ದೇಶ್ ಹಮಾರಾ ಹೈ ಎಂದು ವೀರಾವೇಷದ ಭಾಷಣ ಮಾಡುತ್ತಾ ಡಯಾಸ್ ಗಾಜು ಒಡೆದ ಜಮೀರ್ ಅಹ್ಮದ್!
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ಗೋಕಾಕನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರೋಷಾವೇಶದಿಂದ ಭಾಷಣ ಮಾಡುವ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಕೈಯಿಂದ ಗುದ್ದಿ ಡಯಾಸ್ ಅಳವಡಿಸಿದ್ದ ಗಾಜು ಒಡೆದು ಹಾಕಿದ ವಿಚಿತ್ರ ಘಟನೆ ನಡೆದಿದೆ.
ಬೆಳಗಾವಿ (ಏ.27): ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ಗೋಕಾಕನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರೋಷಾವೇಶದಿಂದ ಭಾಷಣ ಮಾಡುವ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಕೈಯಿಂದ ಗುದ್ದಿ ಡಯಾಸ್ ಅಳವಡಿಸಿದ್ದ ಗಾಜು ಒಡೆದು ಹಾಕಿದ ವಿಚಿತ್ರ ಘಟನೆ ನಡೆದಿದೆ.
ಗೋಕಾಕನ ಕೆಜಿಎನ್ ಹಾಲ್ ನಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ಮತಯಾಚನೆ ಮಾಡಲಾಗುತ್ತಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಜಮೀರ್ ಅಹ್ಮದ್, ಸಾರೇ ಜಹಾಂಸೇ ಅಚ್ಚಾ.. ನಾವೆಲ್ಲ ಒಂದು ಹೇಳುತ್ತಲೇ ರೋಷಾವೇಶದಿಂದ ಭಾಷಣ ಮಾಡಿದರು.
'ಲೇ ಇಕ್ಬಾಲ್' ಅಂತಾ ನಾನೂ ಅನ್ನಬಹುದು ಆದರೆ ಅದು ನನ್ನ ಸಂಸ್ಕೃತಿ ಅಲ್ಲ: ಜನಾರ್ದನ ರೆಡ್ಡಿ
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ. ಒಂದು ಹಂತಕ್ಕೆ ವಿಪರೀತ ಕೋಪಗೊಂಡಿದ್ದ ಸಚಿವ ಜಮೀರ್, 'ದೇಶ ಹಮಾರಾ ಹೈ ಹಮಾರಾ ಹೈ' ಎನ್ನುತ್ತ ಕೈಯಿಂದ ಡಯಾಸ್ ಗೆ ಗುದ್ದಿದ ಒಡೆದಿರುವ ಸಚಿವ ಜಮೀರ್, ಜಮೀರ್ ಒಡೆತಕ್ಕೆ ನುಚ್ಚುನೂರಾದ ಡಯಾಸ್‌ಗೆ ಅಳವಡಿಸಿದ್ದ ಗಾಜು. ಗಾಜು ಪುಡಿ ಪುಡಿಯಾಗುತ್ತಿದ್ದಂತೆ ಘೋಷಣೆ ಕೂಗತೊಡಗಿದ ಕಾಂಗ್ರೆಸ್ ಕಾರ್ಯಕರ್ತರು. ವೇದಿಕೆಯಲ್ಲಿ ನಾಯಕರು ಕ್ಷಣಕಾಲ ಕಕ್ಕಾಬಿಕ್ಕಿಯಾಗಿದ್ದಂತೂ ನಿಜ.
ದೇಶದಲ್ಲಿ ಮೋದಿ ಅಲೆ ಇದ್ಯಾ? ಈ ಬಾರಿ ಹಾಗೇನು ಕಾಣ್ತಿಲ್ಲ ಎಂದ ಜಮೀರ್ ಅಹ್ಮದ್