ಸಚಿವ ಆನಂದ್ ಸಿಂಗ್, ಶಾಸಕ ಜೆ.ಎನ್.ಗಣೇಶ್ ರಾಜಿ: ಹಲ್ಲೆ ಪ್ರಕರಣ ರದ್ದು
* ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ನಡುವಿನ ಹಲ್ಲೆ ಪ್ರಕರಣ ರದ್ದು
* ಸಚಿವ ಆನಂದ್ ಸಿಂಗ್, ಶಾಸಕ ಜೆ.ಎನ್.ಗಣೇಶ್ ರಾಜಿ
* ಪ್ರಕರಣ ರದ್ದುಗೊಳಡಿಸಿದ ಹೈಕೋರ್ಟ್ ಏಕಸದಸ್ಯ ಪೀಠ
ಬೆಂಗಳೂರು, (ಅ.04): ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಸಚಿವ ಆನಂದ್ ಸಿಂಗ್ (Anand Singh) ಮೇಲೆ ಹಲ್ಲೆ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಹಲ್ಲೆ ಪ್ರಕರಣದಲ್ಲಿ ಸಚಿವ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ (JN ganesh) ರಾಜಿಯಾಗಿದ್ದಾರೆ. ಈ ಕಾರಣಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಇಂದು (ಅ.04) ಪ್ರಕರಣವನ್ನು ರದ್ದುಗೊಳಿಸಿದೆ.
ಗಲಾಟೆ ರಾಜಿ: ಗಣೇಶ್ ವಿರುದ್ಧ ಯೂಟರ್ನ್ ಹೊಡೆದ್ರಾ ಆನಂದ್ ಸಿಂಗ್..?
ಇದು ಹಣಕಾಸಿನ ವ್ಯಾಜ್ಯಕ್ಕೆ ನಡೆದ ಜಗಳವಷ್ಟೇ. ಕೊಲೆ ಯತ್ನದ ಉದ್ದೇಶ ಅಥವಾ ಪ್ರಯತ್ನ ಇರಲಿಲ್ಲ. ಆದರೆ ಈಗಾಗಲೇ ಇಬ್ಬರೂ ರಾಜಿ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೊಲೆ ಯತ್ನ ಸೆಕ್ಷನ್ ಅನ್ವಯವಾಗುವುದಿಲ್ಲವೆಂದು ಕಂಪ್ಲಿ ಗಣೇಶ್ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಅವರ ವಾದವನ್ನು ಒಪ್ಪಿದ ಕೋರ್ಟ್ ಕೊಲೆಯತ್ನ ಪ್ರಕರಣ ಅನ್ವಯವಾಗುವುದಿಲ್ಲವೆಂದು ಆದೇಶ ನೀಡಿ ಪ್ರಕರಣವನ್ನು ರದ್ದುಗೊಳಿಸಿದೆ.
2019ರ ಜನವರಿ 19ರ ರಾತ್ರಿ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಮತ್ತು ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ನಡುವೆ ಗಲಾಟೆ ನಡೆದಿತ್ತು. ಶಾಸಕ ಗಣೇಶ್ ಈಗ ಸಚಿವರಾಗಿರುವ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಿಸಲಾಗಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣದಲ್ಲಿ ಜೆನ್ ಗಣೇಶ್ ಅವರನ್ನ ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.