ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಮೇ 6ರಂದು ಹೊನ್ನಾವರದ ಸೆಂಟ್‌ ಜೋಸೆಫ್‌ ಮೈದಾನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಮಿಸಲಿದ್ದಾರೆ. 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ತಿಳಿಸಿದರು.

ಕಾರವಾರ (ಮೇ.5) : ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಮೇ 6ರಂದು ಹೊನ್ನಾವರದ ಸೆಂಟ್‌ ಜೋಸೆಫ್‌ ಮೈದಾನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಮಿಸಲಿದ್ದಾರೆ. 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಪ್ರಧಾನಮಂತ್ರಿಯವರು ಅಂಕೋಲಾದಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಮೇ 6ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಮಿಸುತ್ತಿದ್ದಾರೆ. ಇದರಿಂದ ಕಾರ್ಯಕರ್ತರ ಹುಮ್ಮಸ್ಸು ಮತ್ತಷ್ಟುಹೆಚ್ಚಲಿದೆ. ನಾಯಕರ ಆಗಮನ ಆರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.

ಯುಪಿ ಸಿಎಂ ಯೋಗಿಗೆ 'ಪುತ್ತಿಲ' ಸ್ವಾಗತ: ಚುನಾವಣಾಧಿಕಾರಿಗೆ ದೂರು ನೀಡಿದ ಬಿಜೆಪಿ!

ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ನೇತೃತ್ವದಲ್ಲಿ ನಡೆದ ಸಮಾವೇಶಕ್ಕೂ ಕೆಲವು ದಿನಗಳ ಮೊದಲು ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಅವರಿಗೆ ದೂರವಾಣಿ ಕರೆ ಮಾತನಾಡಲಾಗಿತ್ತು. ಆಗ ಅವರು ಬರುವುದಾಗಿ ತಿಳಿಸಿದ್ದರು. ಬಳಿಕ ಕೆಲಸದ ನಿಮಿತ್ತ ಸಿಂಗಪುರಕ್ಕೆ ತೆರಳುವ ಕಾರಣ ಸಮಾವೇಶಕ್ಕೆ ಆಗಮಿಸಿಲ್ಲ ಎಂದು ಹೇಳಿದರು.

ಈ ಬಾರಿ ಬಿಜೆಪಿ ಗೆಲ್ಲುತ್ತದೆ ಎಂದು ಮನವರಿಕೆಯಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಆನಂದ ಅಸ್ನೋಟಿಕರ ಅನಿವಾರ್ಯವಾಗಿ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಸೈಲ್‌ ಪರ ಪ್ರಚಾರಕ್ಕಿಳಿದಿದ್ದಾರೆ. ಎಲ್ಲಿಯೂ ನೆಲೆ ಕಾರಣ ಅವರಿಗೆ ಕಾಂಗ್ರೆಸ್‌ ಪರ ಪ್ರಚಾರ ಅನಿವಾರ್ಯವಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಮುಂದಿನ ದಿನಗಳಲ್ಲಿ ಬಿಜೆಪಿ ಸೇರಲು ಹಂಬಲಿಸುತ್ತಿರುವುದು ನನಸಾಗದ ಕನಸಾಗಿದೆ ಎಂದು ಮಾತಿನಲ್ಲಿ ತಿವಿದರು.

ಪುತ್ತೂರು: ಬಿಜೆಪಿಗೆ ಹಿಂದುತ್ವ ಅಭ್ಯರ್ಥಿಯೇ ಟಕ್ಕರ್‌: ಕ್ಷೇತ್ರದಲ್ಲಿ ಹಿಂದೂ ಸಂಘಟಕ ಅರುಣ್‌ಕುಮಾರ್ ಪುತ್ತಿಲರದ್ದೇ ಸದ್ದು

ಬಿಜೆಪಿಯ ಜಿಲ್ಲಾ ವಕ್ತಾರ ನಾಗರಾಜ ನಾಯಕ, ಮನೋಜ ಭಟ್‌, ನಾಗೇಶ ಕುರ್ಡೇಕರ, ರೇಷ್ಮಾ ಮಾಳಸೇಕರ ಇದ್ದರು.