆದರೆ, ಉಪಮುಖ್ಯಮಂತ್ರಿ ಹುದ್ದೆಯಿಂದ ಪಕ್ಷಕ್ಕಾಗಲಿ ಅಥವಾ ಸರ್ಕಾರಕ್ಕಾಗಲಿ ಹೆಚ್ಚಿನ ಅನುಕೂಲವೇನೂ ಆಗಿಲ್ಲ ಎಂಬ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಈ ಸಲ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಅನೇಕರು ಕಣ್ಣಿಟ್ಟಿದ್ದರಿಂದ ಯಾರಿಗೆ ನೀಡಿದರೂ ಅದು ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಹುದ್ದೆಯ ಸೃಷ್ಟಿಯೇ ಬೇಡ ಎಂಬ ನಿಲುವಿಗೆ ಬರಲಾಯಿತು ಎಂದೂ ಹೇಳಲಾಗುತ್ತಿದೆ.

ಸದ್ಯ ಇಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಲಿರುವ ಸಂಭಾವ್ಯ ಸಚಿವರ ಪಟ್ಟಿ ಹರಿದಾಡಲಾರಂಭಿಸಿದ್ದು, ಇವರಿಗೆ ಸಚಿವಗಿರಿ ಸಿಗೋದು ಬಹುತೇಕ ಖಚಿತ ಎನ್ನಲಾಗಿದೆ. 

ರಾಜ್ಯಪಾಲ ಆಗುತ್ತಾರಾ ಜಗದೀಶ್‌ ಶೆಟ್ಟರ್‌..?

ಸಂಭಾವ್ಯ ಸಚಿವರ ಪಟ್ಟಿ

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3.ಬಿ ಸಿ ಪಾಟೀಲ್ - ಹಿರೇಕೆರೂರ್

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ

5.ಉಮೇಶ್ ಕತ್ತಿ- ಹುಕ್ಕೇರಿ

6.ಎಸ್.ಟಿ.ಸೋಮಶೇಖರ್- ಯಶವಂತಪುರ

7.ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ

8.ಬೈರತಿ‌ ಬಸವರಾಜ - ಕೆ ಆರ್ ಪುರಂ 

9.ಮುರುಗೇಶ್ ನಿರಾಣಿ - ಬಿಳಿಗಿ

10.ಶಿವರಾಂ ಹೆಬ್ಬಾರ್- ಯಲ್ಲಾಪುರ

11.ಶಶಿಕಲಾ ಜೊಲ್ಲೆ- ನಿಪ್ಪಾಣಿ

12.ಕೆಸಿ ನಾರಾಯಣ್ ಗೌಡ - ಕೆ‌ಆರ್ ಪೇಟೆ

13.ಸುನೀಲ್ ಕುಮಾರ್ - ಕಾರ್ಕಳ

14.ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ

15.ಗೋವಿಂದ ಕಾರಜೋಳ-ಮುಧೋಳ

16.ಮುನಿರತ್ನ- ಆರ್ ಆರ್ ನಗರ

17.ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ 

18.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್ 

19.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

20.ಹಾಲಪ್ಪ ಆಚಾರ್ - ಯಲ್ಬುರ್ಗ

21.ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ 

22.ಕೋಟಾ ಶ್ರೀನಿವಾಸ ಪೂಜಾರಿ - ಎಂ ಎಲ್ ಸಿ 

23.ಪ್ರಭು ಚೌವ್ಹಾಣ್ - ಔರಾದ್

24.ವಿ ಸೋಮಣ್ಣ - ಗೋವಿಂದ್ ರಾಜನಗರ

25.ಎಸ್ ಅಂಗಾರ-ಸುಳ್ಯ

26.ಆನಂದ್ ಸಿಂಗ್ - ಹೊಸಪೇಟೆ

27.ಸಿ ಸಿ‌ ಪಾಟೀಲ್ - ನರಗುಂದ

28.ಬಿಸಿ ನಾಗೇಶ್ - ತಿಪಟೂರು

29.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು