Asianet Suvarna News Asianet Suvarna News

ಕಾಂಗ್ರೆಸ್ ಗ್ಯಾರಂಟಿಗೆ ಎಕ್ಸ್ ಪೈರಿ.? ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಕಾಂಗ್ರೆಸ್ ಕತ್ತರಿ..! JDS-BJP ಟೀಕೆ

ನನಗೂ ಫ್ರೀ, ನಿಮಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ.. ಕಾಕಾ ಪಾಟೀಲ್ಗೂ ಫ್ರೀ.. ಎಂದು 'ಗ್ಯಾರಂಟಿ ಕಾರ್ಡ್' ಹಂಚಿದ್ದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿ ಯೋಜನೆಗೆಳಿಗೆ ಕತ್ತರಿ ಹಾಕಲು ಮುಂದಾಗಿದೆ. 

Karnataka Government cuts Congress guarantee schemes JDS and BJP Tweeted sat
Author
First Published Aug 14, 2024, 4:19 PM IST | Last Updated Aug 14, 2024, 4:20 PM IST

ಬೆಂಗಳೂರು (ಆ.14): ನನಗೂ ಫ್ರೀ, ನಿಮಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ.. ಕಾಕಾ ಪಾಟೀಲ್ಗೂ ಫ್ರೀ.. ಎಂದು ಬಡಾಯಿ ಕೊಚ್ಚಿಕೊಂಡು 'ಗ್ಯಾರಂಟಿ ಕಾರ್ಡ್' ಹಂಚಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿ ಯೋಜನೆಗೆಳಿಗೆ ಕತ್ತರಿ ಹಾಕಲು ಮುಂದಾಗಿದೆ. 

ರಾಜ್ಯದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ  ಕಾಂಗ್ರೆಸ್ ಸರ್ಕಾರ, ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬ ಮಾತಿನಂತೆ ಈಗ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳಲ್ಲಿ ಪರಿಷ್ಕರಣೆಗೆ ಮುಂದಾಗಿದೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಹೆಣಗಾಡುತ್ತಿದ್ದು, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸಚಿವರುಗಳೇ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಳಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡಲು ದೂರು ನೀಡಿರುವುದು, " "ಬುರುಡೆ ಸಿದ್ದ"ರಾಮಯ್ಯ ಸರ್ಕಾರದ ಬಂಡವಾಳ ಬಯಲು ಮಾಡಿದೆ. 

ಗ್ಯಾರಂಟಿಗಳು ಬಡವರಿಗೆ ಮಾತ್ರ ತಲುಪಬೇಕು, ಆದ್ರೆ ಪಕ್ಷದಲ್ಲಿ ಚರ್ಚೆಯಾಗಿಲ್ಲ: ಗೃಹ ಸಚಿವ ಪರಮೇಶ್ವರ

ಇನ್ನು ಗ್ಯಾರಂಟಿಗೆ ಹಣ ಕೊಡಲು "ಕೈ"ಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡು ಲೂಟಿ ಹೊಡೆದಿದೆ. ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಬಗೆದಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದ ಬೊಕ್ಕಸವನ್ನು ಕಾಲಿ ಚೊಂಬು ಮಾಡಿದೆ' ಎಂದು ಜೆಡಿಎಸ್‌ನಿಂದ ಟ್ವೀಟ್ ಮೂಲಕ ಟೀಕೆ ಮಾಡಲಾಗಿದೆ.

ಮತ್ತೊಂದೆಡೆ ಬಿಜೆಪಿಯಿಂದಲೂ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪೋಸ್ಟ ಹಂಚಿಕೊಂಡು ಟೀಕೆ ಮಾಡಲಾಗಿದೆ. 'ಗುರಿ ತಲುಪಿದ ಮೇಲೆ ಗುರುವಿನ ಹಂಗೇಕೆ' ಎನ್ನುತ್ತಿದೆ ಕೃತಜ್ಞಹೀನ ಕಾಂಗ್ರೆಸ್ ಮಹಾದೇವಪ್ಪಂಗೂ ಫ್ರೀ, ಕಾಕಾ ಪಾಟೀಲ್‌ ಗೂ ಫ್ರೀ ಎಂದು ಜನರನ್ನು ಮರುಳು ಮಾಡಿ ವೋಟು ಹಾಕಿಸಿಕೊಂಡ ಕಾಂಗ್ರೆಸ್ಸಿಗರು ಈಗ ಚುನಾವಣೆ ಮುಗಿದ ನಂತರ ಗ್ಯಾರಂಟಿಗಳಿಗೆ ಕಡಿವಾಣ ಹಾಕಿ ಎಂಬ ರಾಗ ತೆಗೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೆ, 5 ವರ್ಷಗಳ ಕಾಲ ಗ್ಯಾರಂಟಿ ನೀಡುತ್ತೇವೆ ಎಂದು ಅಧಿಕಾರ ಹಿಡಿದು, ಈಗ 15 ತಿಂಗಳಿಗೆ ಗ್ಯಾರಂಟಿಗೆ ಕಡಿವಾಣ ಹಾಕಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ' ಎಂದು ಪೋಸ್ಟ್ ಹಂಚಿಕೊಂಡಿದೆ.

ಅಯೋಧ್ಯೆ ಬಾಲರಾಮನ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವೀಸಾ ನಿರಾಕರಿಸಿದ ಅಮೇರಿಕ!

ಮುಂದುವರೆದು ಅಂಗೈನಲ್ಲಿ ಆಕಾಶ ತೋರಿಸಿ ಅಧಿಕಾರ ಹಿಡಿದ  ಕರ್ನಾಟಕ ಕಾಂಗ್ರೆಸ್ ಸರ್ಕಾರವೀಗ ಕನ್ನಡಿಗರಿಗೆ ಚಿಪ್ಪು ಕೊಡಲು ತುದಿಗಾಲ ಮೇಲೆ ನಿಂತಿದೆ. ಗ್ಯಾರಂಟಿ ಸ್ವರೂಪದಲ್ಲಿ ಬದಲಾವಣೆ, ಯೋಜನೆಗಳ ಪರಾಮರ್ಶೆ ಮಾಡಬೇಕೆಂದು ರಾಗವೆಳೆದಿರುವ ಸಿದ್ದರಾಮಯ್ಯನವರ ಸಂಪುಟ ಸಚಿವರು, ಹೈಕಮಾಂಡ್ ಮೇಲೆ ಒತ್ತಡ ಹೇರಿ, ಗ್ಯಾರಂಟಿಗಳಿಗೆ ಕತ್ತರಿ ಹಾಕುವುದಕ್ಕೆ ವೇದಿಕೆ ʼಸಿದ್ಧʼಪಡಿಸಿದ್ದಾರೆ.

ಹೇ..! ಮಹಾದೇವಪ್ಪ ನಿನಗೂ ಫ್ರೀ, ಹೇ..! ಕಾಕಾ ಪಾಟೀಲ್‌ ನಿನಗೂ ಫ್ರೀ ಅಂತ ಬಡಾಯಿಕೊಚ್ಚಿಕೊಂಡಿದ್ದ ಕಾಂಗ್ರೆಸ್‌ ಮುಂದಾಳು ಸಿಎಂ ಸಿದ್ದರಾಮಯ್ಯನವರು ಮೌನದ ಮೊರೆ ಹೊಕ್ಕಿರುವುದು, ಅವಾಸ್ತವಿಕ ಭರವಸೆಗಳಿಗೆ ಕತ್ತರಿ ಬೀಳುವ ಸಂದೇಶವೇ.!?  ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

Latest Videos
Follow Us:
Download App:
  • android
  • ios