ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಬಂದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿದೊಡ್ಡದಾಗುತ್ತಾ ಇದೆ. ಮಂತ್ರಿಗಿರಿ ರೇಸ್‌ನಲ್ಲಿ ಈಗಾಗಲೇ ಡಿಸಿಎಂ ಆಗಿದ್ದ ಪರಮೇಶ್ವರ್‌, 7 ಬಾರಿ ಗೆದ್ದಿರುವ ಜಯಚಂದ್ರ, ಜೆಡಿಎಸ್‌ನಿದ ಕಾಂಗ್ರೆಸ್‌ಗೆ ವಲಸೆ ಬಂದು ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಸ್‌ಆರ್‌. ಶ್ರೀನಿವಾಸ, ತಲಾ 3 ಬಾರಿ ಗೆದ್ದಿರುವ ತಿಪಟೂರಿನ ಷಡಕ್ಷರಿ ಹಾಗೂ ಮಧುಗಿರಿಯ ಕೆ.ಎನ್‌. ರಾಜಣ್ಣ ಮತ್ತು ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಹಾಗೂ ಡಿಕೆಶಿ ಸಂಬಂಧಿ ಡಾ. ರಂಗನಾಥ್‌ ಮಂತ್ರಿಗಿರಿ ರೇಸ್‌ನಲ್ಲಿದ್ದಾರೆ.

ಉಗಮ ಶ್ರೀನಿವಾಸ್‌

ತುಮಕೂರು (ಮೇ.18) : ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಬಂದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿದೊಡ್ಡದಾಗುತ್ತಾ ಇದೆ. ಮಂತ್ರಿಗಿರಿ ರೇಸ್‌ನಲ್ಲಿ ಈಗಾಗಲೇ ಡಿಸಿಎಂ ಆಗಿದ್ದ ಪರಮೇಶ್ವರ್‌, 7 ಬಾರಿ ಗೆದ್ದಿರುವ ಜಯಚಂದ್ರ, ಜೆಡಿಎಸ್‌ನಿದ ಕಾಂಗ್ರೆಸ್‌ಗೆ ವಲಸೆ ಬಂದು ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಸ್‌ಆರ್‌. ಶ್ರೀನಿವಾಸ, ತಲಾ 3 ಬಾರಿ ಗೆದ್ದಿರುವ ತಿಪಟೂರಿನ ಷಡಕ್ಷರಿ ಹಾಗೂ ಮಧುಗಿರಿಯ ಕೆ.ಎನ್‌. ರಾಜಣ್ಣ ಮತ್ತು ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಹಾಗೂ ಡಿಕೆಶಿ ಸಂಬಂಧಿ ಡಾ. ರಂಗನಾಥ್‌ ಮಂತ್ರಿಗಿರಿ ರೇಸ್‌ನಲ್ಲಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಜಯಚಂದ್ರ ಪರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಮಂತ್ರಿಗಿರಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ಮಧುಗಿರಿಗೆ ಪ್ರಚಾರಕ್ಕೆ ಬಂದ ವೇಳೆ ರಾಜಣ್ಣ ಗೆದ್ದರೆ ಮಂತ್ರಿ ಮಾಡುವುದಾಗಿ ಘೋಷಿಸಿಯೂ ಇದ್ದರು. ಇನ್ನು ಕಾಂಗ್ರೆಸ್‌ಗೆ ಬಂದು ಆಯ್ಕೆಯಾಗಿರುವ ಎಸ್‌ಆರ್‌. ಶ್ರೀನಿವಾಸ್‌ ಮಂತ್ರಿಗಿರಿಯ ರೇಸ್‌ನಲ್ಲಿದ್ದಾರೆ.

ಹಿಂದು ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ತಪ್ಪಿತಸ್ಥರ ಮೇಲೆ ಕ್ರಮಕ್ಕೆ ನಳಿನ್‌ ಆಗ್ರಹ

2013 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ್‌ ಕಾಂಗ್ರೆಸ್‌ ಗೆದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು. ಆದರೆ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಪರಮೇಶ್ವರ್‌ ಸೋತ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಬಳಿಕ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಪರಮೇಶ್ವರ್‌ ಕೂಡ ತಾವು ಕೂಡ ಸಿಎಂ ಆಕಾಂಕ್ಷಿ ಎಂದಿದ್ದರು. ಆದರೆ ಈಗ ಬಹುತೇಕ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಸ್ಥಾನ ಅಂತಿಮವಾಗುವುದರಿಂದ ಡಿಸಿಎಂ ಅಥವಾ ಪ್ರಮುಖ ಖಾತೆಯನ್ನು ಪರಮೇಶ್ವರ್‌ಗೆ ನೀಡಬಹುದು.

ಉಪಚುನಾವಣೆ ಸೇರಿದಂತೆ ಸತತ ಎರಡು ಚುನಾವಣೆಯಲ್ಲಿ ಸೋತಿದ್ದ ಜಯಚಂದ್ರ ಈ ಬಾರಿ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಹೀಗಾಗಿ ಸಹಜವಾಗಿ ಅವರು ಕೂಡ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹಳೆ ಮೈಸೂರು ಪ್ರಾಂತ್ಯದ ಪ್ರಮುಖ ಲಿಂಗಾಯತ ನಾಯಕ ಹಾಗೂ ತಿಪಟೂರಿನ ಶಾಸಕ ಕೆ. ಷಡಕ್ಷರಿ ಅವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲೇ ಮಂತ್ರಿಗಿರಿ ಸಿಕ್ಕೇ ಬಿಟ್ಟಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಕಡೇ ಘಳಿಗೆಯಲ್ಲಿ ಕೈ ತಪ್ಪಿ ಹೋಯಿತು. ಈ ಬಾರಿ ಅವರು ಕೂಡ ಮಂತ್ರಿಗಿರಿಗೆ ಪ್ರಯತ್ನಿಸುತ್ತಿದ್ದಾರೆ.

ರೇಸ್‌ನಲ್ಲಿ ಡಿಕೆಶಿ ಸಂಬಂಧಿ ರಂಗನಾಥ್‌

ಇನ್ನು ಡಿಕೆಶಿ ಅವರ ಸಂಬಂಧಿ ಡಾ. ರಂಗನಾಥ್‌ ಕುಣಿಗಲ್‌(Ranganath kunigal) ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಡಾ. ರಂಗನಾಥ್‌ ಕೂಡ ಮಂತ್ರಿಗಿರಿ ಆಕಾಂಕ್ಷಿಯಾಗಿದ್ದಾರೆ. ಸದ್ಯ ಪಾವಗಡಿದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್‌ ಸಚಿವ ಸ್ಥಾನ ಆಕಾಂಕ್ಷಿಯಾಗಿಲ್ಲ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಮಂತ್ರಿಗಿರಿಯಾಗಲು ಸಿದ್ಧತೆ ನಡೆದಿದ್ದು, ಇನ್ನು ಒಂದೆರೆಡು ದಿವಸಗಳಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪೊಲೀಸರ ಥರ್ಡ್ ಡಿಗ್ರಿ ಶಿಕ್ಷೆಗೆ ಗಂಭೀರ ಗಾಯಗೊಂಡ ಹಿಂದು ಕಾರ್ಯಕರ್ತರು : ಶಾಸಕ ಹರೀಶ್ ಪೂಂಜಾ, ಪುತ್ತಿಲ ಆಸ್ಪತ್ರೆಗೆ ಭೇಟಿ

ಮುಖ್ಯಾಂಶಗಳು:

... 7 ಬಾರಿ ಗೆದ್ದಿರುವ ಟಿಬಿ ಜಯಚಂದ್ರ ಮಂತ್ರಿಗಿರಿ ರೇಸ್‌ನಲ್ಲಿ ಮುಂದೆ

- ಈ ಮೊದಲು ಕಾಂಗ್ರೆಸ್‌ ಗೆದ್ದರೆ ಸಿಎಂ ಎಂದೇ ಬಿಂಬಿತವಾಗಿದ್ದ ಡಾ.ಜಿ ಪರಮೇಶ್ವರ್‌ ಸಚಿವ ಸ್ಥಾನದ ಆಕಾಂಕ್ಷಿ

- ತಿಪಟೂರಿನ ಶಾಸಕ ಕೆ.ಷಡಕ್ಷರಿ, ಶಾಸಕ ಎಸ್‌.ಆರ್‌ ಶ್ರೀನಿವಾಸ ಹಾಗೂ ಶಾಸಕ ಕೆ.ಎನ್‌ ರಾಜಣ್ಣ ಮಧ್ಯೆ ಸಚಿವ ಸ್ಥಾನಕ್ಕಾಗಿ ಪೈಪೋಟಿ