Asianet Suvarna News Asianet Suvarna News

ಶಿಕ್ಷಣ ಕ್ಷೇತ್ರಕ್ಕೆ ಏನಾದ್ರೂ ಕೊಡುಗೆ ನೀಡಿದ್ರೆ ಅದು ಕುಮಾರಸ್ವಾಮಿ ಮಾತ್ರ: ಎಚ್‌ಡಿ ರೇವಣ್ಣ

ಸ್ವಾತಂತ್ರ ಬಂದ ನಂತರ ಶಿಕ್ಷಣ ಕ್ಷೇತ್ರಕ್ಕೆ ಏನಾದ್ರೂ ಕೊಡುಗೆ ನೀಡಿದ್ರೆ, ಉತ್ತಮ ಕೆಲಸ ಮಾಡಿದ್ರೆ ಅದು ಕುಮಾರಸ್ವಾಮಿ ಮಾತ್ರ. ಶಿಕ್ಷಣ ಕ್ಷೇತ್ರಕ್ಕೆ ಮೂಲಭೂತ ‌ಸೌಲಭ್ಯ, ಶಿಕ್ಷಕರ ನೇಮಕಾತಿ ಎಲ್ಲವನ್ನೂ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಅಭಿಪ್ರಾಯಪಟ್ಟರು.

Karnataka Lok sabha election results 2024 latest news India needs PM Modi says HD Revanna rav
Author
First Published Jun 2, 2024, 1:18 PM IST | Last Updated Jun 3, 2024, 6:36 AM IST

ಹಾಸನ (ಜೂ.2) ಸ್ವಾತಂತ್ರ ಬಂದ ನಂತರ ಶಿಕ್ಷಣ ಕ್ಷೇತ್ರಕ್ಕೆ ಏನಾದ್ರೂ ಕೊಡುಗೆ ನೀಡಿದ್ರೆ, ಉತ್ತಮ ಕೆಲಸ ಮಾಡಿದ್ರೆ ಅದು ಕುಮಾರಸ್ವಾಮಿ ಮಾತ್ರ. ಶಿಕ್ಷಣ ಕ್ಷೇತ್ರಕ್ಕೆ ಮೂಲಭೂತ ‌ಸೌಲಭ್ಯ, ಶಿಕ್ಷಕರ ನೇಮಕಾತಿ ಎಲ್ಲವನ್ನೂ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಅಭಿಪ್ರಾಯಪಟ್ಟರು.

ಇಂದು ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಶಾಸಕರು, ಮುಖಂಡರ ಸಬೆ ನಡೆಸಿದ ಬಳಿಕ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಎಲ್ಲ ಶಾಸಕರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ಬಿಜೆಪಿ ಜೆಡಿಎಸ್ ಎರಡೂ ಪಕ್ಷ ಸೇರಿ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಅಭ್ಯರ್ಥಿ ವಿವೇಕಾನಂದ ನೂರಕ್ಕೆ ನೂರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಎಕ್ಸಿಟ್ ಪೋಲ್‌ ಬಗ್ಗೆ ನಾನು ಇವತ್ತು ಏನೂ‌ ಮಾತನಾಡೊಲ್ಲ. ಆದರೆ ಈ ದೇಶ ಉಳಿಯಬೇಕಿದ್ರೆ ಮೋದಿ ಪ್ರಧಾನಿ ಆಗಬೇಕು ಅಷ್ಟೇ. ಲಕ್ಷ್ಮೀ ನರಸಿಂಹ ಇರೋ ವರೆಗೂ ನಮಗೇನೂ ತೊಂದರೆ ಇಲ್ಲ‌ ನಡೀರಿ ಎನ್ನುವ ಮೂಲಕ ಜೆಡಿಎಸ್‌ ಸ್ಪರ್ಧಿಸಿರೋ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಎಚ್‌ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಈ ದೇಶ ಉಳಿಯಬೇಕಿದ್ರೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅಷ್ಟೇ: ಹೆಚ್‌.ಡಿ.ರೇವಣ್ಣ

ದೇಶಕ್ಕೆ ಮೋದಿಯವರ ಅವಶ್ಯಕತೆ ಇದೆ. ನಾನು, ಸ್ವರೂಪ್, ಬಾಲಣ್ಣ ಎಲ್ಲಾ ಸೇರಿ ಮೀಟಿಂಗ್ ಮಾಡಿದ್ದೇವೆ. ನಾಡಿದ್ದು ಬೆಳಗ್ಗೆ ಆರು ಗಂಟೆಗೆ ಕೌಂಟಿಂಗ್ ಹೋಗ್ತಾರೆ. ಎಲ್ಲರೂ ಕೌಂಟಿಂಗ್ ವೇಳೆ ಇರ್ತಾರೆ. ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡೋದು ಇಷ್ಟೇ, ಮಾಧ್ಯಮದವರನ್ನು ಒಳಗೆ ಇಟ್ಟುಕೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಡೈರೆಕ್ಷನ್ ಕೊಡಬೇಕು ಎಂದು ಮನವಿ ಮಾಡುತ್ತೇನೆ. ಪಾರದರ್ಶಕವಾಗಿ ಮತ‌ಎಣಿಕೆ ನಡೆಯಬೇಕು ಎಂದರು. ಇದೇ ವೇಳೆ ಎಕ್ಸಿಟ್ ಪೋಲ್‌ನಲ್ಲಿ ಜೆಡಿಎಸ್‌ಗೆ ಎರಡರಿಂದ ಮೂರು ಗೆಲುವು ವಿಚಾರಕ್ಕೆ, 'ಎಲ್ಲಾ ದೇವರು, ದೇವರು ಎಂದರು.

ಬಿಜೆಪಿ 230 ಸೀಟು ಸಹ ಗೆಲ್ಲೊಲ್ಲ; ಜನ ನಮಗೆ ಅಶೀರ್ವಾದ ಮಾಡ್ತಾರೆ: ಪ್ರಿಯಾಂಕ್ ಖರ್ಗೆ

ನಿನ್ನೆ ರಾತ್ರಿಯೇ ಹರದನಹಳ್ಳಿಯ ಮನೆಯಲ್ಲಿ ತಂಗಿದ್ದ ರೇವಣ್ಣ ಇಂದು ಮನೆ ದೇವರಾದ ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ತೆರಳಿ ಸಂಕಷ್ಟ ಮಾಡುವಂತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Latest Videos
Follow Us:
Download App:
  • android
  • ios