LIVE: Raichur Elections 2024: ರಾಯಚೂರಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಹೃದಯಾಘಾತದಿಂದ ಸಾವು

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ  ಬಿಜೆಪಿಯಿಂದ ರಾಜಾ ಅಮರೇಶ್ವರ್ ನಾಯಕ್‌ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ನಿಂದ ಕುಮಾರ್ ನಾಯಕ್ ಸ್ಪರ್ಧಿಸುತ್ತಿದ್ದಾರೆ. 

Karnataka Lok Sabha Election 2024 Raichur constituency  Raja Amareshwara Naik vs G Kumar Naik gow

ರಾಯಚೂರು (ಮೇ.7): ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಬಿಜೆಪಿಯಿಂದ ರಾಜಾ ಅಮರೇಶ್ವರ್ ನಾಯಕ್‌ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ನಿಂದ ಕುಮಾರ್ ನಾಯಕ್ ಸ್ಪರ್ಧಿಸುತ್ತಿದ್ದಾರೆ. ರಾಯಚೂರಿನಲ್ಲಿ ಸಂಜೆ 5 ಗಂಟೆವರೆಗೆ  ಶೇ. 59.48 ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ಗಂಟೆವರೆಗೆ  ಶೇ.49.04ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಗೆ ವೇಳೆಗೆ  ಶೇ.35.33ರಷ್ಟು ಮತದಾನವಾಗಿತ್ತು. ಬೆಳಗ್ಗೆ 11ಗಂಟೆ ವರೆಗೆ ಶೇ.15.66  ರಷ್ಟು ಮತದಾನವಾಗಿತ್ತು. ಬೆಳಗ್ಗೆ 9 ಗಂಟೆವರೆಗೆ ಶೇ.8.27ರಷ್ಟು ಮತದಾನವಾಗಿತ್ತು.

ರಾಯಚೂರು ಜಿಲ್ಲೆ ಅರಕೇರಾ ತಾ. ಜಾಗಿರ ಜಾಡಲದಿನ್ನಿ ಗ್ರಾಮದಲ್ಲಿಚುನಾವಣೆ ಕರ್ತವ್ಯ ನಿರತ ಸಿಬ್ಬಂದಿ  ಬಸವರಾಜ್ ಜಗ್ಲಿ(53) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದೇ ಜಾಗಿರ ಜಾಡಲದಿನ್ನಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿದ್ದ ಮೃತ ಬಸವರಾಜ್. ಸದ್ಯ ಚುನಾವಣೆ ಹಿನ್ನೆಲೆ  ಜಾಗಿರ ಜಾಡಲದಿನ್ನಿ ಸರ್ಕಾರಿ ಶಾಲೆಯ ಬೂತ್ ಗೆ ಬಿಎಲ್ ಓ ಆಗಿ ನಿಯೋಜನೆಗೊಂಡಿದ್ದರು. ಇಂದು ಬೆಳಗ್ಗೆಯಿಂದ ಚುನಾವಣೆ ಕರ್ತವ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್ ಮಧ್ಯಾಹ್ನದ ವೇಳೆ ಬಿಪಿ ಲೋ ಆಗಿ ಕುಸಿದುಬಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು.

ಸುರಪುರದಲ್ಲಿ ವಿಧಾನಸಭಾ ಉಪ ಚುನಾವಣೆ: ಸುರಪುರ ಉಪ ಚುನಾವಣೆಗೆ ಮತದಾನ ಹಿನ್ನೆಲೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಪರಸ್ಪರ ಕಲ್ಲು ತೂರಾಟ ನಡೆದ ಘಟನೆ ನಡೆದಿದೆ. ಕಲ್ಲು ತೂರಾಟದ ವೇಳೆ ಓರ್ವನ ತಲೆಗೆ ಗಂಭೀರ ಗಾಯವಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಮತದಾನದ ವೇಳೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೈ-ಕಮಲ ಕಾರ್ಯಕರ್ತರು ಕಲ್ಲು ತೂರಾಟ ನಡೆಸುವ ತನಕ ಬೆಳೆಯಿತು. ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯ್ತು. ಸ್ಥಳಕ್ಕೆ‌ ದೌಡಾಯಿಸಿ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಿದರು. 

ಸುರಪುರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಮಧ್ಯಾಹ್ನ 1 ಗಂಟೆ ವರೆಗೆ   ಶೇ  40.14ರಷ್ಟು ಮತದಾನ ದಾಖಲಾಗಿದೆ. 2023ರಲ್ಲಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಫೆಬ್ರವರಿ 25ರಂದು ಅವರು ನಿಧನ ಹೊಂದಿದ್ದು, ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್‌ನಿಂದ ರಾಜಾ ವೇಣುಗೋಪಾಲ ನಾಯಕ ಮತ್ತು ಬಿಜೆಪಿಯಿಂದ ಮಾಜಿ ಶಾಸಕ, ಸಚಿವ ರಾಜಾ ನರಸಿಂಹ ನಾಯಕ (ರಾಜೂಗೌಡ) ಉಪ ಚುನಾವಣೆ ಅಭ್ಯರ್ಥಿಗಳು.

ಚುನಾವಣಾ ಕಾವು, ಬಿಸಿಲಿನ ಝಳಕ್ಕೆ ತತ್ತರಿಸಿದ ಮತದಾರ ಪ್ರಭುಗಳು. ಬೆಳಗ್ಗೆಯಿಂದ ಉತ್ಸಾಹದಿಂದ ಮತದಾನ ಮಾಡಿದ ಮತದಾರರು. ಸೂರ್ಯನ ಪ್ರತಾಪ ನೆತ್ತಿಗೇರುತ್ತಿದ್ದಂತೆ ನಿಧಾನ ಗತಿಯಲ್ಲಿ ಸಾಗಿದ ಮತದಾನ. ಬಿಸಿಲಿಗೆ ಹೆದರಿ ಮನೆಯಿಂದ ಮತಗಟ್ಟೆಗೆ ಬರಲು ಮತದಾರರು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ಮತಹಟ್ಟೆಗಳು ಮತದಾರರು ಇಲ್ಲದೆ ಖಾಲಿ ಹೊಡೆಯುತ್ತಿದೆ.

ರಾಯಚೂರು ‌ಲೋಕಸಭೆ ಹಾಗೂ ಸುರಪುರ ಉಪ ಚುನಾವಣೆ ಹಿನ್ನೆಲೆ ಮತಗಟ್ಟೆ ಕೇಂದ್ರದ ಆವರಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಸ್ಟೀಕರ್ ಹಂಚಿಕೆ ಆರೋಪ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ 317 ಮತಗಟ್ಟೆಯಲ್ಲಿ‌ ಘಟನೆ. ಬಿಜೆಪಿ ಅಭ್ಯರ್ಥಿಗಳ‌ ಭಾವಚಿತ್ರವುಳ್ಳ ಸ್ಟೀಕರ್ ನೀಡಿ‌ ಮತ ಹಾಕುವಂತೆ ಮತದಾರರಿಗೆ ಒತ್ತಾಯ. ಬಿಜೆಪಿ ಅಭ್ಯರ್ಥಿಗಳಾದ ರಾಜಾ ಅಮರೇಶ್ವರ ನಾಯಕ, ರಾಜುಗೌಡ ಭಾವಚಿತ್ರವುಳ್ಳ ಸ್ಟೀಕರ್ ಹಂಚಿಕೆ ಆರೋಪ. ಬಿಜೆಪಿ ಕಾರ್ಯಕರ್ತರ ನಡೆಗೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತನಿಂದ ಚೀರಾಡಿ ರಂಪಾಟ. ನಿಷೇದಾಜ್ಞೆ ನಡುವೆಯೂ ಬಿಜೆಪಿ ಅಭ್ಯರ್ಥಿಗಳ ಭಾವಚಿತ್ರವುಳ್ಳ ಸ್ಟೀಕರ್ ಹಂಚಿಕೆ ಆರೋಪ. ಸ್ಟೀಕರ್ ಹಂಚಿಕೆಯನ್ನ ತಕ್ಷಣ ತಡೆದ ಕಾಂಗ್ರೆಸ್ ಕಾರ್ಯಕರ್ತರು.

LIVE: Bidar Elections 2024: ಬೀದರ್‌ ಕ್ಷೇತ್ರದಲ್ಲಿ 11 ಗಂಟೆಯ ವರೆಗೆ ಶೇ.22.33ರಷ್ಟು ಮತದಾನ

ರಾಯಚೂರು ಜಿಲ್ಲೆ ಮಾನ್ವಿ ತಾ. ಮುಷ್ಟೂರು ಗ್ರಾಮದಲ್ಲಿ ಮತದಾನ ಬಹಿಷ್ಕಾರ. ಗ್ರಾಮದಲ್ಲಿ‌ ಕುಡಿಯುವ ನೀರಿನ ತೊಂದರೆ ಸರಿಪಡಿಸುವಂತೆ ಆಗ್ರಹ. ಗ್ರಾಮದ ಮತಗಟ್ಟೆ ಸಂಖ್ಯೆ 254 ಹಾಗೂ 255 ರಲ್ಲಿ ಮತದಾನ ಸ್ಥಗಿತ. ಮತದಾನ ಕೇಂದ್ರಕ್ಕೆ ಯಾರೂ ಹೋಗದಂತೆ ಬಂಡಿಗಳನ್ನ ಅಡ್ಡಗಟ್ಟಿ ಬಹಿಷ್ಕಾರ. ನೀರಿನ ಟ್ಯಾಂಕ್, ಕೊಡಗಳನ್ನ ತುಂಬಿ ಬಂಡಿಗಳನ್ನ ತಂದ ಗ್ರಾಮಸ್ಥರು.

ರಾಯಚೂರು ಲೋಕಸಭೆ ಕ್ಷೇತ್ರದ ಮತದಾನ ಹಿನ್ನೆಲೆ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಕೆ.ಇ.ಬಿ ಶಾಲೆಯ ಬೂತ್ ನಂ. 86 ರಲ್ಲಿ ಮತ ಚಲಾವಣೆ ಮಾಡಿದರು.

ಸುರಪುರ ವಿಧಾನಸಭೆಗೆ ಹಾಗೂ ರಾಯಚೂರು ಲೋಕಸಭೆಗೆ ಮತದಾನ ಹಿನ್ನೆಲೆ ಸುರಪುರ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಿಂದ ಮತದಾನ ರಾಜಾ ವೇಣುಗೋಪಾಲ ನಾಯಕ ಕಾಂಗ್ರೆಸ್ ಅಭ್ಯರ್ಥಿ, ತಮ್ಮ ತಾಯಿ, ಪತ್ನಿ ಹಾಗೂ ಸಹೋದರರ ಜೊತೆ ಬಂದು ಮತದಾನ. 

ರಾಯಚೂರಿನಲ್ಲಿ ಒಟ್ಟು‌ 20,10,437 ಮತದಾರರಿದ್ದು, ಪುರುಷ ಮತದಾರರು 9,94,646  ಮತ್ತು ಮಹಿಳಾ ಮತದಾರರು 10,15,158 ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 2203 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು,  ಸೂಕ್ಷ್ಮ‌‌479 ,ಅತಿಸೂಕ್ಷ್ಮ42 ಮತಗಟ್ಟೆಗಳು ಇದೆ. ಒಟ್ಟು‌ 8464 ಸಿಬ್ಬಂದಿ ಚುನಾವಣೆಗೆ ನಿಯೋಜನೆ ಮಾಡಲಾಗಿದೆ. 7 ಡಿಎಸ್ ಪಿ, 28 ಇನ್ಸ್ ಪೆಕ್ಟರ್,110 ಸಬ್ ಇನ್ಸ್ ಪೆಕ್ಟರ್,2500 ಕಾನ್ಸ್ ಟೇಬಲ್ ಸೇರಿ ಒಟ್ಟು 3044 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

India General Elections 2024 Live: ಬೆಳಗ್ಗೆ 11 ಗಂಟೆಗೆ ದೇಶದಲ್ಲಿ ಶೇ.25ರಷ್ಟು ಮತದಾನ ...

Latest Videos
Follow Us:
Download App:
  • android
  • ios