ಸಿದ್ದು ಕ್ಯಾಬಿನೆಟ್ ಸಚಿವರ ಸಂಭಾವ್ಯ ಪಟ್ಟಿ, ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವರಿಗೆ ಸ್ಥಾನ!
ಬಿಜೆಪಿಯಿಂದ ಕಾಂಗ್ರೆಸ್ ಸೇರಿ ಗೆಲುವು ಸಾಧಿಸಿದ ಲಕ್ಷ್ಣಣ ಸವದಿ ಸೇರಿದಂತೆ ಹಲವು ನಾಯಕರಿಗೆ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಮಂತ್ರಿಗಿರಿ ನೀಡಲು ಪ್ಲಾನ್ ರೆಡಿಯಾಗಿದೆ. ಸಿದ್ದು ಕ್ಯಾಬಿನೆಟ್ ಸಚಿವರ ಸಂಭಾವ್ಯರ ಪಟ್ಟಿ ಇಲ್ಲಿದೆ.
ಬೆಂಗಳೂರು(ಮೇ.18): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾಂಗ್ರೆಸ್‌ನಲ್ಲಿ ಶುರುವಾದ ಸಿಎಂ ಪೈಪೋಟಿ ಇಂದು ಕೊನೆಗೊಂಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ ಸಿಗಲಿದೆ ಅನ್ನೋ ಕುತೂಹಲ ಹೆಚ್ಚಾಗಿದೆ. ಇತ್ತ ಆಕಾಂಕ್ಷಿಗಳು ಲಾಬಿ ಶುರುವ ಮಾಡಿದ್ದಾರೆ. ಈ ಬೆಳವಣಿಗೆ ನಡುವೆ ಸಿದ್ದರಾಮಯ್ಯ ಕ್ಯಾಬಿನೆಟ್ ಸೇರಿಕೊಳ್ಳಲಿರುವ ನಾಯಕರ ಸಂಭಾವ್ಯ ಪಟ್ಟಿ ಬಿಡುಗಡೆಯಾಗಿದೆ. ಸಿಎಂ ಸಿದ್ದು, ಡಿಸಿಎಂ ಡಿಕೆಶಿವಕುಮಾರ್ ಜೊತೆ ಮೊದಲ ಹಂತದಲ್ಲಿ 28 ನಾಯಕರು ಪ್ರಮಾಣ ವಚನ ಸ್ವೀಕರಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಬಿಜೆಪಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಗೆಲುವಿನ ಸಂಭ್ರಮ ಆಚರಿಸಿದ್ದರು. ಇದೀಗ ಲಕ್ಷ್ಣ ಸವದಿಗೂ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಇನ್ನು ಪ್ರಭಾವಿ ಖಾತೆಗಳನ್ನು ಕಾಂಗ್ರೆಸ್ ಪ್ರಬಲ ವೋಟ್ ಬ್ಯಾಂಕ್ ಸಮುದಾಯಕ್ಕೆ ಹಂಚಲು ನಿರ್ಧರಿಸಲಾಗಿದೆ.ಎಂಬಿ ಪಾಟೀಲ್, ಡಾ.ಜಿ ಪರಮೇಶ್ವರ್, ಬಿಕೆ ಹರಿಪ್ರಸಾದ್, ಯುಟಿ ಖಾದರ್, ಹೆಚ್‌ಕೆ ಪಾಟೀಲ್, ಕೆಹೆಚ್ ಮುನಿಯಪ್ಪ ಕ್ಯಾಬಿನೆಟ್ ಸೇರಿಕೊಳ್ಳುವುದು ಬಹುತೇಕ ಪಕ್ಕ ಆಗಿದೆ. ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ 28 ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.
ನೂತನ ಸರ್ಕಾರದಲ್ಲಿ ಸಿಎಂ ಸಿದ್ದುಗಿಂತ ಡಿಕೆ ಶಿವಕುಮಾರ್ ಪವರ್‌ಫುಲ್, ಕನಕಪುರ ಬಂಡೆಗೆ 2 ಹೊಣೆ!
ಸಂಭಾವ್ಯ ಸಚಿವರ ಪಟ್ಟಿ
ಸತೀಶ್ ಜಾರಕಿಹೊಳಿ - ಯಮಕನಮರಡಿ
ಎಂ.ಬಿ. ಪಾಟೀಲ್ - ಬಬಲೇಶ್ವರ
ಪರಮೇಶ್ವರ್ - ಕೊರಟಗೆರೆ
ಕೆ.ಎಚ್. ಮುನಿಯಪ್ಪ - ದೇವನಹಳ್ಳಿ
ಬಿ.ಕೆ. ಹರಿಪ್ರಸಾದ್ - ಪರಿಷತ್ ಸದಸ್ಯ
UT ಖಾದರ್ - ಮಂಗಳೂರು
HK ಪಾಟೀಲ್ - ಗದಗ
ಲಕ್ಷ್ಮಿ ಹೆಬ್ಬಾಳ್ಕರ್ - ಬೆಳಗಾವಿ ಗ್ರಾ.
ಪ್ರಿಯಾಂಕ್ ಖರ್ಗೆ - ಚಿತ್ತಾಪುರ
ಈಶ್ವರ್ ಖಂಡ್ರೆ - ಭಾಲ್ಕಿ
ಬಿ.ನಾಗೇಂದ್ರ - ಬಳ್ಳಾರಿ ಗ್ರಾ.
ಮಧು ಬಂಗಾರಪ್ಪ - ಸೊರಬ
ಕೆ.ಜೆ. ಜಾರ್ಜ್ - ಸರ್ವಜ್ಞನಗರ
ಕೃಷ್ಣಭೈರೇಗೌಡ - ಬ್ಯಾಟರಾಯನಪುರ
ದಿನೇಶ್ ಗುಂಡೂರಾವ್ - ಗಾಂಧಿನಗರ
ಜಮೀರ್ ಅಹ್ಮದ್ - ಚಾಮರಾಜಪೇಟೆ
ಚೆಲುವರಾಯಸ್ವಾಮಿ - ನಾಗಮಂಗಲ
ಎಚ್.ಸಿ.ಮಹದೇವಪ್ಪ - ಟಿ.ನರಸೀಪುರ
ಸಂತೋಷ್ ಲಾಡ್ - ಕಲಘಟಗಿ
ಕೆ.ಎನ್.ರಾಜಣ್ಣ - ಮಧುಗಿರಿ
ಲಕ್ಷ್ಮಣ ಸವದಿ - ಅಥಣಿ
ಶಿವರಾಜ್ ತಂಗಡಗಿ - ಕನಕಗಿರಿ
SS ಮಲ್ಲಿಕಾರ್ಜುನ - ದಾವಣಗೆರೆ ಉತ್ತರ
ಟಿಡಿ ರಾಜೇಗೌಡ - ಶೃಂಗೇರಿ
ಬಸವರಾಜ ರಾಯರೆಡ್ಡಿ - ಯಲಬುರ್ಗಾ
ಆರ್.ಬಿ.ತಿಮ್ಮಾಪುರ - ಮುಧೋಳ
ರಾಮಲಿಂಗಾರೆಡ್ಡಿ - ಬಿಟಿಎಂ ಲೇಔಟ್
ಎಂ.ಸಿ.ಸುಧಾಕರ್ - ಚಿಂತಾಮಣಿ
ಅಜಯ್ ಸಿಂಗ್ - ಜೇವರ್ಗಿ
ರುದ್ರಪ್ಪ ಲಮಾಣಿ - ಹಾವೇರಿ
ಕೆ.ವೈ ನಂಜೇಗೌಡ - ಮಾಲೂರು
ಪುಟ್ಟರಂಗಶೆಟ್ಟಿ - ಚಾಮರಾಜನಗರ
ಎಎಸ್ ಪೊನ್ನಣ್ಣ - ವಿರಾಜಪೇಟೆ
ಸಿಎಂ ಆಗಿ ಸಿದ್ದರಾಮಯ್ಯ ಮೇ.20ಕ್ಕೆ ಪ್ರಮಾಣವಚನ, ಡಿಕೆ ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿ!
ಆರ್.ವಿ.ದೇಶಪಾಂಡೆ - ಹಳಿಯಾಳ
ಟಿ.ಬಿ. ಜಯಚಂದ್ರ - ಶಿರಾ