ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸಭೆ ನಡೆಸಿದ ಬೆನ್ನಲ್ಲೇ ಇಂದು (ಮಂಗಳವಾರ) ರಾಜ್ಯ ಸರ್ಕಾ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನ ಭರ್ತಿ ಮಾಡಿದೆ
ಬೆಂಗಳೂರು, (ನ.24): ಹಲವು ದಿನಗಳಿಂದ ಬಾಕಿ ಉಳಿದಿರುವ ಸಂಪುಟ ಕಸರತ್ತು ಮುಂದುವರೆದಿದೆ. ಸಂಪುಟ ವಿಸ್ತರಣೆಯೋ ಅಥವಾ ಪುನರಚನೆಯೋ ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯೆ ರಾಜ್ಯ ಸರ್ಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಿಸಿದೆ.
ಒಂದೆಡೆ ಸಂಪುಟ ಕಸರತ್ತು ಜೋರಾಗಿದ್ದು, ಆಕಾಂಕ್ಷಿಗಳು ಸಹ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಿಎಂ ಬಿಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿದ್ದು, ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಸಂಪುಟ ಕಸರತ್ತು ಮಧ್ಯೆಯೇ ಶಾಸಕ ಎಸ್.ಆರ್.ವಿಶ್ವನಾಥ್‌ಗೆ ಮಹತ್ವದ ಹುದ್ದೆ
ಇದರ ಬೆನ್ನಲ್ಲೇ ಇದೀಗ ಸಿಎಂ ಬಿಎಸ್ ಯಡಿಯೂರಪ್ಪನವರು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಿಸಿ ಆದೇಶ ಹೊರಡಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಿಗಮ ಮಂಡಳಿಗಳ ನೂತನ ಅಧ್ಯಕ್ಷರು
* ಬಿ.ಎಸ್. ಪರಮಶಿವಯ್ಯ - ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
* ಎಸ್.ಆರ್.ವಿಶ್ವನಾಥ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
* ಚಂದು ಪಾಟೀಲ್ - ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ
* ಬಿ.ಸಿ.ನಾಗೇಶ್ - ಕಾರ್ಮಿಕ ಕಲ್ಯಾಣ ಮಂಡಳಿ
* ಬಿ.ಕೆ. ಮಂಜುನಾಥ್ - ನಾರು ಅಭಿವೃದ್ಧಿ ಮಂಡಳಿ
* ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ - ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
* ಕಿರಣ್ ಕುಮಾರ್ - ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
* ತಾರಾ ಅನುರಾಧ - ಅರಣ್ಯ ಅಭಿವೃದ್ಧಿ ನಿಗಮ
* ಎಸ್.ಆರ್.ಗೌಡ - ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
* ಕೆ.ವಿ. ನಾಗರಾಜ್ - ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ
* ತಿಪ್ಪೇಸ್ವಾಮಿ - ಕಾಡಾ ನಿಗಮ
* ರಘು ಆರ್ - ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ
* ಬಾಬು ಪತ್ತಾರ್ - ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ
* ಜೆ.ಕೆ ಗಿರೀಶ್ ಉಪ್ಪಾರ್ - ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ
* ಎಸ್ ನರೇಶ್ ಕುಮಾರ್ - ಸವಿತಾ ಸಮುದಾಯ ಅಭಿವೃದ್ಧಿ ನಿಗಮ
* ತಮ್ಮೇಶ ಗೌಡ ಎಚ್.ಸಿ - ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ
* ದುರ್ಯೋಧನ ಮಹಲಿಂಗಪ್ಪ - ಡಾ.ಬಿ.ಆರ್.ಅಬೇಂಡ್ಕರ್ ನಿಗಮ ನಿಯಮಿತ
* ಎಚ್. ಹನುಮಂತಪ್ಪ - ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
* ಎಂ ರಾಮಚಂದ್ರ - ಕೇಂದ್ರ ಪರಿಹಾರ ಸಮಿತಿ
* ಸಿ. ಮುನಿಕೃಷ್ಣ - ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ
* ಸಿದ್ದನಗೌಡ ಈರ್ಶವರಗೌಡ ಚಿಕ್ಕನಗೌಡ್ರು - ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ
* ಲಿಂಗರೆಡ್ಡಿ ಬಿ.ಎನ್. ಗುರುಂಡಗೌಡ ಬಾಸರೆಟ್ಟಿ - ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ
* ವಿಜುಗೌಡ ಎಸ್ ಪಾಟೀಲ್ - ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 24, 2020, 9:16 PM IST