ಕೊಲೆ ಬೆದರಿಕೆ ಜಾತಿ ನಿಂದನೆ ಆರೋಪದಲ್ಲಿ ಮುನಿರತ್ನ ಬಂಧನ: ಡಿಕೆ ಸುರೇಶ್ ಹೇಳಿದ್ದೇನು?
ಗುತ್ತಿಗೆದಾರನಿಗೆ ಕೊಲೆ ಬೆದರಿಕೆ, ಜಾತಿನಿಂದನೆ, ಲಂಚ ಆರೋಪ ಹಿನ್ನೆಲೆ ಮುನಿರತ್ನರನ್ನ ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದರು.
ಬೆಂಗಳೂರು (ಸೆ.15): ಗುತ್ತಿಗೆದಾರನಿಗೆ ಕೊಲೆ ಬೆದರಿಕೆ, ಜಾತಿನಿಂದನೆ, ಲಂಚ ಆರೋಪ ಹಿನ್ನೆಲೆ ಮುನಿರತ್ನರನ್ನ ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದರು.
ಬಿಜೆಪಿ ಶಾಸಕ ಮುನಿರತ್ನ ಬಂಧನ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ರೂ ಕಠಿಣ ಕ್ರಮ ಜರುಗಿಸಲಾಗುತ್ತೆ. ಈ ರೀತಿ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವ ಕೆಲಸ ಮಾಡಬಾರದು ಎಂದರು.
ಆಂಧ್ರಕ್ಕೆ ಪರಾರಿಯಾಗುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ, ಚೇಸ್ ಮಾಡಿ ಬಂಧಿಸಿದ ಪೊಲೀಸ್!
ರಾಜಕೀಯ ಬಣ್ಣ ಕಟ್ಟುವವರಿಗೆ ಒಂದು ಮಾತು ಹೇಳ್ತೀನಿ. ನಾವು ಅವರಿಗೆ ಬೈಯಲು ಹೇಳಲಿಲ್ಲ. ನಾವು ಅವರಿಗೆ ಕಮಿಷನ್ ತೆಗೆದುಕೊಳ್ಳಲು ಹೇಳಲಿಲ್ಲ. ಇದೇ ಕೆಲಸ ಕಾಂಗ್ರೆಸ್‌ನವರು ಮಾಡಿದ್ರೆ ಹೇಗೆ ಮಾತಾಡ್ತಾ ಇದ್ರು? ದ್ವೇಷ ರಾಜಕಾರಣಕ್ಕೂ ಇದಕ್ಕೂ ಸಂಬಂಧವಿಲ್ಲ. ಅವರೇ ಆಡಿದ ಮಾತುಗಳು ರೆಕಾರ್ಡ್ ಆಗಿದೆ. ಇದರಲ್ಲಿ ದ್ವೇಷ ರಾಜಕಾರಣ ಏನು ಬಂತು.? ಜಾತಿಯನ್ನು ಕೀಳಾಗಿ ನೋಡುವುದು, ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದು ಮಾಡಬಾರದು. ನಿಮ್ಮ ಜಾತಿ, ನಿಂದನೆ ಮಾಡಿದವರನ್ನು ಹೇಗೆ ನೋಡ್ತೀರಿ. ಕಾಂಗ್ರೆಸ್‌ನವರು ಈ ರೀತಿ ಬೈದು ನಿಂದನೆ ಮಾಡಿದ್ರೆ ಬಿಜೆಪಿಯವರು ಸುಮ್ಮನೆ ಬಿಡ್ತಿದ್ರ? ಬಿಜೆಪಿಯವರು ಯೋಜನೆ ಮಾಡಲಿ ನಿಮ್ಮ ಪಕ್ಷ ಇದಕ್ಕೆ ಬೆಂಬಲ ಕೊಡುತ್ತ? ಎಂದು ಪ್ರಶ್ನಿಸಿದರು.
ಅದಾನಿ ಸಾಮ್ರಾಜ್ಯಕ್ಕೆ ಮತ್ತೊಂದು ಗರಿ, ಟೈಮ್ಸ್ ಪಟ್ಟಿಯಲ್ಲಿ ಸ್ಥಾನ, ಅಂಬಾನಿಗೆ ನಡುಕ!
ಇನ್ನು ಮುನಿರತ್ನ ಬಂಧನದ ಹಿಂದೆ ಡಿಕೆ ಸುರೇಶ್ ಹಾಗೂ ಮುನಿರತ್ನ ವಿರುದ್ಧ ಸೋತ ಅಭ್ಯರ್ಥಿ ಷಡ್ಯಂತ್ರವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ದಿನ ಬೆಳಗಾದರೆ ಡಿಕೆ ಬ್ರದರ್ಸ್ ನ ಟಾರ್ಗೆಟ್ ಮಾಡಲಿಲ್ಲ ಅಂದ್ರೆ ಅವರ ರಾಜಕೀಯ ನಡೆಯಲ್ಲ. ಚುನಾವಣೆ ಬಳಿಕ ನಾನು ಯಾವ ವಿಚಾರಕ್ಕೂ ತಲೆಹಾಕಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ನನ್ನ ಕೆಲಸ ನಾನು ಮಾಡ್ತಾ ಇದೀನಿ ಈ ರಾಜಕೀಯ ನಾಯಕರ ವಿಚಾರಗಳಿಂದ ನಾನು ದೂರ ಇದ್ದೇನೆ. ಕೂತರೆ ನಿಂತರೆ ರಾಜಕಾರಣ ಮಾಡೋದಲ್ಲ. ನಾನು ಸಿನಿಮಾ ಡೈರೆಕ್ಷನ್ ಮಾಡೊಲ್ಲ, ಪ್ರಡ್ಯೂಸ್ ಕೂಡ ಮಾಡೊಲ್ಲ. ಅದೆಲ್ಲ ಬಿಜೆಪಿ, ಜೆಡಿಎಸ್‌ನವರಿಗೆ ಬಿಟ್ಟಿದ್ದೇನೆ.