ಅಯೋಧ್ಯೆ ಬಾಲರಾಮನ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವೀಸಾ ನಿರಾಕರಿಸಿದ ಅಮೇರಿಕ!

ಅಮೇರಿಕದಲ್ಲಿ ನಡೆಯುತ್ತಿದ್ದ ವಿಶ್ವ ಕನ್ನಡಿಗರ ಸಮ್ಮೇಳನ-2024ರಲ್ಲಿ ಭಾಗವಹಿಸಲು ಹೊರಟಿದ್ದ ಅಯೋಧ್ಯೆ ಬಾಲರಾಮ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಮೇರಿಕ ವೀಸಾ ನಿರಾಕರಣೆ ಮಾಡಿದೆ. 

America visa denied to Arun Yogiraj sculptor of Ayodhya Balarama idol sat

ನವದೆಹಲಿ (ಆ.14): ಅಮೇರಿಕದಲ್ಲಿರುವ ಕನ್ನಡಿಗರು ಜಾಗತಿಕ ಮಟ್ಟದಲ್ಲಿ ನಡೆಸಲಾಗುವ ಅಮೇರಿಕಾ ಕನ್ನಡ ಕೂಟಗಳ ಒಕ್ಕೂಟದಿಂದ (Association of Kannada Kootas of America -AKKA) ಸಮ್ಮೇಳನಕ್ಕೆ ಆಯೋಜನೆ ಮಾಡಲಾಗಿದ್ದ ವಿಶ್ವ ಕನ್ನಡ ಸಮ್ಮೇಳನದಲ್ಲಿ (WKC 2024) ಭಾಗವಹಿಸಲು ತೆರಳಬೇಕಿದ್ದ ಅಯೋಧ್ಯೆಯ ರಾಮಮಂದಿರದ ವಿಶ್ವಪ್ರಸಿದ್ಧ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವೀಸಾ ನೀಡಲು ಅಮೇರಿಕ ನಿರಾಕರಣೆ ಮಾಡಿದೆ.

ಅಯೋಧ್ಯೆಯ ರಾಮ ಜನ್ಮಭೂಮಿ ದೇಗುಲದಲ್ಲಿರುವ ರಾಮಲಲ್ಲ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿದೆ ಎಂದು ಅವರು ಕುಟುಂಬದವರು ತಿಳಿಸಿದ್ದಾರೆ. ಅಮೇರಿಕಾದ ವರ್ಜೀನಿಯಾದ ರಿಚ್‌ಮಂಡ್‌ನಲ್ಲಿರುವ ಗ್ರೇಟರ್ ರಿಚ್‌ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆ.30 ರಿಂದ ಸೆ. 1ರವರೆಗೆ ನಿಗದಿಯಾಗಿದ್ದ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಯೋಗಿರಾಜ್ ಭಾಗವಹಿಸಲು ಹೋಗುತ್ತಿದ್ದರು. ಆದರೆ, ಅರುಣ್‌ಗೆ ಅಮೇರಿಕಾ ವೀಸಾ ನೀಡಲು ನಿರಾಕರಣೆ ಮಾಡಿದೆ. ಇನ್ನು ವಿಶ್ವಮಟ್ಟದಲ್ಲಿ ಮನ್ನಣೆ ಪಡೆದಿರುವ ಅರುಣ್ ಯೋಗಿರಾಜ್‌ಗೆ ವಿಸಾ ನಿರಾಕರಣೆ ಮಾಡಿರುವುದು ನಮ್ಮ ಕುಟುಂಬಕ್ಕೆ ಆಶ್ಚರ್ಯವಾಗಿದೆ ಎಂದು ತಿಳಿಸಿದ್ದಾರೆ.

AI ಅಲ್ಲ, ಅದಕ್ಕೂ ಮೀರಿದ ತಂತ್ರಜ್ಞಾನ ಬಂದರೂ.., ಈ 10 ಕ್ಷೇತ್ರಗಳ ಮಾನವರ ಕೆಲಸ ಕಿತ್ತುಕೊಳ್ಳಲಾಗಲ್ಲ!

ಈಗಾಗಲೇ ಅರುಣ್ ಯೋಗಿರಾಜ್ ಅವರ ಪತ್ನಿ ವಿಜೇತಾ ಅಮೇರಿಕಾಗೆ ತೆರಳಿದ್ದಾರೆ. ಇನ್ನೇನು ಅರುಣ್ ಕೂಡ ಅಲ್ಲಿಗೆ ಹೋಗಬೇಕು ಎಂದಾಗ ಅವರಿಗೆ ವಿಸಾ ನಿರಾಕರಣೆ ಮಾಡಲಾಗಿದೆ. ಅರುಣ್ ಅವರು ಅಕ್ಕ ವತಿಯಿಂದ ಆಯೋಜನೆ ಮಾಡಲಾಗುತ್ತಿರುವ ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮಕ್ಕೆ ಹಾಜರಾಗಿ, ಅಲ್ಲಿ ಸನ್ಮಾನ ಸ್ವೀಕರಿಸಿ ಪುನಃ ವಾಪಸ್ ಬರುತ್ತಿದ್ದರು. ಇದಕ್ಕೆ ವಿಸಾ ಕೇಳಿದರೂ ಅಮೇರಿಕಾ ನಿರಾಕರಣೆ ಮಾಡಿರುವುದರಿಂದ ಅರುಣ್ ಭಾರತದಲ್ಲಿಯೇ ಉಳಿದುಕೊಂಡಿದ್ದಾರೆ. ಆದರೆ, ಯಾವ ಉದ್ದೇಶಕ್ಕೆ ವಿಸಾ ನಿರಾಕರಣೆ ಮಾಡಲಾಗಿದೆ ಎಂಬುದರ ಬಗ್ಗೆ ಕುಟುಂಬದವರು ಪೂರ್ಣ ಮಾಹಿತಿ ಹಂಚಿಕೊಂಡಿಲ್ಲ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios