ಯುಪಿ ಸಿಎಂ ಯೋಗಿಗೆ 'ಪುತ್ತಿಲ' ಸ್ವಾಗತ: ಚುನಾವಣಾಧಿಕಾರಿಗೆ ದೂರು ನೀಡಿದ ಬಿಜೆಪಿ!
ಪುತ್ತೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸುತ್ತಿರೋ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಗತ ಕೋರಿ ಪೋಸ್ಟರ್ ಹಾಕಿದ ಪಕ್ಷೇತರ ಅಭ್ಯರ್ಥಿ ವಿರುದ್ದ ಬಿಜೆಪಿ ಕಿಡಿ ಕಾರಿದ್ದು, ಇದೀಗ ಪುತ್ತೂರು ಚುನಾವಣಾಧಿಕಾರಿಗೆ ಈ ಬಗ್ಗೆ ದೂರು ನೀಡಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಮೇ.5): ಪುತ್ತೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸುತ್ತಿರೋ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಗತ ಕೋರಿ ಪೋಸ್ಟರ್ ಹಾಕಿದ ಪಕ್ಷೇತರ ಅಭ್ಯರ್ಥಿ ವಿರುದ್ದ ಬಿಜೆಪಿ ಕಿಡಿ ಕಾರಿದ್ದು, ಇದೀಗ ಪುತ್ತೂರು ಚುನಾವಣಾಧಿಕಾರಿಗೆ ಈ ಬಗ್ಗೆ ದೂರು ನೀಡಿದೆ.
ಪುತ್ತೂರು ಬಿಜೆಪಿ ಅಭ್ಯರ್ಥಿ(BJP Candidate) ಪರವಾಗಿ ಅವರ ಏಜೆಂಟ್ ರಾಜೇಶ್ ಬನ್ನೂರು(Rajesh bannur) ದೂರು ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿ ನಮ್ಮ ತಾರಾ ಪ್ರಚಾರಕರನ್ನು ಕಾನೂನು ಬಾಹಿರವಾಗಿ ತನ್ನ ಪ್ರಚಾರಕ್ಕೆ ಬಳಸಿಕೊಳ್ಳು ತಿರುವುದನ್ನು ನಿರ್ಭಂಧಿಸುವಂತೆ ದೂರು ನೀಡಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರ(Puttur assembly constituency)ದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ(Arun kumar puttil) ಬಿಜೆಪಿಯ ತಾರಾ ಪ್ರಚಾರಕರನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಪ್ರಚಾರವನ್ನು ಮಾಡುವ ಬಗ್ಗೆ ಈಗಾಗಲೇ 2 ಬಾರಿ ಬಿಜೆಪಿ ದೂರು ನೀಡಿದೆ.
ಇದರ ಮಧ್ಯೆ ನಾಳೆ ಬಿಜೆಪಿ ತಾರಾ ಪ್ರಚಾರಕರಾದ ಯೋಗಿ ಆದಿತ್ಯನಾಥ್(Yogi adityanath) ಪುತ್ತೂರಿಗೆ ಆಗಮಿಸಲಿದ್ದು, ಅವರನ್ನು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಸ್ವಾಗತಿಸುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕೂಡಲೇ ಅರುಣ್ ಕುಮಾರ್ ಪುತ್ತಿಲ ಅಥವಾ ಅವರ ಅಭಿಮಾನಿಗಳ ಹೆಸರಿನಲ್ಲಿ ಈ ಜಾಹೀರಾತನ್ನು ನೀಡದಂತೆ ಸಂಬಂಧ ಪಟ್ಟ ಪತ್ರಿಕೆಗಳಿಗೆ ಕೂಡಲೇ ನೋಟಿಸನ್ನು ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಬಿಜೆಪಿ ದೂರು ನೀಡಿದೆ.
ಪುತ್ತಿಲ ಬಂಡಾಯಕ್ಕೆ ಬಿಜೆಪಿಯಿಂದ 'ಯೋಗಿ' ಅಸ್ತ್ರ!
ನಾಳೆ ಪುತ್ತೂರಿನಲ್ಲಿ ಬಿಜೆಪಿ ಪರ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಫೀಲ್ಡಿಗಿಳಿಯಲಿದ್ದು, ಮೆಗಾ ರೋಡ್ ಶೋ ಮತ್ತು ಸಮಾವೇಶ ನಡೆಸಲಿದ್ದಾರೆ. ಪಕ್ಷೇತರ ಅಭ್ಯರ್ಥಿಗೆ ಠಕ್ಕರ್ ಕೊಡಲು ಯೋಗಿ ಮೂಲಕ ಪ್ಲಾನ್ ಮಾಡಲಾಗಿದ್ದು, ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಹಿಂದುತ್ವದ ಟೀಂ ವಿಭಜಿಸಲು ಯೋಜನೆ ರೂಪಿಸಲಾಗಿದೆ. ಪುತ್ತಿಲ ಜೊತೆಗಿರೋ ಹಿಂದೂ ಕಾರ್ಯಕರ್ತರ ಸೆಳೆಯಲು ಯೋಗಿ ಅಸ್ತ್ರ ಪ್ರಯೋಗಿಸಲಾಗಿದ್ದು, ಜಾಗರಣ ವೇದಿಕೆ, ಭಜರಂಗದಳ ಯುವಕರ ಸೆಳೆಯಲು ಯೋಗಿ ಮೂಲಕ ಪ್ಲಾನ್ ರೂಪಿಸಲಾಗಿದೆ.
ಬಿಜೆಪಿ ಅಭ್ಯರ್ಥಿ ಅಶಾ ತಿಮ್ಮಪ್ಪ ಪರ ಶನಿವಾರ ಯೋಗಿ ಆದಿತ್ಯನಾಥ್ ಪ್ರಚಾರ ಮಾಡಲಿದ್ದಾರೆ. ಬೆ.11.45ಕ್ಕೆ ಪುತ್ತೂರು ಮೊಟ್ಟೆತ್ತಡ್ಕ ಹೆಲಿಪ್ಯಾಡ್ ಗೆ ಯೋಗಿ ಎಂಟ್ರಿಯಾಗಲಿದ್ದು, ಬೆ.11.55 ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ರೋಡ್ ಶೋ ಆರಂಭವಾಗಲಿದೆ. ಬಳಿಕ ಕಿಲ್ಲೆ ಮೈದಾನದಲ್ಲಿ ರೋಡ್ ಶೋ ಅಂತ್ಯಗೊಂಡು ಮೆಗಾ ಸಮಾವೇಶ ನಡೆಯಲಿದೆ. ಮ.12.50ಕ್ಕೆ ಪುತ್ತೂರಿನಿಂದ ಕಾರ್ಕಳಕ್ಕೆ ತೆರಳಲಿರೋ ಯೋಗಿ, ಕಾರ್ಕಳ ಮತ್ತು ಹೊನ್ನಾವರದಲ್ಲಿ ಪ್ರಚಾರ ಮುಗಿಸಿ ಮತ್ತೆ ಬಂಟ್ವಾಳಕ್ಕೆ ಆಗಮಿಸಲಿದ್ದಾರೆ. ಸಂಜೆ 4.45ಕ್ಕೆ ಬಂಟ್ವಾಳ ಹೆಲಿಪ್ಯಾಡ್ ಗೆ ಯೋಗಿ ಆಗಮಿಸಿ, ಸ.5ರಿಂದ 5.30ರ ವರೆಗೆ ಬಂಟ್ವಾಳ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಬಿ.ಸಿ.ರೋಡ್ ನಲ್ಲಿ ರೋಡ್ ಶೋ ನಡೆಯಲಿದೆ. ಬಳಿಕ ಮಂಗಳೂರು ಏರ್ಪೋರ್ಟ್ ಆಗಮಿಸಿ ವಿಶೇಷ ವಿಮಾನದ ಮೂಲಕ ಲಕ್ನೋಗೆ ಪ್ರಯಾಣ ಬೆಳೆಸಲಿದ್ದಾರೆ.
ಪುತ್ತಿಲರ ಸ್ಪರ್ಧೆ ಹಿಂದೂ ಸಮುದಾಯದ ಏಳಿಗೆಗೆ: ಸೇಡಿಯಾಪು ಜನಾರ್ದನ ಭಟ್
ಯೋಗಿ ಎಂಟ್ರಿಗೆ ಪುತ್ತಿಲ ಸ್ವಾಗತ!
ಯೋಗಿ ಪುತ್ತೂರು ಎಂಟ್ರಿಗೆ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಜಾಣ ನಡೆ ಇಟ್ಟಂತೆ ಕಾಣುತ್ತಿದೆ. ಸಾಮಾಜಿಕ ತಾಣಗಳಲ್ಲಿ ಯೋಗಿಗೆ ಸ್ವಾಗತ ಕೋರಿದ ಅರುಣ್ ಪುತ್ತಿಲ, ಹಿಂದೂತ್ವದ ಭದ್ರಕೋಟೆ ಪುತ್ತೂರಿಗೆ ಆಗಮಿಸುತ್ತಿರುವ ಯೋಗಿ ಆದಿತ್ಯನಾಥ್ ಜೀ ಯವರಿಗೆ ಭವ್ಯ ಸ್ವಾಗತ ಅಂತ ಪೋಸ್ಟ್ ಮಾಡಿದ್ದಾರೆ. ಪುತ್ತಿಲ ಬೆಂಬಲಿಗರಿಂದಲೂ ಯೋಗಿಗೆ ಸ್ವಾಗತ ಕೋರಿ ಪೋಸ್ಟರ್ ವೈರಲ್ ಆಗಿದ್ದು, ಬಿಜೆಪಿ ಸ್ಟಾರ್ ಕ್ಯಾಂಪೇನರ್ (BJP star campaigner)ಗೆ ಪಕ್ಷೇತರ ಅಭ್ಯರ್ಥಿಯ ಸ್ವಾಗತದ ವಿರುದ್ದ ಬಿಜೆಪಿ ದೂರು ನೀಡಿದೆ.