ಬೆಂಗಳೂರು, (ಡಿ.22): ಕಳೆದ ಮೂರು ತಿಂಗಳಿಂದ ಮುಂದೂಡುತ್ತಾ ಬಂದಿರುವ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.

ಕಾಂಗ್ರೆಸ್ ಇಬ್ಬರು ಹಾಲಿ ಸಚಿವರಿಗೆ ಕೊಕ್ ಕೊಟ್ಟು ಎಂಟು ಸಚಿವರಿಗೆ ಮಂತ್ರಿ ಭಾಗ್ಯ ಕಲ್ಪಿಸಿದ್ದು, ಇಂದು (ಶನಿವಾರ) ಸಂಜೆ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ.

ಹೊರಟ್ಟಿಗೆ ಸಚಿವ ಸ್ಥಾನ: ಗುಟ್ಟು ಬಿಟ್ಟು ಕೊಡದ ಸಿಎಂ!

ಇನ್ನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್ ನ ಕೆಲ ಶಾಸಕರು ಮಂತ್ರಿಗಿರಿ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಬಿ.ಸಿ. ಪಾಟೀಲ್ ಹಾಗೂ ಹಿರಿಯ ಶಾಸಕ ರಾಮಲಿಂಗರೆಡ್ಡಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಇಷ್ಟು ಕಾಂಗ್ರೆಸ್ ಕಥೆಯಾಗಿದ್ದರೆ, ಇನ್ನು ಜೆಡಿಎಸ್ ವಾಸ್ತು ಮೊರೆ ಹೋಗಿದ್ದು, ಜೆಡಿಎಸ್ ನಿಂದ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಮೂಲಗಳು ತಿಳಿಸಿವೆ.

8 ಜನರಿಗೆ ಮಂತ್ರಿ, ನಿಗಮ ಮಂಡಳಿಗೆ 20 ಶಾಸಕರು: ಇಲ್ಲಿದೆ ಪಟ್ಟಿ

ಈ ಮೊದಲೇ ಜೆಡಿಎಸ್ ಹೇಳಿದಾಗೆ ಶೂನ್ಯ ಮಾಸದಲ್ಲಿ ನಮ್ಮದು ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಹೇಳಿತ್ತು. ಅದ್ರರಂತೆ ಇಂದು ಕೇವಲ ಕಾಂಗ್ರೆಸ್ ನ ನೂತನ ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸಸಲಿದ್ದಾರೆ.

ಇದ್ರಿಂದ ಸಚಿವ ಸ್ಥಾನ ಸಿಗುತ್ತೆ ಎಂದು ಕಾದು ಕುಳಿತ್ತಿದ್ದ ಜೆಡಿಎಸ್ ಶಾಸಕರಿಗೆ ನಿರಾಸೆಯಾಗಿದೆ. ಸಿಎಂ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಇದೆ. ಹೀಗಾಗಿ ಅಗತ್ಯಬಿದ್ದಾಗ ಸಂಪುಟ ವಿಸ್ತರಣೆ ಮಾಡ್ತೇವೆ ಎಂದು ಶಾಸಕ ಡಾ. ಕೆ ಅನ್ನದಾನಿ ಬೆಂಬಲಿಗರಿಗೆ ಸ್ಪಷ್ಟನೆ ಎಚ್.ಡಿ.ದೇವೇಗೌಡ ಸ್ಪಷ್ಟನೆ ನಡಿದ್ದರೆ.