Asianet Suvarna News Asianet Suvarna News

ಮುಸ್ಲಿಂ ಮತಾಂಧರ ಓಲೈಸುವ ಕಾಂಗ್ರೆಸ್ ಸರ್ಕಾರ ಹಿಂದೂಗಳ ಪ್ರಶ್ನೆಗಳಿಗೆ ಉತ್ತರಿಸಲಿ: ಆರ್. ಅಶೋಕ್

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯನ್ನು 'ಸಣ್ಣ ಘಟನೆ' ಎಂದು ಕರೆದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಮತಾಂಧರ ಓಲೈಕೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಪೊಲೀಸರ ಕ್ರಮ ಮತ್ತು ಸರ್ಕಾರದ ನಿಲುವಿನ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

Karnataka Govt Should be answer Hindus questions about Nagamangala Ganesh Visarjan riots sat
Author
First Published Sep 13, 2024, 4:49 PM IST | Last Updated Sep 13, 2024, 4:49 PM IST

ಬೆಂಗಳೂರು (ಸೆ.13): ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯ ನಂತರ ಗೃಹ ಸಚಿವರು ನೀಡುವ ಬೇಜವಾಬ್ದಾರಿ ಹೇಳಿಕೆ ಗಮನಿಸಿದರೆ ರಾಜ್ಯದಲ್ಲಿರ ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ತಾಲಿಬಾನ್ ಸರ್ಕಾರ ಜಾರಿಯಲ್ಲಿದೆ ಎಂಬುದು ಸಾಬೀತಾಗಿತ್ತದೆ. ನಾಗಮಂಗಲ ಘಟನೆಯಿಂದ ರಾಜ್ಯದ ಜನತೆ ಆತಂಕಕ್ಕೆ ಒಳಗಾಗಿದ್ದು, ರಾಜ್ಯದ ಹಿಂದೂ ಜನತೆಗೆ ತಾಲಿಬಾನ್ ಸರ್ಕಾರದಿಂದ ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ನಾಗಮಂಗಲ ಪಟ್ಟಣದಲ್ಲಿ ಹಿಂದುಗಳನ್ನೇ ಗುರಿಯಾಗಿಸಿಕೊಂಡು, ಗಣೇಶ ವಿಸರ್ಜನೆಯ ಮೆರವಣಿಗೆ ನಡೆಯುವುದನ್ನೇ ಕಾದು ಕುಳಿತು ಕಲ್ಲುಗಳ ರಾಶಿ, ಪೆಟ್ರೋಲ್ ಬಾಂಬು, ತಲ್ವಾರುಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಪೂರ್ವ ನಿಯೋಜನೆಯಂತೆ ದುಷ್ಕೃತ್ಯ ನಡೆದಲಾಗಿದೆ. ಇದೊಂದು ಆಕಸ್ಮಿಕ ಮತ್ತು ಸಣ್ಣ ಘಟನೆ ಎಂದು ಕಾಂಗ್ರೆಸ್ ಸರ್ಕಾರ ತಿಪ್ಪೆ ಸಾರಿಸುವ ಮಾತಾಡುತ್ತಾ, ಮುಸ್ಲಿಂ ಮತಾಂಧರನ್ನ ಓಲೈಕೆ ಮಾಡಲು ಮುಂದಾಗಿದೆ. ಈ ಮೂಲಕ ಹಿಂದೂಗಳನ್ನು ಬಲಿಕೊಡಲೂ ಸಿದ್ಧ ಎಂದು ನಿರ್ಧಾರ ಮಾಡಿದಂತೆ ಕಂಡುಬರುತ್ತಿದೆ. ನಾಗಮಂಗಲದ ಘಟನೆಯೇ ಹೀಗಾದರೆ ನಮ್ಮ ಗತಿ ಏನು? ಎಂದು ಹಿಂದೂಗಳ ಮನಸ್ಸಿನಲ್ಲಿ ಕಾಡುತ್ತಿರುವ ಪ್ರಶ್ನೆಗಳಿಗೆ ಕೈ ಸರ್ಕಾರ ಉತ್ತರ ಕೊಡಬೇಕು ಎಂದು ಆರ್. ಅಶೋಕ್ ಆಗ್ರಹಿದಿದ್ದಾರೆ.

ಮದುವೆಯಾಗದಿದ್ರೂ 'ಮುದ್ದು ಹೆಂಡ್ತಿ' ಆಗಿದ್ದ ಪ್ರವಿತ್ರಾ ಗೌಡಗೆ ಪ್ರೀತಿಯ 'ಸುಬ್ಬ'ನಾಗಿದ್ದ ದರ್ಶನ್!

  • 1) ಕಳೆದ ವರ್ಷ ಅದೇ ಸ್ಥಳದಲ್ಲೇ ಗಲಭೆಯಾಗಿದ್ದರೂ ಈ ವರ್ಷ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಿಲ್ಲವೇಕೆ?
  • 2) ಇಲ್ಲಿ ಕೆಲವರು ನೀಚ ಕೃತ್ಯ ಎಸಗುತ್ತಾರೆ ಎಂಬ ಇತಿಹಾಸವಿದ್ದರೂ ಗುಪ್ತಚರ ವಿಭಾಗದವರು ಮಾಹಿತಿ ಕೊಡಲಿಲ್ಲವೇಕೆ? ಇದು ಪೊಲೀಸ್ ಇಲಾಖೆ ವೈಫಲ್ಯವೇ? ಅಥವಾ ಗುಪ್ತಚರ ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಲಾಯಿತೇ?
  • 3) ಗಣಪತಿ ಮೆರವಣಿಗೆಗೆ ರೂಟ್ ಮ್ಯಾಪ್ ಹಾಕಿಕೊಟ್ಟು ಅದಕ್ಕೆ ಅನುಮತಿ ನೀಡಿದ್ದರೂ, ಪೊಲೀಸರು  ಯಾಕೆ ದಾರಿಯುದ್ದಕ್ಕೂ ಭದ್ರತೆ ನೀಡಲಿಲ್ಲ?
  • 4) ನಾಗಮಂಗಲ ಪಟ್ಟಣದಲ್ಲಿದ್ದ ಡಿಎಆರ್ ವಾಹನವನ್ನು ಮೆರವಣಿಗೆ ಆರಂಭದ ಬಳಿಕ ಬೇರೆಡೆ ಕಳುಹಿಸಿದ್ದೇಕೆ?
  • 5)ಬುಧವಾರ ರಾತ್ರಿ ಗಲಭೆ ಆರಂಭವಾಗಿ 2 ಗಂಟೆಗಳಾದರೂ ಕೇವಲ 40 ಕಿ.ಮೀ. ದೂರದ ಹೆಚ್ಚಿನ ಸಿಬ್ಬಂದಿಯನ್ನು ಏಕೆ ತುರ್ತಾಗಿ ಕರೆಸಿಕೊಳ್ಳಲಿಲ್ಲ?
  • 6) ಪೊಲೀಸರ ಅನುಮತಿ ಪಡೆದು ಗಣೇಶ ಪ್ರತಿಷ್ಠಾಪನೆ ಮಾಡಿದವರನ್ನೇ ಎಫ್ ಐಆರ್ ನಲ್ಲಿ ಎ-1 ಮಾಡಿರುವುದೇಕೆ?
  • 7) ಗಲಭೆಯಲ್ಲಿ ಕೇಸಿನಲ್ಲಿ ಎ 1 ನಿಂದ ಎ23 ವರೆಗೆ ಕೇವಲ ಹಿಂದೂಗಳ ಮೇಲೆ ಎಫ್ ಐಆರ್ ಮಾಡಲಾಗಿದೆ ಯಾಕೆ? ನಂತರ ಮುಸ್ಲಿಮರ ಹೆಸರು ಸೇರಿಸಿರುವುದು ಯಾವ ಸೀಮೆ ನ್ಯಾಯ? ಗಲಭೆಕೋರರನ್ನ ರಕ್ಷಿಸಲು ಸರ್ಕಾರ ಮುಂದಾಗಿರುವುದು ತುಷ್ಟೀಕರಣದ ಪರಮಾವಧಿಯೇ?
  • 8) ಮಸೀದಿ ಅಥವಾ ದರ್ಗಾ ಮುಂದೆ ಗಣೇಶೋತ್ಸವ ಮೆರವಣಿಗೆ ಹಾದು ಹೋಗಬಾರದು ಎನ್ನುವುದಕ್ಕೆ ಕರ್ನಾಟಕವೇನು ಇಸ್ಲಾಮಿಕ್ ರಾಷ್ಟ್ರವೇ? 
  • 9) ಪೆಟ್ರೋಲ್ ಬಾಂಬ್, ಕಲ್ಲುಗಳ ರಾಶಿ, ತಲ್ವಾರ್ ಹಾಗೂ ಮಾರಾಕಾಸ್ತ್ರಗಳನ್ನು ಮಸೀದಿಯಲ್ಲಿ ಸಂಗ್ರಹಿಸಿ ದಾಂಧಲೆ ಆರಂಭಿಸಿದ್ದನ್ನು ಗಮನಿಸಿದರೆ ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟವಾಗುವುದಲ್ಲವೇ? 
  • 10) ರಾತ್ರಿ ನಡೆದ ಗಲಭೆಯಲ್ಲಿ ಅಪಾಯಕಾರಿ ವಸ್ತುಗಳ ಬಳಕೆಯಾದರೂ, 25 ಕೋಟಿ ರೂ. ಮೊತ್ತದ ಆಸ್ತಿ-ಪಾಸ್ತಿ ನಷ್ಟವಾಗಿದ್ದರೂ, ಗೃಹ ಸಚಿವರಿಗೆ ಇದೊಂದು ಸಣ್ಣ ಘಟನೆ. ಆಕಸ್ಮಿಕ ಘಟನೆ ಅನ್ನಿಸಲು ಕಾರಣವೇನು? ಗೃಹ ಸಚಿವರಿಗೆ ಸಣ್ಣ ಘಟನೆಯೆಂಬ ರೀತಿ ಮಾಹಿತಿ ನೀಡಿದವರಾರು? ಈ ರೀತಿ ಹೇಳಲು ಅವರ ಮೇಲೆ ಒತ್ತಡ ಹಾಕಿದ್ದಾರೆಯೇ? ಅಥವಾ ಕಾಂಗ್ರೆಸ್ ಸರ್ಕಾರ ಯಾರನ್ನಾದರೂ ರಕ್ಷಿಸುತ್ತಿದೆಯೇ?
  • 11) ದೊಡ್ಡ ಅನಾಹುತವಾಗಿದ್ದರೂ ಬೆಂಗಳೂರಿನಿಂದ ಕೇವಲ 130 ಕಿ.ಮೀ. ದೂರದ ನಾಗಮಂಗಲಕ್ಕೆ ಗೃಹ ಸಚಿವರು ಏಕೆ ಭೇಟಿ ನೀಡಿಲ್ಲ?

ಆಕಸ್ಮಿಕ ಗೃಹ ಸಚಿವ ಮಾತಿಗೆ ಪರಂ ಗರಂ, 'ಹೌದು ನಾನು ಆಕಸ್ಮಿಕ ಏನೀಗ?' ಎಂದು ಪ್ರಶ್ನೆ!

ನಾಗಮಂಗಲ ಗಲಭೆಯ ನಂತರ ತಪ್ಪು ಎಫ್ಐಆರ್ ದಾಖಲಿಸಲು ಕಾರಣರಾದ ಪೊಲೀಸರನ್ನು ಅಮಾನತು ಮಾಡಬೇಕು. FIR ನಲ್ಲಿ ಕೇವಲ ಹಿಂದೂಗಳನ್ನ ಟಾರ್ಗೆಟ್ ಮಾಡುವ ಹುನ್ನಾರ ಕೈಬಿಡದಿದ್ದರೆ ನಾಗಮಂಗಲದಲ್ಲಿ ಬಿಜೆಪಿ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios