ಸಂವಿಧಾನ ಮುಟ್ಟಿದರೆ ರಕ್ತಪಾತವಾಗುತ್ತದೆ. ನಾವು ಗುಲಾಮಗಿರಿ ಒಪ್ಪಿಕೊಳ್ಳುವುದಿಲ್ಲ, 35 ವರ್ಷ ನಾನು ಫ್ರೊಫೆಸರ್‌ ಕೆಲಸ ಮಾಡಿದ್ದೇನೆ. ಮೋದಿ ಜಿಂದಾಬಾದ್‌ ಎನ್ನುವವರು ಅಪ್ಪಂಗೆ ಹುಟ್ಟಿದವರಲ್ಲ ನಾನು ಬಹಿರಂಗವಾಗಿಯೇ ಹೇಳುತ್ತೇನೆ ಯಾರು ಏನೇ ಹೇಳಿದರು ನಮಗೆ ಚಿಂತೆಯಿಲ್ಲ, ನಮಗೆ ಕರ್ನಾಟಕ ಜಿಂದಾಬಾದ್‌ ಬೇಕು ಎಂದ ವಿಶ್ರಾಂತ ಪ್ರಾಧ್ಯಾಪಕ ಬಿ.ಪಿ.ಮಹೇಶ್‌ ಚಂದ್ರಗುರು 

ಮಂಡ್ಯ(ಏ.20): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಂದಾಬಾದ್‌ ಎನ್ನುವವರು ಅಪ್ಪನಿಗೆ ಹುಟ್ಟಿದವರಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ ಬಿ.ಪಿ.ಮಹೇಶ್‌ ಚಂದ್ರಗುರು ವಿವಾದಾತ್ಮಕ ಹೇಳಿಕೆ ನೀಡಿದರು. ಸಂವಿಧಾನ ಮುಟ್ಟಿದರೆ ರಕ್ತಪಾತವಾಗುತ್ತದೆ. ನಾವು ಗುಲಾಮಗಿರಿ ಒಪ್ಪಿಕೊಳ್ಳುವುದಿಲ್ಲ, 35 ವರ್ಷ ನಾನು ಫ್ರೊಫೆಸರ್‌ ಕೆಲಸ ಮಾಡಿದ್ದೇನೆ. ಮೋದಿ ಜಿಂದಾಬಾದ್‌ ಎನ್ನುವವರು ಅಪ್ಪಂಗೆ ಹುಟ್ಟಿದವರಲ್ಲ ನಾನು ಬಹಿರಂಗವಾಗಿಯೇ ಹೇಳುತ್ತೇನೆ ಯಾರು ಏನೇ ಹೇಳಿದರು ನಮಗೆ ಚಿಂತೆಯಿಲ್ಲ, ನಮಗೆ ಕರ್ನಾಟಕ ಜಿಂದಾಬಾದ್‌ ಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಕಿಡಿಕಾರಿದರು.

ಈಗಾಗಲೇ ಕ್ವಿಟ್‌ ಎನ್‌ಡಿಎ ಮತ್ತು ಸೇವ್‌ ಇಂಡಿಯಾ ಎಂಬ ಘೋಷಣೆಯೊಂದಿಗೆ ಸಂವಿಧಾನ ಉಳಿಸುವ ಏಕೈಕ ಪಕ್ಷವಾದ ಕಾಂಗ್ರೆಸ್‌ಗೆ ಹಾಗೂ ಕರ್ನಾಟಕ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬಿಎಸ್‌ವೈರನ್ನು ಜೈಲಿಗಟ್ಟಲು ಎಚ್‌ಡಿಕೆ ಹೋರಾಡಿದ್ರು: ಸಚಿವ ಚಲುವರಾಯಸ್ವಾಮಿ

ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಂವಿಧಾನ ರಕ್ಷಣೆ ಮಾಡಲು ಸಾಧ್ಯ, 1980ರ ದಶಕದಲ್ಲಿ ಆರಂಭಗೊಂಡ ಆರ್‌ಎಸ್‌ಎಸ್‌ ನಿರ್ದೇಶಿತ ಕೋಮುವಾದಿ ರಾಜಕಾರಣ ಭಾರತದ ಸಾಮಾಜಿಕ ನ್ಯಾಯ ಚಳವಳಿಗೆ ಮಾರಣಾಂತಿಕ ಪೆಟ್ಟು ನೀಡಿತು. ಮಂದಿರವಾದಿಗಳು ಧಾರ್ಮಿಕ ಅಲ್ಪಸಖ್ಯಾತರು ಮತ್ತು ಅತಿ ಹಿಂದುಳಿದ ಸಮುದಾಗಳ ಬದುಕಿನ ಜೊತೆ ಚೆಲ್ಲಾಟವಾಡಿ ಕೋಮುವಾದಿ ರಾಜಕಾರಣವನ್ನು ಬಲಪಡಿಸಿ ಸಾಂವಿಧಾನಿಕ ಆಶಯಗಳನ್ನು ಗಾಳಿಗೆ ತೂರಿದರು ಎಂದು ಆರೋಪಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ಈ ದೇಶದಲ್ಲಿ ಆಗುತ್ತಿರುವ ನಡವಳಿಕೆ, ನೀಡುತ್ತಿರುವ ಹೇಳಿಕೆಗಳ ಬಗ್ಗೆ ಚಿಂತನೆ ನಡೆಯಬೇಕು. ಸಾಮಾನ್ಯ ಕುಟುಂಬದ ವ್ಯಕ್ತಿ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಆದರೆ, ಸಂವಿಧಾನದ ಆಶಯಗಳು ಕುಂಡಿತವಾಗುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕಿದ್ದು, ಲೋಕಸಭಾ ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಸಾಹಿತಿ ಕೆ.ಮಾಯಿಗೌಡ ಮಾತನಾಡಿ, ಮೋದಿ ಆಡಳಿತದ ಹತ್ತು ವರ್ಷದ ಅವಧಿಯಲ್ಲಿ ರಾಕ್ಷಸಿ ಮತ್ತು ಪೈಶಾಚಿಕ ಪ್ರಭುತ್ವವಿದೆ. ಪ್ರಧಾನಿ ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ರೈತರು ಸುರಕ್ಷಿತವಾಗಿಲ್ಲ. ಮಣ್ಣಿನ ಮಕ್ಕಳು ಮೋದಿ ಆಡಳಿತದಲ್ಲಿ ಮಸಣದ ಹೂವಾಗುತ್ತಿದ್ದಾರೆ. ರೈತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮಸಣದ ಹೂವಾಗಿದ್ದಾರೆ. ವ್ಯಾಪಾರಿಗಳು, ಬಂಡವಾಳ ಶಾಹಿಗಳು, ರಾಜಪ್ರಭುತ್ವಕ್ಕೆ ಸೇರಿರುವವರನ್ನು ಮಾತ್ರ ಮೋದಿ ಪ್ರಭುತ್ವ ಕಾಪಾಡುತ್ತಿದೆ ಎಂದು ಆಕ್ರೋಶ ವ್ಯಕ್ರಪಡಿಸಿದರು. ಮುಖಂಡರಾದ ದಿಲೀಪ್‌ಕುಮಾರ್, ರಾಮಕೃಷ್ಣ, ನಾಗರಾಜು ಇದ್ದರು.

ಪ್ರೊ.ಮಹೇಶ್ ಚಂದ್ರು ಗುರು ವಿರುದ್ದ ಎಸ್‌ಪಿಗೆ ದೂರು

ಮಂಡ್ಯ: ಮೋದಿಗೆ ಜಿಂದಾಬಾದ್‌ ಹೇಳುವವರು ಅಪ್ಪನಿಗೆ ಹುಟ್ಟಿದವರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮಹೇಶ್‌ಚಂದ್ರಗುರು ವಿರುದ್ಧ ಜಿಲ್ಲಾ ಬಿಜೆಪಿ ಘಟಕ ದೂರು ನೀಡಿದೆ.
ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ಅವರಿಗೆ ದೂರು ಸಲ್ಲಿಸಿರುವ ಬಿಜೆಪಿ ಕಾರ್ಯಕರ್ತರು, ಮಹೇಶ್ ಚಂದ್ರಗುರು ಹೇಳಿಕೆ ಖಂಡನೀಯ. ಅವರ ಹೇಳಿಕೆಯಿಂದ ದೇಶದ ಪ್ರಧಾನಿ‌ ಹಾಗೂ ಕೋಟ್ಯಂತರ ಮತದಾರರಿಗೆ ಅಪಮಾನವಾಗಿದೆ. ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಡಾ.ಮಹೇಶ್‌ಚಂದ್ರಗುರು ಹೇಳಿಕೆಗೆ ಪ್ರೊ.ಜೆ.ಪಿ ಖಂಡನೆ

ಮಂಡ್ಯ: ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಮಹೇಶ್‌ ಚಂದ್ರಗುರು ಪ್ರಧಾನಿ ಮೋದಿಯವರ ವಿಷಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಖಂಡಿಸಿದ್ದಾರೆ.

ಎದುರಾಳಿ ಯಾರೆಂಬುದು ಮುಖ್ಯವಲ್ಲ: ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಸಂದರ್ಶನ!

ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಡಾ.ಮಹೇಶ್‌ಚಂದ್ರಗುರು ಜೊತೆ ಭಾಗವಹಿಸಿ ಸಂವಿಧಾನದ ಬಗ್ಗೆ ಅಭಿಪ್ರಾಯ ತಿಳಿಸಿದ್ದು ಸರಿಯಷ್ಟೇ. ಆದರೆ, ಪ್ರಧಾನಿ ಮೋದಿ ವಿಷಯವಾಗಿ ಡಾ.ಮಹೇಶ್‌ಚಂದ್ರಗುರು ಅವಹೇಳನಕಾರಿಯಾಗಿ ಮಾತನಾಡಿದ್ದು ದಿಗ್ಭ್ರಾಂತಿ ಉಂಟುಮಾಡಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಬ್ಬ ವಿವಿ ಪ್ರಾಧ್ಯಾಫಕ ತನ್ನ ಘನತೆಗೆ ತಕ್ಕ ರೀತಿಯಲ್ಲಿ ನಡೆದುಕೊಳ್ಳುತ್ತಾರೆಂದು ಭಾವಿಸಿದ್ದೆ. ಶಿಷ್ಯ ಹಾಗೂ ಗೌರವಯುತ ಭಾಷೆಯಲ್ಲಿ ಮಾತನಾಡುತ್ತಾರೆಂದು ನಂಬಿ ಅವರ ಜೊತೆ ಗೋಷ್ಠಿಯಲ್ಲಿ ಭಾಗಿಯಾಗಿದ್ದು ನನಗೆ ನಾಚಿಕೆ ಎನಿಸುತ್ತಿದೆ. ಈ ವಿಚಾರವಾಗಿ ಡಾ.ಮಹೇಶ್‌ಚಂದ್ರಗುರು ಅವರ ಮಾತನ್ನು ಖಂಡಿಸುತ್ತಾ ನಾನು ಭಾಗಿಯಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಅವರ ಮಾತಿಗೆ ನನ್ನ ಸಹಮತವಿಲ್ಲವೆಂದು ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.