ಪ್ರಧಾನಿ ಮೋದಿಗೆ 2014ರಲ್ಲಿ ಕಾಂಗ್ರೆಸ್‌ ಕೊಟ್ಟ ಖಾಲಿ ಚೆಂಬನ್ನು ನಿನ್ನೆ ಜಾಹೀರಾತು ಕೊಟ್ಟಿದ್ದಾರೆ; ಹೆಚ್.ಡಿ. ದೇವೇಗೌಡ

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ನಿನ್ನೆ ಚೆಂಬು ಜಾಹೀರಾತು ಕೊಡಲಾಗಿತ್ತು. ಆದರೆ, ಈ ಚೆಂಬನ್ನು 2014ರಲ್ಲಿ ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿಗೆ ಹಸ್ತಾಂತರ ಮಾಡಲಾಗಿತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು. 

Karnataka lok Sabha election campaign Former PM HD Deve gowda lashed out on Congress sat

ಚಿಕ್ಕಬಳ್ಳಾಪುರ (ಏ.20): ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ನಿನ್ನೆ ಚೆಂಬು ಜಾಹೀರಾತು ಕೊಡಲಾಗಿತ್ತು. ಆದರೆ, ಈ ಚೆಂಬನ್ನು 2014ರಲ್ಲಿ ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿಗೆ ಹಸ್ತಾಂತರ ಮಾಡಲಾಗಿತ್ತು. ಮೋದಿಯವರು ಅದನ್ನು ಅಕ್ಷಯಪಾತ್ರೆಯನ್ನಾಗಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.

ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಿನ್ನೆ ಈ ರಾಜ್ಯದ ಮುಖ್ಯಮಂತ್ರಿ ಜಾಹೀರಾತು ಕೊಟ್ಟಿದ್ದಾರೆ. ಆದರೆ, ಈ ಚೆಂಬನ್ನು ಯಾರು ಕೊಟ್ಟರು. ಡಾ. ಮನಮೋಹನ್ ಸಿಂಗ್ ಅವರು ಈ ರಾಷ್ಟ್ರವನ್ನು ಆಳ್ವಿಕೆ ಮಾಡಿದರು. ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿದ್ದರು. ಆಗ ದೇಶದಲ್ಲಿ ಕೋಲ್‌ಗೇಟ್, 2ಜಿ ಸ್ಪೆಕ್ಟ್ರಂ, ರೈಲ್‌ಗೇಟ್, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಂಪತ್ತು ಲೂಟಿ ಮಾಡಿದರು. ಆಗ ದೇಶದ ಆರ್ಥಿಕತೆ ಚೆಂಬು ಬರಿದಾಗಿತ್ತು. ಈ ಕಾಂಗ್ರೆಸ್‌ ನಾಯಕರು ಬರಿದಾದ ಚೆಂಬನ್ನು 2014ರಲ್ಲಿ ಕಾಂಗ್ರೆಸ್‌ ನಾಯಕರು ನರೇಂದ್ರ ಮೋದಿಗೆ ಕೊಟ್ಟಿದ್ದಾರೆ. ಆದರೆ, ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿ ಅವರು ಇದನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಎಂದರು.

ಮೋದಿಗೆ ಜಿಂದಾಬಾದ್‌ ಎನ್ನೋರು ಅಪ್ಪಂಗೆ ಹುಟ್ಟಿಲ್ಲ: ಪ್ರೊ.ಬಿ.ಪಿ.ಮಹೇಶ್‌ ಚಂದ್ರಗುರು

ಕಳೆದ 10 ವರ್ಷಗಳಲ್ಲಿ ಬಡವರು, ಹರಿಜನರು, ಗಿರಿಜನರು, ಹಿಂದುಳಿದ ವರ್ಗದವರು, ಮಧ್ಯಮ ವರ್ಗದವರು ಹಾಗೂ ಸಣ್ಣ ಸಣ್ಣ ಸಮಾಜದವರನ್ನು ಮೇಲೆತ್ತುವ ಕೆಲಸವನ್ನು ಈ ನರೇಂದ್ರ ಮೋದಿ ಮಾಡಿದ್ದಾರೆ. ಅವರ ಬಗ್ಗೆ ಹೇಳುವ ಕ್ಷುಲ್ಲಕ ರಾಜಕಾರಣಿ ಸಿಎಂ, ಡಿಸಿಎಂ ಆಗಿದ್ದಾರೆ. ಇವತ್ತು ಜಾಹೀರಾತಿನಲ್ಲಿ ಬರೀ ಚೊಂಬು ಕೊಟ್ಟಿದ್ದಾರೆ. ಈ ದೇಶದಲ್ಲಿ 34 ಯೋಜನೆಗಳನ್ನು ಕೊಟ್ಟಿದ್ದಾರೆ. ಬಡವರಿಗಾಗಿ, ನಿರಿದ್ಯೋಗ ತೊಲಗಿಸಲಿಕ್ಕೆ ಎಷ್ಟು ಯೋಜನೆಗಳನ್ನು ಮಾಡಿದ್ದಾರೆ. ಅವರ ಬಗ್ಗೆ ಮಾತನಾಡ್ತಾರೆ ಎಂದು ಟೀಕೆ ಮಾಡಿದರು.

ನನಗೆ 90 ಮುಗೀತು, ಇನ್ನು 20 ಇದೆ. ಬ್ಲಡ್ ಬಾಯಿಯಲ್ಲಿ ಬರುತ್ತದೆ. ಮೊನ್ನೆ ಕೋಲಾರದಲ್ಲಿ ರಾಹುಲ್‌ ಗಾಂಧಿ ಅವರ ಭಾಷಣದ ಬಗ್ಗೆ ವ್ಯಾಖ್ಯಾನ ಮಾಡಲು ಹೋಗುವುದೇ ಇಲ್ಲ. ನಮ್ಮ ಅಭ್ಯರ್ಥಿ ಮಹೇಶ್ ಬಾಬು ಅವರಿಗೆ ಸಂಬಂಧಪಟ್ಟಂತೆ ಎರಡು ಸಭೆ ಮಾಡಿದ್ದೇವೆ. ಇಂದು ಡಾ. ಸುಧಾಕರ್ ದೊಡ್ಡವರು ಬಂದಿದ್ದಾರೆ. ನಮ್ಮ ಪಕ್ಷದ ಒಬ್ಬ ಶಾಸಕರು, ನಾನು ಬಿಜೆಪಿಗೆ ನೀವು ಹೇಳಿದರೂ ಮಾಡೊಲ್ಲ ಎಂದು ಹೇಳಿದರು. ಆ ಶಾಸಕನ ತಂದೆ ಪಿಳ್ಳಪ್ಪ ಅವರನ್ನು ಒಂದು ರೂ. ಖರ್ಚು ಮಾಡಿಸದೇ ಹೆಗ್ಗಡೆ ವಿರುದ್ಧ ಗೆಲ್ಲಿಸಿದಂತಹ ದೇವೇಗೌಡ ನಿಮ್ಮ ಮುಂದೆ ಹೇಳ್ತಿದೀನಿ. ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ನಾನು ಹೇಳುತ್ತಿದ್ದೇನೆ. ನನ್ನ ಆದೇಶ ಡಾ. ಸುಧಾಕರ್ ಅವರಿಗೆ ಕೊಡಿ. ಈ ದೇಶವನ್ನು ಮುಂದಿನ 5 ವರ್ಷ ಆಡಳಿತ ಮಾಡಲು 400 ಸ್ಥಾನ ಗೆಲ್ಲುವ ಗುರಿ ಮುಟ್ಟಲು ನಾವು 28 ಸ್ಥಾನಗಳನ್ನು ಗೆಲ್ಲಿಸಿ ನಮ್ಮ ಕಾಣಿಕೆಯನ್ನು ನಿಮಗೆ ಒಪ್ಪಿಸುತ್ತೇವೆ ಎಂದರು. 

ಲೋಕಸಭಾ ಚುನಾವಣೆ 2024: ಚಿಕ್ಕಬಳ್ಳಾಪುರದಲ್ಲಿ ಕೆ.ಸುಧಾಕರ್‌, ರಕ್ಷಾ ರಾಮಯ್ಯ ನಡುವೆ ಬಿಗ್‌ ಫೈಟ್‌...!

ಈಗ 5 ಗ್ಯಾರಂಟಿ ಕೊಟ್ಟವರು 25 ಗ್ಯಾರಂಟಿ ಕೊಡ್ತಾರಂತೆ. ಕಳೆದ 10 ವರ್ಷದಲ್ಲಿ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯಲು ಸಾಧ್ಯವಾಗದಂತಹ ಕಾಂಗ್ರೆಸ್‌ನವರು ಈ ದೇಶದಲ್ಲಿ ಅಧಿಕಾರದ ಬಯಕೆ ಪಡುತ್ತಿದ್ದಾರೆ. ಕಳೆದ 10 ವರ್ಷದಲ್ಲಿ ವಿಪಕ್ಷ ಸ್ಥಾನ ಪಡೆಯಲು ಯೋಗ್ಯವಲ್ಲದ ಕಾಂಗ್ರೆಸ್‌ 400 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿರುವ ಮೋದಿಗೆ ರಾಜ್ಯದ 28 ಕೋಲಾರ, ಚಿಕ್ಕಬಳ್ಳಾಪುರ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳಿಸಬೇಕು ಎಂದರು.

ಆದರೆ, ಒಂದೇ ಒಂದು ಚಿಕ್ಕಬಳ್ಳಾಪುರ, ಕೋಲಾರಕ್ಕೆ ಕುಡಿಯುವ ನೀರು ಕೊಡಿ. ಬೆಂಗಳೂರು ನಗರ ಸೇರಿದಂತೆ 10 ಜಿಲ್ಲೆಗಳಿಗೆ ನೀರು ಕೊಡಿ. ನಾವು ರಾಜ್ಯದ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿದರೆ ಕೃಷ್ಣಾ ನದಿಯಿಂದ, ಕಾವೇರಿಯಿಂದಲಾದರೂ ನೀರು ತರಲಿಕ್ಕೆ ಕೇಳಬಹುದು. ನಾವು ಮೋದಿ ಅವರ ಮುಂದೆ ಹೋಗಿ ಎದೆಯೊಡ್ಡಿ ನಮಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಕೊಡಿ ಎಂದು ನೈತಿಕ ಶಕ್ತಿ ಸಾಮರ್ಥ್ಯ ದೊರೆಯುತ್ತದೆ. ಅದಕ್ಕೆ ನೀವು ಅವಕಾಶ ಮಾಡಿಕೊಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.

Latest Videos
Follow Us:
Download App:
  • android
  • ios