ಬೆಂಗಳೂರು, [ಜ.22]: ಶಾಸಕರಾದ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಫೆಬ್ರವರಿ 3ಕ್ಕೆ ಮುಂದೂಡಿದೆ. 

ಕಂಪ್ಲಿ ಶಾಸಕ ಗಣೇಶ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ಬಿಡದಿ ರೆಸಾರ್ಟ್ ನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಇದೀಗ ಪರಸ್ಪರ ರಾಜಿ-ಸಂಧಾನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗಣೇಶ್ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಶಾಸಕ ಗಣೇಶ್‌ ಜತೆ ರಾಜಿಗೆ ಆನಂದ್‌ ಸಿಂಗ್‌ ಒಪ್ಪಿಗೆ

ಆದ್ರೆ, ಮೊನ್ನೆ ಹೈಕೋರ್ಟ್ ಖುದ್ದು ಬುಧವಾರ ಇಬ್ಬರು ನ್ಯಾಯಾಲಕ್ಕೆ ಹಾಜರಾಗಬೇಕೆಂದು ಹೇಳಿತ್ತು. ಅದರಂತೆ ಇಂದು [ಬುಧವಾರ] ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ರಾಜಿಸಂಧಾನ ಮೂಲಕ ಬಗೆಹರಿಸಿಕೊಳ್ಳುವ ಸಂಬಂಧ  ನ್ಯಾಯಾಲಯಕ್ಕೆ ಹೇಳಿಕೆ ನೀಡಬೇಕಿದ್ದ ದೂರುದಾರ ಆನಂದ್ ಸಿಂಗ್ ಗೈರು ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಕೋರ್ಟ್ ಈ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿತು.

ಆನಂದ್ ಸಿಂಗ್  ಕೋರ್ಟ್ ಗೆ ಹಾಜರಾಗಲು ಅವರ ಪರ ವಕೀಲ 10 ದಿನ ಕಾಲಾವಕಾಶ ಕೋರಿದ್ದರು. ಆ ಮನವಿ ಮೇರೆಗೆ  ಹೈಕೋರ್ಟ್ 10 ದಿನಗಳ ಕಾಲಾವಕಾಶ ‌ನೀಡಿತ್ತು.