ಗುಜರಾತ್‌ನಲ್ಲಿ ಆಪ್‌ಗೆ ಬಿಜೆಪಿ ಫಂಡ್ ಮಾಡಿದೆ: ಸಿದ್ಧರಾಮಯ್ಯ
ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ಹಾಗೂ ಆಪ್ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ಗುಜರಾತ್‌ನಲ್ಲಿ ಬಿಜೆಪಿ, ಆಪ್‌ಗೆ ಫಂಡ್ ಮಾಡಿದೆ ಎಂದು ಹೇಳಿದ್ದಾರೆ.
ಬೆಂಗಳೂರು (ಡಿ.8): ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಟ್ಟ ನಿರ್ವಹಣೆಯ ಬಗ್ಗೆ ಮಾತನಾಡಿರುವ ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಆಪ್ ಕಾರಣ. ಗುಜರಾತ್‌ನಲ್ಲಿ ಆಪ್ ಪಕ್ಷಕ್ಕೆ ಬಿಜೆಪಿಯೇ ಫಂಡ್ ಮಾಡಿ ವೋಟ್‌ಅನ್ನು ಡಿವೈಡ್ ಮಾಡಿದೆ. ಆದರೆ, ಕರ್ನಾಟಕದಲ್ಲಿ ಇದ್ಯಾವುದು ಆಗೋಕೆ ಸಾಧ್ಯವಿಲ್ಲ. ಆಪ್‌ಗೆ ಕರ್ನಾಟಕದಲ್ಲಿ ಹೆಸರೇ ಇಲ್ಲ ಎಂದು ಚುನಾವಣೆ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕರ್ನಾಟಕದಲ್ಲಿ ನಾವೇನೂ ಮಾಡೋ ಅಗತ್ಯವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ನೆ ಇದ್ರೂ ಗೆಲುವು ಸಾಧಿಸುತ್ತದೆ ಎಂದು ಸಿದ್ಧರಾಮಯ್ಯ ಹೇಳಿದ್ದು, ದೆಹಲಿಯವರ ಹವಾ ಕರ್ನಾಟಕದಲ್ಲಿ ನಡೆಯೋದಿಲ್ಲ ಎಂದಿದ್ದಾರೆ. ಹಾಗಂತ ಆಪ್ ವಿರುದ್ಧ ಇಂಥ ಆರೋಪಗಳು ಹೊಸದೇನಲ್ಲ ಗೋವಾದ ವಿಧಾನಸಭೆ ಚುನಾವಣೆಯ ಫಲಿತಾಂಶದ ಸಮಯದಲ್ಲೂ ಇದೇ ಆರೋಪಗಳು ಕೇಳಿ ಬಂದಿದ್ದವು. ಕರ್ನಾಟಕ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕೂಡ ಆಪ್, ಬಿಜೆಪಿ ಪರವಾಗಿ ಕ್ಯಾಂಪೇನ್ ಮಾಡೋದು ಕಾಂಗ್ರೆಸ್‌ಗೆ ಹೊಡೆತ ನೀಡುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಬಂದಿಲ್ಲ ಎಂದಿದ್ದಾರೆ.
ಗುಜರಾತ್ ನಲ್ಲಿ ಬಿಜೆಪಿ ಬರುತ್ತೆ ಅಂತಾ ನಿರೀಕ್ಷೆ ಇತ್ತು. ಆಪ್ ಸ್ಪರ್ಧೆ ಮಾಡಿ ಕಾಂಗ್ರೆಸ್ ಮತ ತಿಂದರು. ಆಪ್ ಪಡೆದ ಮತಗಳೆಲ್ಲಾ ಕಾಂಗ್ರೆಸ್ ಪಕ್ಷದ್ದು, ಒಂದು ರಾಜ್ಯದ ಚುನಾವಣಾ ಫಲಿತಾಂಶ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸೋದಿಲ್ಲ. ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಕೂಡ ಬೀರೋದಿಲ್ಲ. ಇಲ್ಲಿಯ ಬಿಜೆಪಿ ಸರಕಾರ ಅತಿ ಭ್ರಷ್ಟ ಸರಕಾರ. ಕಾಂಗ್ರೆಸ್ ಸಂಘಟನೆ ಇಲ್ಲಿ ಶಕ್ತಿಯುತವಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಹೋಲಿಕೆ ಮಾಡಬೇಡಿ: ಗುಜರಾತ್ ಅನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಬೇಡಿ ಕರ್ನಾಟಕ ಬಿಜೆಪಿಗೆ ತಾವು ಸೋಲುತ್ತೇವೆ ಅನ್ನೋದು ಗೊತ್ತಿದೆ. ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಇದು ಕಾಂಗ್ರೆಸ್‌ಗೆ ಪ್ಲಸ್ ಆಗಿದೆ. ಗುಜರಾತ್ ನಲ್ಲಿ ಆಪ್ ಪಕ್ಷ ಬಹಳ ಹಣ ಖರ್ಚು ಮಾಡಿತು. ಬಿಜೆಪಿಯೇ ಆಪ್‌ಗೆ ಫಂಡ್ ಮಾಡಿದೆ. ಕಾಂಗ್ರೆಸ್ ಮತ ವಿಭಜನೆಗಾಗಿ ಆಪ್ ಪಕ್ಷಕ್ಕೆ ಬಿಜೆಪಿ ಫಂಡ್ ಮಾಡಿದೆ. ಜೆಡಿಎಸ್ ಜೊತೆ ಇಲ್ಲಿ ಬಿಜೆಪಿ ತಂತ್ರಗಾರಿಕೆ ಮಾಡಬಹುದು. ಆದರೆ ಅದು ಇಲ್ಲಿ ನಡೆಯೋದಿಲ್ಲ.
Gujarat, HP Election Results 2022 Live: HP ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಜಯರಾಮ್ ಠಾಕೂರ್‌ಗೆ ಜಯ
ನಾವು ಸುಮ್ನೆ ಇದ್ರೂ ಗೆಲ್ತೀವಿ: ಕರ್ನಾಟಕದ ಆಡಳಿತ ಪರಿಸ್ಥಿತಿ ಬಹಳ ಕೆಟ್ಟದಾಗಿದೆ.. ಗುಜರಾತ್ ನಲ್ಲಿ 40% ಸರಕಾರ ಇತ್ತು ಅಂತಾ ಯಾರಾದರೂ ಹೇಳಿದ್ರಾ? ಕರ್ನಾಟಕದ್ದು ಹೇಳಿದ್ರಾ? ಸಾಕ್ಟು ಹಣ ಖರ್ಚು ಮಾಡಿದರೂ ಆಪ್ 6 ಸ್ಥಾನ ಪಡೆದಿದೆ. ಮತ ವಿಭಜನೆ ಆಗಿದೆ ಅವರ ಸಾಧನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ಮನೆ ಇದ್ದರು ಗೆಲ್ಲುತ್ತೆ. ನಾವು ಏನೂ ತಂತ್ರಗಾರಿಕೆ ಮಾಡುವುದೆ ಬೇಡ. ಮೋದಿ ಹವಾ ಎಲ್ಲೂ ಇಲ್ಲ. ಹವಾ ಇದ್ದಿದ್ದರೆ ದೆಹಲಿಯಲ್ಲೇ ಯಾಕೆ ಸೋಲ್ತಿದ್ದರು. ಎಲ್ಲಿ ಹೋಯ್ತು ಮೋದಿ ಹವಾ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಸೆರಾಜ್ ಕ್ಷೇತ್ರದಲ್ಲಿ ಗೆಲುವು ಕಂಡ ಕರ್ನಾಟಕದ ಅಳಿಯ ಜೈರಾಮ್ ಠಾಕೂರ್!
ಗುಜರಾತ್‌ನಲ್ಲಿ ಫಲಿತಾಂಶ ನಿರೀಕ್ಷೆಯಂತೆ ಬರ್ತಿಲ್ಲ. ವಿರೋಧ ಪಕ್ಷಗಳಲ್ಲಿನ ಓಟ್ ವಿಭಜನೆಯಾಗಿದೆ. ಇದರಿಂದ ಫಲಿತಾಂಶದ ಮೇಲೆ ಪರಿಣಾಮವಾಗಿದೆ. ಗುಜರಾತ್‌ನಲ್ಲಿ ಹೆಚ್ಚಿನ ಸೀಟ್‌ಅನ್ನು ಪಕ್ಷ ನಿರೀಕ್ಷೆ ಮಾಡಿತ್ತು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಮ್ ಆದ್ಮಿ ಪಕ್ಷದಿಂದ ನಮಗೆ ತೊಂದರೆಯಾಗಿದೆ. ಅವರು ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ. ಗೋವಾ ಸೇರಿದಂತೆ ಹಲವು ಕಡೆ ನಾವು ಇದನ್ನು ನೋಡಿದ್ದೇವೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.