ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಸಿದ್ದರಾಮಯ್ಯನವರು ಅನಿವಾರ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಾ. ಎಚ್‌.ಸಿ. ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ನಾಯಕತ್ವ ಬೆಳೆಸುವವರೆಗೂ ಅವರು ರಾಜಕಾರಣದಲ್ಲಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.

ಬೆಂಗಳೂರು : ‘ಮುಂದಿನ ಚುನಾವಣೆ ಗೆಲ್ಲಬೇಕು ಎಂದರೆ ನಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗೆ ಬೇಕೇ ಬೇಕು. ಮತ್ತೊಂದು ಅವಧಿವರೆಗೂ ಅವರು ರಾಜಕಾರಣದಲ್ಲಿ ಮುಂದುವರೆಯಬೇಕು. ಮುಂದಿನ ನಾಯಕತ್ವ ಬೆಳೆಸುವವರೆಗೆ ಇರಬೇಕು’ ಎಂದು ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಡಾ.ಎಚ್.ಸಿ. ಮಹದೇವಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ‘ಈ ಹಿಂದೆಯೂ ಹೇಳಿದ್ದೆ. ಈಗಲೂ ಹೇಳ್ತೇನೆ, ಸಿದ್ದರಾಮಯ್ಯನವರು ನಮಗೆ ಬೇಕೇ ಬೇಕು. ಚುನಾವಣೆಗೆ ನಿಲ್ಲದಿದ್ದರೂ ಸರಿಯೇ. ರಾಜಕೀಯ ನಿವೃತ್ತಿಯಾದರೂ ಅವರು ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಎಂದರೆ ಅವರು ಇರಲೇಬೇಕು. ಅವರು ಇದ್ದರೆ ಚುನಾವಣೆ ಗೆಲ್ಲಲು ಅನುಕೂಲ. ಹೀಗಾಗಿ ಮುಂದಿನ ನಾಯಕತ್ವ ಬೆಳೆಸೋವರೆಗೆ ಇರಬೇಕು’ ಎಂದು ಹೇಳಿದರು.\

ಇದನ್ನೂ ಓದಿ: Karnataka News Live: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಭಾರೀ ಕಾಲ್ತುಳಿತ, 15 ಮಹಾಕುಂಭ ಭಕ್ತರು ಬಲಿ!...

ಸಿದ್ದು ಬೇಡ ಅಂತ ಹೇಳೋರ್‍ಯಾರು?: ಮಹದೇವಪ್ಪ

ಸಚಿವ ಡಾ। ಎಚ್.ಸಿ.ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು ಮಾಸ್‌ ಲೀಡರ್‌. ಮಾಸ್ ಲೀಡರ್ ಬೇಡ ಎಂದು ಹೇಳುವುದು ಯಾರು? ಎಲ್ಲಾ ರೀತಿಯಲ್ಲೂ ಅವರ ನಾಯಕತ್ವ ಪಕ್ಷಕ್ಕೆ ಅನಿವಾರ್ಯವಿದೆ. ನಾವೆಲ್ಲರೂ ಅವರ ಜೊತೆ ಸೇರಬೇಕು. ಮುಂದಿನ ಚುನಾವಣೆಯಲ್ಲೂ ಅವರು ಸಕ್ರಿಯರಾಗಿರಬೇಕು ಎಂದು ಹೇಳಿದರು.