ನೂತನ ಸರ್ಕಾರದಲ್ಲಿ ಸಿಎಂ ಸಿದ್ದುಗಿಂತ ಡಿಕೆ ಶಿವಕುಮಾರ್ ಪವರ್‌ಫುಲ್, ಕನಕಪುರ ಬಂಡೆಗೆ 2 ಹೊಣೆ!

ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯಗಿಂತೆ ಮೋಸ್ಟ್ ಪವರ್ ನಾಯಕ ಎಂದರೆ ಡಿಕೆ ಶಿವಕುಮಾರ್ . ಸಿದ್ದುಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದರೆ, ಡಿಕೆ ಶಿವಕುಮಾರ್‌ಗೆ ಉಪ ಮುಖ್ಯಮಂತ್ರಿ ಜೊತೆಗೆ ಮತ್ತೊಂದು ಮಹತ್ತರ ಜವಾಬ್ದಾರಿಯೂ ಇರಲಿದೆ.

Karnataka government Formation DK Shivakumar most powerful leader in CM siddaramaiah cabinet ckm

ನವದೆಹಲಿ(ಮೇ.18): ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಮೇ.20 ರಂದು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತ ಸಿದ್ದು ಕ್ಯಾಬಿನೆಟ್‌ನಲ್ಲಿ ಒಬ್ಬರೇ ಉಪ ಮುಖ್ಯಮಂತ್ರಿ. ಅದು ಡಿಕೆ ಶಿವಕುಮಾರ್. ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದ ಡಿಕೆ ಶಿವಕುಮಾರ್ ಕೊನೆಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ ಡಿಕೆ ಶಿವಕುಮಾರ್‌ಗೆ ಕೇವಲ ಡಿಸಿಎಂ ಜವಾಬ್ದಾರಿ ಮಾತ್ರವಲ್ಲ, ಈಗಿರುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನವೂ ಡಿಕೆಶಿ ಕೈಯಲ್ಲೇ ಇರಲಿದೆ. ಹೀಗಾಗಿ ಸಿದ್ದುಗಿಂತ ನೂತನ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಮೋಸ್ಟ್ ಪವರ್ ಪುಲ್ ನಾಯಕ ಎಂದು ಗುರುತಿಸಿಕೊಂಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಾಪಾಲ್, ಡಿಕೆ ಶಿವಕುಮಾರ್‍‌ಗೆ ನೀಡಿರುವ ಎರಡು ಜವಾಬ್ದಾರಿ ಕುರಿತು ವಿವರಣೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆ ವರೆಗೆ ಡಿಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ. 

ಸಿಎಂ ಆಗಿ ಸಿದ್ದರಾಮಯ್ಯ ಮೇ.20ಕ್ಕೆ ಪ್ರಮಾಣವಚನ, ಡಿಕೆ ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿ!

ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಡಿಕೆ ಶಿವಕುಮಾರ್ ನಿರ್ವಹಿಸಲಿದ್ದಾರೆ. ಈ ಮೂಲಕ ಡಿಕೆಶಿ, ಸಿದ್ದು ಕ್ಯಾಬಿನೆಟ್‌ನಲ್ಲಿ ಪ್ರಬಲ ಸ್ಥಾನ ಹೊಂದಿದ್ದರೆ, ಇತ್ತ ಪಕ್ಷದಲ್ಲೂ ಬಿಗಿ ಹಿಡಿತ ಹೊಂದಿದ್ದಾರೆ. ಇನ್ನು ಡಿಕೆ ಶಿವಕುಮಾರ್‌ಗೆ ಡಿಸಿಎಂ ಪಟ್ಟದ ಜೊತಗೆ ಪ್ರಬಲ ಖಾತೆಗಳನ್ನು ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇಂಧನ, ನೀರಾವರಿ ಸೇರಿದಂತೆ ಇತರ ಪ್ರಬಲ ಖಾತೆಗಳು ಡಿಕೆಶಿಗೆ ವಹಿಸುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಜನರು ಅಧಿಕಾರ ನೀಡಿದ್ದಾರೆ. ಅವರ ಬೆಂಬಲಕ್ಕೆ ನಾವು ಉತ್ತಮ ಆಡಳಿತ ನೀಡು ಋಣ ತೀರಿಸುತ್ತೇವೆ. ಅಧಿಕಾರ ನೀಡುವುದು ಹೈಕಮಾಂಡ್ ನಿರ್ಧಾರ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೇಳುವುದನ್ನು ನಾವು ಕೇಳುತ್ತೇವೆ. ಹೈಕಮಾಂಡ್ ಹೇಳಿದಂತೆ ನಾನು ಕೇಳಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.  

ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ,ರಹಸ್ಯ ಬಯಲು ಮಾಡಿದ ಹೈಕಮಾಂಡ್!

ಮೇ.13 ರಂದು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗಿತ್ತು. ಕಾಂಗ್ರೆಸ್ 135 ಸ್ಥಾನ ಗೆಲ್ಲುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿತ್ತು. ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಬ್ಬರು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸತತ ಮಾತುಕತೆ ನಡೆಸಿತ್ತು. ಸರಣಿ ಸಭೆಗಳನ್ನು ನಡೆಸಿ ಸಿಎಂ ಆಯ್ಕೆ ಸುಸೂತ್ರವಾಗಿ ನೇರವೇರಿಸುವ ಪ್ರಯತ್ನ ಮಾಡಿತ್ತು. ಈ ಪ್ರಯತ್ನ ಫಲಿಸಿದೆ. ಇದೀಗ ಸಿದ್ದರಾಮಯ್ಯ ಸಿಎಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರೆ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ದೆಹಲಿಯಲ್ಲಿ ನಡದೆ ಸುದ್ದಿಗೋಷ್ಠಿಯಲ್ಲಿ ಕೆಸಿ ವೇಣುಗೋಪಾಲ್ ಸಿಎಂ ಹಾಗೂ ಡಿಸಿಎಂ ಘೋಷಣೆ ಮಾಡುತ್ತಿದ್ದಂತೆ ಕರ್ನಾಟಕದಲ್ಲಿ ಸಂಭ್ರಮಾಚರಣೆ ಶುರುವಾಗಿದೆ. ಸಿದ್ದರಾಮಯ್ಯ ತವರಿನಲ್ಲಿ ಸಂಭ್ರಮ ಜೋರಾಗಿದೆ. ಇತ್ತ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು ಫೋಟೋಗೆ ಹಾಲಿನ ಅಭಿಷೇಕ ಮಾಡಲಾಗುತ್ತಿದೆ. ಇತ್ತ ಡಿಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Latest Videos
Follow Us:
Download App:
  • android
  • ios