Asianet Suvarna News Asianet Suvarna News

Mandya Lok Sabha elections: ಜೆಡಿಎಸ್ ಭದ್ರಕೋಟೆ ಮಂಡ್ಯ ಉಳಿಸಿಕೊಂಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಬರೋಬ್ಬರಿ 2 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

Karnataka Lok Sabha constituency JDS stronghold Mandya retained by former CM HD Kumaraswamy sat
Author
First Published Jun 4, 2024, 1:29 PM IST

ಮಂಡ್ಯ (ಜೂ.04): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಬರೋಬ್ಬರಿ 2 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ಸೋಲಿಸಿದ್ದರು. ಇದಾದ ನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ 5 ಕ್ಷೇತ್ರ ಕಾಂಗ್ರೆಸ್‌ ಗೆದ್ದರೆ, ಮತ್ತೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ, ಜೆಡಿಎಸ್ ಭದ್ರಕೋಟೆಯಲ್ಲಿ ಛಿದ್ರ ಮಾಡಿದ ಕಾಂಗ್ರೆಸ್‌ ವಿರುದ್ಧ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಅಖಾಡ ಪ್ರವೇಶಿಸಿದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು 2 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಸೋಲಿಸುವ ಮೂಲಕ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬ ಪಟ್ಟವನ್ನು ಮತ್ತೊಮ್ಮೆ ಉಳಿಸಿಕೊಂಡಿದೆ.

Live Blog: ಪೆನ್ ಡ್ರೈವ್ ಕಮಾಲ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣಂಗೆ ಸೋಲು

ಹಳೆ ಕರ್ನಾಟಕದಲ್ಲಿ ಸ್ವಲ್ಪ ಸಮಸ್ಯೆ ಇತ್ತು. ನಾನು ಪ್ರಾರಂಭಿಕ ಹಂತದಲ್ಲಿ ಹಲವಾರು ನಾಯಕರ ಜೊತೆ ಮೊದಲೇ ಮಾತಾಡಿದ್ದೆ. ಈ ಮೂರೂ ಕ್ಷೇತ್ರ ಗಳನ್ನು ಗೆದ್ದಿದ್ರೆ ನಮ್ಮ ನಿರೀಕ್ಷೆ ಸಂಖ್ಯೆ ಮುಟ್ಟಬಹುದಿತ್ತು. ಚುನಾವಣೆ ನಡೆಯುವ ಸಂಧರ್ಭದಲ್ಲಿ ಸ್ವಲ್ಪ ಹಣದ ಸಮಸ್ಯೆ ಕೂಡಾ ಆಗಿತ್ತು. ಮೋದಿ ಹೆಸರಿನಲ್ಲಿ ಗೆಲ್ತೀವಿ ಅನ್ನೋ ಅತಿಯಾದ ನಂಬಿಕೆ ಯಿಂದ ಸ್ವಲ್ಪ ಮೈಮರೆತಿದ್ದಾರೆ. ಕಾಂಗ್ರೆಸ್ ಇಪ್ಪತ್ತು ಸ್ಥಾನ ಗೆಲ್ತೀವಿ ಅಂತಾ ಇದ್ದರು. ಜೆಡಿಎಸ್ ಅನ್ನು ಮುಗಿಸ್ತೀವಿ ಅಂತಾ ಇದ್ದರು. ಜೆಡಿಎಸ್ ಬಗ್ಗೆ ಕಳೆದ ವಿಧಾನಸಭೆ ಚುನಾವಣೆ ಬಳಿಕ ಏನೆಲ್ಲಾ ಮಾತಾಡಿದ್ರು ಅದನ್ನೂ ಮರೆಯಲ್ಲ ಎಂದು ಕಿಡಿಕಾರಿದರು. 

ನಾನು ನೂರಾ ಮುವತ್ತಾರು ಸ್ಥಾನ ಗೆದ್ದಿದ್ದೀನಿ. ಜೆಡಿಎಸ್ ಕೇವಲ ಹತ್ತೊಂಬತ್ತು ಸ್ಥಾನ ಮಾತ್ರ ಗೆದ್ದಿದೆ ಎಂಬ ದುರಂಹಕಾರದ ಮಾತುಗಳನ್ನು ಆಡಿದ್ದರು. ಅದಕ್ಕೆ ಉತ್ತರ ಈ ಫಲಿತಾಂಶ. ಬೆಂಗಳೂರು ಗ್ರಾಮಾಂತರ , ಮಂಡ್ಯ, ಕೋಲಾರ ಜಿಲ್ಲೆಯ ಮತದಾರರಿಗೆ  ಕೃತಜ್ಞತೆ ಸಲ್ಲಿಸುತ್ತೇನೆ. ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಡಿನ ಜನತೆಗೆ ಮನವಿ ಮಾಡ್ತೀನಿ. ನಮಗೆ ಸಿಕ್ಕ ಆಶೀರ್ವಾದ, ನಾಡಿನ ಅಭಿವೃದ್ಧಿ ಗೆ  ಮೋದಿ ಜೊತೆ ಮಾತನಾಡಿ ಶ್ರಮಿಸುತ್ತೇವೆ. ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಇಷ್ಟು ಸ್ಥಾನ ಪಡೆಯಲು ನಮ್ಮ ಕೆಲವು ಸಮಸ್ಯೆ ಗಳೇ ಕಾರಣ. ಗ್ಯಾರಂಟಿ ಯೋಜನೆಗಳಿಂದ ಇಷ್ಟು ಸ್ಥಾನ ಪಡೆದಿದೆ ಅಂತಾ ನಾನಂತೂ ಹೇಳಲ್ಲ. ನಮ್ಮ ಮೈತ್ರಿಯನ್ನು ಜನ ಒಪ್ಪಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

Mysuru Lok Sabha constituency : ಗೆಲ್ಲುವ ಮುನ್ನವೇ ಸಂಸದ ಯದುವೀರ್ ಒಡೆಯರ್ ನಾಮಫಲಕಕ್ಕೆ ಪೂಜೆ ಸಲ್ಲಿಕೆ

ದೇಶದ 18ನೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 2 ಹಂತದ ಮತದಾನ ನಡೆದಿದೆ. ಮೊದಲ ಹಂತದಲ್ಲಿ ಏ.26ರಂದು 14 ಕ್ಷೇತ್ರಗಳಾದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮತದಾನವಾಗಿದೆ. ಎರಡನೇ ಹಂತದಲ್ಲಿ ಮೇ 7ರಂದು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಸೇರಿ 14 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

ರಾಜ್ಯದಲ್ಲಿ ಒಟ್ಟು 5,47,25,675 ಮತದಾರರಿದ್ದು, ಈ ಪೈಕಿ 3,86,57,725 ಜನರು ಮತದಾನ ಮಾಡುವ ಮೂಲಕ ಶೇ.70.64 ಜನರು ಮತ ಚಲಾಯಿಸಿದ್ದಾರೆ. ಮತದಾನ ನಡೆದ ಒಂದು ತಿಂಗಳ ಬಳಿಕ ಇಂದು (ಜೂ.4ರಂದು) ಫಲಿತಾಂಶ ಪ್ರಕಟವಾಗುತ್ತಿದೆ. ಇದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶ ಅತ್ಯಂತ ಕುತೂಹಲವನ್ನು ಕೆರಳಿಸಿದೆ. ಮತ್ತೊಂದೆಡೆ ಮೈಸೂರಿನ ಮಹಾರಾಜರು ಸ್ಪರ್ಧಿಸಿದ ಕ್ಷೇತ್ರ, ಅಶ್ಲೀಲ ವಿಡಿಯೋ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ ಹಾಸನ ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಹೆಚ್ಚು ಜನರ ಚಿತ್ತ ನೆಟ್ಟಿದೆ. ಸುಮಾರು 10ಕ್ಕೂ ಅಧಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರು ತಮ್ಮ ಸಹೋದರರು, ಮಕ್ಕಳು, ಪತ್ನಿಯರನ್ನು ಕಣಕ್ಕಿಳಿಸಿದ್ದು 2ನೇ ತಲೆಮಾರಿನ ರಾಜಕೀಯ ಬೆಳೆಸಲು ಮುಂದಡಿಯಿಟ್ಟಿದ್ದಾರೆ.

Latest Videos
Follow Us:
Download App:
  • android
  • ios