ಬೆಂಗಳೂರು, (ನ.25): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆಯಂತೆ ನಿಗಮ-ಮಂಡಳಿಗಳಿಗೆ ನೇಮಕ‌ ಆದೇಶದ ಸರಣಿ ಮುಂದುವರಿದಿದೆ.

ಸಂಪುಟ ವಿಸ್ತರಣೆ ಮೊದಲೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಿಸಿದ ಸರ್ಕಾರ

ಮಂಗಳವಾರ ಸಂಜೆ ನಿಗಮ ಮಂಡಳಿಯ ಒಂದು ಪಟ್ಟಿ ಪ್ರಕಟಿಸಲಾಗಿತ್ತು. ಇದೀಗ ಮತ್ತೊಂದು ಪಟ್ಟಿ ಬಿಡುಗಡೆ ಮಾಡಲಾಗಿದೆ. ಸಂಪುಟ ವಿಸ್ತರಣೆಯೋ ಪುನಾರಚನೆಯೋ ಎನ್ನುವ ಗೊಂದಲಗಳ ಮಧ್ಯೆಯೇ ನಿಗಮ ಮಂಡಳಿ ನೇಮಕ ಮಾಡಲಾಗುತ್ತಿದೆ,

ಯಾರಿಗೆ ಯಾವ ನಿಗಮ..?
* ಮಹಾದೇವ ಶಿವಪ್ಪ ಅಳಗವಾಡಿ - ಕರ್ನಾಟಕ ವಿದ್ಯುತ್ ನಿಗಮ ಪ್ರಸರಣ ನಿಗಮ 
* ಮಂಜುನಾಥ್ ಬಿನ್ ಪಿಳ್ಳಪ್ಪ - ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ 
* ಕಿಶೋರ್ ಬಿ ಆರ್ - ಮಂಗಳೂರು ವಿದ್ಯುತ್ ಸರಬರಾಜು
* ಪ್ರವೀಣ್ ಹೆಗಡೆ - ಮಂಗಳೂರು ವಿದ್ಯುತ್ ಸರಬರಾಜು ನಿಗಮ
*ಮಹಾದೇವಸ್ವಾಮಿ ಎಲ್ ಆರ್ - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ
* ಶರತ್ ಚಂದ್ರ ಸುನೀಲ್ ಬಿ - ಕರ್ನಾಟಕ ನವೀಕರಿಸಬಹುದಾದ ನಿಗಮ
* ಗುರುಪ್ರಸಾದ್ ಬಿ. ಬಿನ್ ಸಿ ಎನ್ ಬೆಳ್ಳಪ್ಪ - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ
* ಅಣ್ಣಾಸಾಹೇಬ್ ದೇಸಾಯಿ - ಹುಬ್ಬಳ್ಳಿ ವಿದ್ಯುತ್ ಸರಬರಾಜು
* ಪ್ರಶಾಂತ್ ಮಾಕನೂರ್- ಕೆಪಿಟಿಸಿಎಲ್ ..
* ವೆಂಕಟೇಶ್ ಕೆ , ತೋಟಗಾರಿಕೆ ಇಲಾಖೆಗೆ 
* ಶಂಕರ್ ಗೌಡ ಬಿರಾದರ್ - ಲಿಂಬೆ ಅಭಿವೃದ್ಧಿ ಮಂಡಳಿ
* ನಂದನ್ ಡಿ ಜೆ - ದಿ.‌ನರ್ಸರಿಮೆನ್ ಕೋ- ಆಪರೆಟಿವ್ ಸೊಸೈಟಿ 
* ಮಂಜುನಾಥ್ ಬಿ ಎನ್ - ಬಸವರಾಜು - ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ
* ಅಭಿಲಾಷ್ ಕಾರ್ತಿಕ್ ಬಿನ್ ವಿ ಸುದರ್ಶನ್ - ಕರ್ನಾಟಕ ದ್ರಾಕ್ಷರಸ ಮಂಡಳಿ
* ಬೈಲಹೊಂಗಲದ ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್- ಕರ್ನಾಟಕ ರಾಜ್ಯ ಎಣ್ಣೆ, ಬೀಜ ಬೆಳೆಗಾರರ ಮಹಾ ಮಂಡಳಿ 
* ಮಲ್ಲಪ್ಪ ಬೆಂಡಿಗೇರಿ- ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ‌ ನಿಗಮ