ಬಿಎಸ್‌ವೈ ಸಭೆ ನಡೆಸಿದ ಬೆನ್ನಲ್ಲೇ ವೀರಶೈವ - ಲಿಂಗಾಯತರ ಸಭೆ ನಡೆಸಿದ ಶೆಟ್ಟರ್‌!

ಕಾಂಗ್ರೆಸ್‌ಗೆ ಹೋಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರನ್ನು ಸೋಲಿಸಲು ಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತ ಮುಖಂಡರ ಸಭೆ ನಡೆಸಿದ ಬೆನ್ನಲ್ಲೇ ಇದೀಗ ಶೆಟ್ಟರ್‌ ಕೂಡ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ್ದಾರೆ. ಶೆಟ್ಟರ್‌ ಗೆಲುವಿಗೆ ಶ್ರಮಿಸುವುದಾಗಿ ಸಭೆಯಲ್ಲಿದ್ದ ಎಲ್ಲರೂ ಶಪಥ ಕೂಡ ಮಾಡಿದ್ದಾರೆ. ಇದು ಸೆಂಟ್ರಲ್‌ ಕ್ಷೇತ್ರವನ್ನು ಮತ್ತಷ್ಟುರಂಗೇರುವಂತೆ ಮಾಡಿದೆ.

Karnataka election Shettar who held a meeting of Veerashaiva - Lingayat right after the BSY meeting at dharwad rav

ಹುಬ್ಬಳ್ಳಿ (ಏ.30) : ಕಾಂಗ್ರೆಸ್‌ಗೆ ಹೋಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರನ್ನು ಸೋಲಿಸಲು ಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತ ಮುಖಂಡರ ಸಭೆ ನಡೆಸಿದ ಬೆನ್ನಲ್ಲೇ ಇದೀಗ ಶೆಟ್ಟರ್‌ ಕೂಡ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ್ದಾರೆ. ಶೆಟ್ಟರ್‌ ಗೆಲುವಿಗೆ ಶ್ರಮಿಸುವುದಾಗಿ ಸಭೆಯಲ್ಲಿದ್ದ ಎಲ್ಲರೂ ಶಪಥ ಕೂಡ ಮಾಡಿದ್ದಾರೆ. ಇದು ಸೆಂಟ್ರಲ್‌ ಕ್ಷೇತ್ರವನ್ನು ಮತ್ತಷ್ಟುರಂಗೇರುವಂತೆ ಮಾಡಿದೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ ಶೆಟ್ಟರ್‌(Jagadish shettar), ತಮಗೆ ಬಿಜೆಪಿಯಲ್ಲಿ ಆದ ಅಪಮಾನ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದರಿಂದ ಆ ಪಕ್ಷ ತೊರೆದಿದ್ದೇನೆ. ಇದೀಗ ಕಾಂಗ್ರೆಸ್‌ ಸೇರಿದ್ದೇನೆ. ಈ ಹಿಂದೆಯೂ ನೀವು ನನಗೆ ಬೆಂಬಲಿಸಿದ್ದೀರಿ. ಈಗಲೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ದುಡಿಯುವ ಉತ್ಸಾಹ ಕಡಿಮೆಯಾಗಿಲ್ಲ : ಜಗದೀಶ ಶೆಟ್ಟರ್

ಈ ವೇಳೆ ಬಂಗಾರೇಶ ಹಿರೇಮಠ ಮಾತನಾಡಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಶೆಟ್ಟರ್‌ ಮತ್ತೆ ಅತ್ಯುನ್ನತ ಸ್ಥಾನ ಅಲಂಕರಿಸುವ ಅವಕಾಶವಿದೆ. ಕಾರಣ ನಾವೆಲ್ಲರೂ ನಾವೇ ಅಭ್ಯರ್ಥಿ ಎಂದು ಕೆಲಸ ಮಾಡಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸೋಣ. ಅಲ್ಲಿವರೆಗೂ ವಿಶ್ರಮಿಸುವುದು ಬೇಡ ಎಂದು ಮನವಿ ಮಾಡಿದರು.

ರಾಜಶೇಖರ ಮೆಣಸಿನಕಾಯಿ(Rajashekhar Menasinakayi) ಮಾತನಾಡಿ, 1994ರ ಚುನಾವಣೆಯಲ್ಲಿನ ಒಗ್ಗಟ್ಟು ಈ ಚುನಾವಣೆಯಲ್ಲಿ ಕಂಡು ಬರುತ್ತಿದೆ. ಬಿಜೆಪಿಯವರ ಪೊಳ್ಳು ಬೆದರಿಕೆಗಳಿಗೆ ಭಯ ಪಡದೆ ನಾವೆಲ್ಲರೂ ಶೆಟ್ಟರ್‌ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದರು.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ; ಬಿಜೆಪಿಯಿಂದ 27 ಶೆಟ್ಟರ್‌ ಬೆಂಬಲಿಗರ ಉಚ್ಚಾಟನೆ

ಬಳಿಕ ಸಭೆಯಲ್ಲಿದ್ದವರೆಲ್ಲರೂ ಕೈ ಎತ್ತುವ ಮೂಲಕ ಶೆಟ್ಟರ್‌ಗೆ ಬೆಂಬಲ ಸೂಚಿಸಿದರು. ಈ ವೇಳೆ ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಪಾಟೀಲ, ನೀಲಕಂಠ ಅಸೂಟಿ, ಗಂಗಾಧರ ದೊಡ್ಡವಾಡ, ಮಲ್ಲಿಕಾರ್ಜುನ ಸಾವಕಾರ, ಬಾಪೂಗೌಡ ಪಾಟೀಲ…, ಶಿವಪುತ್ರಪ್ಪ ಕಮತರ , ಸದಾಶಿವಯ್ಯ ಹಿರೇಮಠ , ಕಲ್ಲಪ್ಪ ಯಲಿವಾಳ , ಆರ್‌.ಕೆ.ಪಾಟೀಲ್‌, ಎಂ.ಎಸ್‌.ಪಾಟೀಲ್‌, ಸುನೀಲ್‌ ಮಠಪತಿ, ಸರೋಜಾ ಹೂಗಾರ, ಸುನಿತಾ ಹುರಕಡ್ಲಿ ಸೇರಿದಂತೆ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios