LIVE: Haveri Lok Sabha Elections 2024: ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಆನಂದಸ್ವಾಮಿ ಗಡ್ಡದೇವರ ಮಠ ಸೆಡ್ಡು
ರಾಜಕೀಯ ಅನುಭವಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೊಸಬ ಆನಂದಸ್ವಾಮಿ ಗಡ್ಡದೇವರ ಮಠ ಲೋಕಸಭಾ ಚುನಾವಣೆಯಲ್ಲಿ ಸವಾಲೊಡ್ಡಿದ್ದಾರೆ. ಲಿಂಗಾಯತರ ಪೈಕಿ ಗೆಲ್ಲೋರಾರು?
ಹಾವೇರಿ ಲೋಕಸಭೆ ಮತದಾನದ ಲೈವ್ ಅಪ್ಡೇಟ್ಸ್: ಸಂಜೆ 5 ಗಂಟೆ ವೇಳೆಗೆ ಶೇ.71.90 ಮತದಾನ
ಹಾವೇರಿ (ಮೇ 07): ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಲೋಕಸಭೆಗೆ ತೆರಳಲು ಮುಂದಾಗಿದ್ದಾರೆ. ಭರ್ಜರಿ ಪ್ರಚಾರ ಕಾರ್ಯ ಮಾಡಿರುವ ಬಸವರಾಜ ಬೊಮ್ಮಾಯಿ ಮತದಾರರ ಆಶೀರ್ವಾದಕ್ಕೆ ಕಾಯುತ್ತಿದ್ದಾರೆ. ಇವರಿಗೆ ಪೈಪೋಟಿ ನೀಡಲು ಆನಂದಸ್ವಾಮಿ ಗಡ್ಡದೇವರ ಮಠ ಅವರು ಮುಂದಾಗಿದ್ದಾರೆ. ಆದರೆ, ಮತದಾರರು ಯಾರ ಕೈ ಹಿಡಿಯುತ್ತಾರೆ ಕಾದು ನೋಡಬೇಕಿದೆ.
ರಾಜಕಾರಣದಲ್ಲಿ ತೀವ್ರ ಹಳಬರಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೊಸಬರಾದ ಆನಂದಸ್ವಾಮಿ ಗಡ್ಡದೇವರಮಠ ಪೈಪೋಟಿ ಒಡ್ಡಿದ್ದಾರೆ. ಈಗಾಗಲೇ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿರುವ ಬಿಜೆಪಿ, ಮತ್ತೊಮ್ಮೆ ನಾಲ್ಕನೇ ಬಾರಿಗೆ ಗೆಲುವಿನ ಗೋಲು ಬಾರಿಸಲು ಟೊಂಕ ಕಟ್ಟಿನಿಂತಿದೆ. ಆದರೆ, ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಂದ ವೀರಶೈವ ಲಿಂಗಾಯತ ಅಭ್ಯರ್ಥಿಗಳಿಗೇ ಟಿಕೆಟ್ ನೀಡಿರುವುದರಿಂದ ಪ್ರಬಲ ಪೈಪೋಟಿ ಎದುರಾಗಿದೆ.
India General Elections 2024 Live: ರಾಜ್ಯದಲ್ಲಿ ಕೊನೇ ಹಂತದ ಮತದಾನ, ಹಕ್ಕು ಚಲಾಯಿಸಿದ ಮೋದಿ ...
ಹಾವೇರಿ ಲೋಕಸಭಾ ವ್ಯಾಪ್ತಿಗೆ ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹಾನಗಲ್, ಹಿರೇಕೇರೂರು ವಿಧಾನಸಭಾ ಕ್ಷೇತ್ರಗಳು ಬರಲಿವೆ. ಮತ್ತೊಂದೆಡೆ ಹಾವೇರಿ ಲೋಕಸಭಾ ವ್ಯಾಪ್ತಿಗೆ ಗದಗ ಜಿಲ್ಲೆಯ ಗದಗ, ನರಗುಂದ, ರೋಣ, ಶಿರಹಟ್ಟಿ ವಿಧಾನಸಭಾ ಕ್ಷೇತ್ರಗಳ ಮತದಾರರು ಮತ ಚಲಾವಣೆ ಮಾಡಲಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ವಿವರ:
ಒಟ್ಟು ಅಭ್ಯರ್ಥಿಗಳು - 14
ಒಟ್ಟು ಮತದಾರರು - 17,92,774
ಪುರುಷ ಮತದಾರರು - 9,02,119
ಮಹಿಳಾ ಮತದಾರರು - 8,90,572
ಇತರೆ - 83
ಒಟ್ಟುಮತಗಟ್ಟೆಗಳು- 1,982
ಮತದಾನ ದಿನ ಕಾಂಗ್ರೆಸ್‌ಗೆ ಜೈಕಾರ ಕೂಗಿ ಅಜ್ಜಿ ಕಾಲಿಗೆ ಬಿದ್ದ ಆನಂದಸ್ವಾಮಿ: ಹಾವೇರಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಪತ್ನಿ ದೀಪಾ ಗಡ್ಡದೇವರಮಠ, ಪುತ್ರಿ ಚಿನ್ಮಯಿ ಸೇರಿ ಕುಟುಂಬ ಸಮೇತರಾಗಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ಕಟ್ಟಡದ ಮತಗಟ್ಟೆ ಸಂಖ್ಯೆ 109ರಲ್ಲಿ ಮತದಾನ ಮಾಡಿದರು. ಮತದಾನದ ನಂತರ ಹೊರಬಂದ ಆನಂದಸ್ವಾಮಿ ಕಾಂಗ್ರೆಸ್‌ಗೆ ಜೈಕಾರ ಕೂಗಿ ವೃದ್ಧೆಯ ಕಾಲಿಗೆ ಬಿದ್ದರು. ಆನಂದಸ್ವಾಮಿ ಅವರಿಗೆ ವಿಜಯವಾಗಲಿ ಎಂದು ಅಜ್ಜಿ ಹಾರೈಸಿದರು. ಈ ವೇಳೆ ನಾನು ಗೆಲ್ಲುತ್ತೇನೆ, ಆದರೆ ಇಂತಿಷ್ಟೇ ಮತಗಳಿಂದ ಗೆಲ್ಲುತ್ತೇನೆಂದು ಹೇಳಾಗಲ್ಲ ಎಂದು ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
Kalaburagi election 2024: ಶೋಕದ ಮನೆಯಿಂದ ಬಂದು ಮತದಾನ ಮಾಡಿದ ಮಾಜಿ ಶಾಸಕ ದಿ.ನಾಗರೆಡ್ಡಿ ಕುಟುಂಬಸ್ಥರು
ಭಾರತದ ಭವಿಷ್ಯವನ್ನು ಮುಂದಿನ 5 ವರ್ಷಗಳ ಕಾಲ ಸುಭದ್ರವಾಗಿಸುವ ನಿಟ್ಟಿನಲ್ಲಿ ಇಂದು ನನ್ನ ತವರು ಕ್ಷೇತ್ರ ಶಿಗ್ಗಾಂವಿಯ ಸರ್ಕಾರಿ ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ, ನನ್ನ ಮತ ಚಲಾಯಿಸಿದೆ. ಮತದಾನವು ಪವಿತ್ರ ಕರ್ತವ್ಯವಾಗಿದ್ದು ಪ್ರತಿಯೊಬ್ಬರೂ ಈ ಪವಿತ್ರ ಕಾರ್ಯದಲ್ಲಿ ತಪ್ಪದೇ ಭಾಗಿಯಾಗಿ, ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.