'ಲೇ ಇಕ್ಬಾಲ್' ಅಂತಾ ನಾನೂ ಅನ್ನಬಹುದು ಆದರೆ ಅದು ನನ್ನ ಸಂಸ್ಕೃತಿ ಅಲ್ಲ: ಜನಾರ್ದನ ರೆಡ್ಡಿ
ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಶಾಸಕ, ಇಕ್ಬಾಲ್ ಅನ್ಸಾರಿ ನಡುವೆ ಮಾತಿನ ಸಮರ ಮುಂದುವರಿದಿದ್ದು, ಇಕ್ಬಾಲ್ ಅನ್ಸಾರಿ ಹೇಳಿಕೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ತಿರುಗೇಟು ನೀಡಿದ್ದಾರೆ.
ಕೊಪ್ಪಳ (ಏ.27): ನನ್ನ ಬಗ್ಗ ಇಕ್ಬಾಲ್ ಅನ್ಸಾರಿ ಏಕವಚನದಲ್ಲಿ ಮಾತಾಡ್ತಾರೆ. ಜನಾರ್ದನ ರೆಡ್ಡಿ ಅಂತವ ಇಂತವನು ಅಂತಾ. ನಾನೂ ಕೂಡ "ಲೇ ಇಕ್ಬಾಲ್' ಅನ್ನಬಹುದು. ನಾನು ಅವರಂತೆ ಏಕವಚನದಲ್ಲಿ ಮಾತಾಡಬಹುದು. ಆ ರೀತಿ ಮಾತಾಡೋದು ನನಗೆ ದೊಡ್ಡದಲ್ಲ. ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಗಂಗಾವತಿ ಮಾಜಿ ಶಾಸಕ, ಸಚಿವ ಇಕ್ಬಾಲ್ ಅನ್ಸಾರಿ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ಕೊಪ್ಪಳದ ಆನೆಗೊಂದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಇಕ್ಬಾಲ್ ಅನ್ಸಾರಿಗೆ ಸಂಸ್ಕೃತಿ ಸಂಸ್ಕಾರ ಇಲ್ಲದೆ ಇರಬಹುದು ಅದಕ್ಕಾಗಿ ಬಾಯಿಗೆ ಬಂದಂತೆ ಮಾತಾಡ್ತಾರೆ. ಆದರೆ ನಮಗೆ ಸಂಸ್ಕೃತಿ ಇದೆ. ಇಕ್ಬಾಲ್ ಅನ್ಸಾರಿ ಸ್ವಂತ ಮನೆಯವರಿಗೇ ಏನು ಮಾಡಿದ್ದಾರೆ ಅಂತಾ ಎಲ್ಲರಿಗೂ ಗೊತ್ತಿದೆ. ಇಕ್ಬಾಲ್ ಅನ್ಸಾರಿ ಹುಚ್ಚನಾಗಿದ್ದಾನೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ. ಹೀಗಾಗಿ ಏನೇನೋ ಮಾತಾಡ್ತಾನೆ ಕಿಡಿಕಾರಿದರು.
Reddy VS Tangadagi: ಮೋದಿ ಅಂದ್ರೆ ಶಿವರಾಜ್ ತಂಗಡಗಿ ಕಿವಿಯಲ್ಲಿ ಮುಳ್ಳು ಚುಚ್ಚಿದಂತಾಗುತ್ತೆ:ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ ಬಿಜೆಪಿ ಹೋಗ್ತಾನೆ ಅಂತಾ ಮೊದಲೇ ಹೇಳಿದ್ದೆ ಅಂತಾ ಮಾತಾಡಿದ್ದಾನೆ. ಹೌದು ನಾನು ಸ್ವಂತ ಮನೆಗೆ ವಾಪಸ್ ಬಂದಿದ್ದೇನೆ. ನಾನು ಗಂಗಾವತಿ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಬಿಜೆಪಿಗೆ ಬಂದಿದ್ದೇನೆ. ನಾನು ಗಂಗಾವತಿ ಜನರಿಗೆ ಕೊಟ್ಟ ಮಾತುಗಳನ್ನ, ಕೆಲಸಗಳನ್ನ ಮಾಡಿಕೊಡ್ತೀನಿ. ಕ್ಷೇತ್ರದ ಜನರಿಗೆ ಕೊಟ್ಟ ಮಾತುಗಳನ್ನು ಬಿಟ್ಟು ಓಡಿಹೋಗುವ ಜಾಯಮಾನ ನನ್ನದಲ್ಲ ಎಂದು ಇಕ್ಬಾಲ್ ಅನ್ಸಾರಿ ಟೀಕೆಗೆ ಜನಾರ್ದನ ರೆಡ್ಡಿ ತಿರುಗೇಟು ನೀಡಿದರು
ಇನ್ನು ಸಿಎಂ ಬದಲಾವಣೆ ವಿಚಾರ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ, ಮಂಡ್ಯದಲ್ಲಿ ಪ್ರಚಾರ ಸಂದರ್ಭದಲ್ಲಿ ರಾಹುಲ್ ಗಾಂಧಿಯವರೇ ಹೇಳಿದ್ದಾರೆ. ಅದು ಬಾಯಿ ತಪ್ಪಿ ಬಂದ ಮಾತಲ್ಲ, ಮನಸಲ್ಲಿರೋದನ್ನ ಹೇಳಿದ್ದಾರೆ. ಎಲ್ಲಿ ಹೋದ್ರೂ ಸಿದ್ದರಾಮಯ್ಯರನ್ನ ಕುರ್ಚಿಯಿಂದ ಇಳಿಸ್ತಾರೆ ಅಂತಾ ಹೇಳುತ್ತಿದ್ದಾರೆ ಸಿದ್ದರಾಮಯ್ಯ ಅವರು ಸಿಎಂ ಆಗಿರೋದಕ್ಕೆ ಡಿಕೆಶಿ ವಿರೋದ ಇದೆ. ಕಾಂಗ್ರೆಸ್ ಜಾತಿ ಜಾತಿಗಳ ನಡುವೆ ಜಗಳ ಬೆಂಕಿ ಹಚ್ಚುವ ಕೆಲಸ ಮಾಡ್ತಿದೆ. ಬಿಜೆಪಿಯವರದು ಒಂದೇ ಗುರಿ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡುವುದು ಎಂದರು.
ಗಂಗಾವತಿಯಲ್ಲಿನ ಬಿಕ್ಕಟ್ಟು ಕಾಂಗ್ರೆಸ್ಸಿಗೆ ಲಾಭ: ಸಚಿವ ಶಿವರಾಜ ತಂಗಡಗಿ
ಮಂಗಳ ಸೂತ್ರ ಕಿತ್ತುಕೊಂಡವರು ಯಾರು ಎಂಬ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಜನಾರ್ದನ ರೆಡ್ಡಿ, ಕಾಂಗ್ರೆಸ್ ಪಕ್ಷ ಅಂದ್ರೆ ಸಂಸ್ಕೃತಿ ಸಂಸ್ಕಾರ ಇಲ್ಲದ ಪಕ್ಷ. ಬಿಕೆ ಹರಿಪ್ರಸಾದ ಚಲಾವಣೆಯಲ್ಲಿ ಇಲ್ಲದ ನಾಣ್ಯ. ಹೀಗಾಗಿ ಅವರ ಹೇಳಿಕೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಬಿಕೆ ಹರಿಪ್ರಸಾದ್, ಶಿವರಾಜ ತಂಗಡಗಿ ಸೇರಿ ಕಾಂಗ್ರೆಸ್ ನಾಯಕರಿಗೆ ಸಂಸ್ಕೃತಿ ಸಂಸ್ಕಾರ ಎಂಬುದು ಇಲ್ಲ. ಶಿವರಾಜ ತಂಗಡಗಿ ಬಗ್ಗೆ ನಾನು ಹೆಚ್ಚಿನ ಮಾತು ಆಡಿದ್ರೆ ಆನೆ ಇರುವೆ ಬಗ್ಗೆ ಮಾತನಾಡಿದಂತೆ ಆಗತ್ತೆ. ತಂಗಡಗಿಗೆ ಮೋದಿ ಮೋದಿ ಎಂದವರ ಕಪಾಳಕ್ಕೆ ಬಾರಿಸಿ ಅಂತಾರೆ, ತಂಗಡಗಿ ಅವರಿಗೆ ತಿರುಗಿ ಬಾರಿಸಿ ಅಂತ ನಾನು ಹೇಳೊಲ್ಲ ಮೋದಿಗೆ ಮತ ಹಾಕುವ ಮೂಲಕ ಅವರ ಕೆನ್ನೆಗೆ ಬಾರಿಸಿ ಅಂತ ಹೇಳುತ್ತಿದ್ದೇನೆ ಎಂದು ತಿರುಗೇಟು ನೀಡಿದರು.