ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ನೀಡಿದ ಭರವಸೆಯಂತೆ 10ಕೆಜಿ ಅಕ್ಕಿಗೆ ಹಣ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ನವದೆಹಲಿ (ಜೂ.29): ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ನೀಡಿದ ಭರವಸೆಯಂತೆ 10ಕೆಜಿ ಅಕ್ಕಿಗೆ ಹಣ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. 5 ಕೆಜಿ ಅಕ್ಕಿಗೆ ಬದಲಾಗಿ ಹಣ ನೀಡುವ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆಗೆ ಮುನ್ನ ಸಿದ್ದರಾಮಯ್ಯನವರು ಬಡವರಿಗೆ 10 ಕೆಜಿ ಉಚಿತ ಅಕ್ಕಿ ಕೊಡುತ್ತೀವಿ ಎಂದಿದ್ದರು. 5 ಕೆಜಿ ಅಕ್ಕಿಯನ್ನು ಕೇಂದ್ರ ಸರಕಾರ ಕೊಡುತ್ತಿದೆ. ಹೀಗಾಗಿ, 10 ಕೆಜಿ ಅಕ್ಕಿಗೆ ಸಿದ್ದರಾಮಯ್ಯ ದುಡ್ಡು ಕೊಡಬೇಕು ಎಂದರು.
ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಕೇಂದ್ರ ಸರಕಾರ 5 ಕೆಜಿ ಅಕ್ಕಿ ಕೊಡುತ್ತಿದೆ ಎಂಬುದನ್ನು ಅವರು ಒಪ್ಪಿಕೊಂಡಂತಾಗಿದೆ. ಇಷ್ಟುದಿವಸ ಸಿದ್ದರಾಮಯ್ಯನವರು ನಾವೇ ಅಕ್ಕಿ ಕೊಟ್ಟಿದ್ದು ಎಂದು ಜನರ ದಾರಿ ತಪ್ಪಿಸುತ್ತಿದ್ದರು. ಸಿದ್ದರಾಮಯ್ಯನವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಗ್ಯಾರಂಟಿ ಕಾರ್ಡ್‌ನಲ್ಲಿ ಸಹಿ ಹಾಕುವಾಗ ಈ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದರು. ಆಹಾರ ಭದ್ರತೆ ಕಾಯ್ದೆಗೆ ನಿಯಮ ರೂಪಿಸಿದ್ದು, ಅದನ್ನು ಜಾರಿಗೆ ತಂದಿದ್ದು ಮೋದಿ ಸರ್ಕಾರ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದೆ.
ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ಇದಕ್ಕಾಗಿ ಅದು ಬಫರ್ ಸ್ಟಾಕ್ ಇಟ್ಟುಕೊಳ್ಳಲೇಬೇಕು. ನೈಸರ್ಗಿಕ ವಿಕೋಪ, ತುರ್ತು ಪರಿಸ್ಥಿತಿಯಲ್ಲಿ ಈ ಅಕ್ಕಿಯನ್ನು ಕೊಡಬೇಕು. ಹೀಗಾಗಿ, ಬಿಜೆಪಿ ಸರಕಾರ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿಯನ್ನು ಕೊಟ್ಟಿಲ್ಲ. ಒಂದು ವೇಳೆ ಕರ್ನಾಟಕದಂತೆ ಬೇರೆ ರಾಜ್ಯಗಳೂ 10 ಕೆಜಿ ಅಕ್ಕಿ ಕೇಳಿದರೆ ಕೊಡುವುದು ಎಲ್ಲಿಂದ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿ, ನಾವು ಸೋತಿರಬಹುದು, ಆದರೆ, ನಮ್ಮದು ಐಡಿಯಾಲಜಿ ಪಾರ್ಟಿ. ಪಕ್ಷದ ಯಾವುದೇ ನಾಯಕರು ಬಹಿರಂಗವಾಗಿ ಇಂತಹ ವಿಚಾರಗಳ ಬಗ್ಗೆ ಮಾತನಾಡಬಾರದು ಎಂದು ಸಲಹೆ ನೀಡಿದರು.
ಆರು ತಿಂಗಳಲ್ಲಿ ಸಮಯ ಬದಲಾವಣೆ: ಆರೇಳು ತಿಂಗಳಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ವೇಳಾ ಪಟ್ಟಿಬದಲು ಮಾಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು. ಇಲ್ಲಿಯ ರೈಲು ನಿಲ್ದಾಣದಲ್ಲಿ ಮಂಗಳವಾರ ವಂದೇ ಭಾರತ್ ರೈಲಿಗೆ ಚಾಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ರೈಲು ನಿರ್ವಹಣೆ ವ್ಯವಸ್ಥೆ ಬೆಂಗಳೂರಿನಲ್ಲಿ ಮಾತ್ರ ಇದೆ. ಹೀಗಾಗಿ, ನಿರ್ವಹಣೆಗಾಗಿ ರಾತ್ರಿ ರೈಲು ಬೆಂಗಳೂರಿಗೆ ತಲುಪಬೇಕು. ಹುಬ್ಬಳ್ಳಿಯಲ್ಲೂ ನಿರ್ವಹಣಾ ವ್ಯವಸ್ಥೆಗೆ ಟೆಂಡರ್ ಕರೆದಿದ್ದು ಇನ್ನೂ ಸಮಯ ತೆಗೆದುಕೊಳ್ಳಲಿದೆ.
ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಆರ್.ನರೇಂದ್ರ
ಹೀಗಾಗಿ, ಆರೇಳು ತಿಂಗಳು ವರೆಗೂ ಅವಳಿ ನಗರದ ಜನತೆ ಸಮಯಕ್ಕೆ ತುಸು ಹೊಂದಾಣಿಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಇದರೊಂದಿಗೆ ಈಗಿರುವ ಆರೂವರೆ ಗಂಟೆ ಪ್ರಯಾಣದ ಅವಧಿಯೂ ಬರುವ ದಿನಗಳಲ್ಲಿ ಕಡಿಮೆ ಆಗಲಿದೆ ಎಂದರು. ವಿದೇಶಗಳಲ್ಲಿ ಇಂತಹ ರೈಲುಗಳನ್ನು ನೋಡುತ್ತಿದ್ದೆವು. ಇದೀಗ ಪ್ರಧಾನಿ ಮೋದಿ ಅವರ ಪ್ರಯತ್ನದ ಫಲವಾಗಿ ನಮ್ಮಲ್ಲೂ ಐಷಾರಾಮಿ ರೈಲುಗಳು ಬಂದಿದ್ದು ಧಾರವಾಡ-ಬೆಂಗಳೂರು ಮಧ್ಯೆದ ಅಂತರ ಮತ್ತಷ್ಟುಕಡಿಮೆಯಾಗಿದೆ ಎಂದರು.
