Asianet Suvarna News Asianet Suvarna News

Karnataka election results 2023: ಖರ್ಗೆ ವಿವಾಹ ವಾರ್ಷಿಕೋತ್ಸವಕ್ಕೆ ಕಾಂಗ್ರೆಸ್‌ ಗೆಲುವಿನ ಗಿಫ್ಟ್

ಇಂದು 58ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಆಚರಣೆ ಮಾಡಿಕೊಳ್ಳುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್‌ ಗೆಲುವಿನ ಉಡುಗೊರೆಯನ್ನು ನಿಡಲಾಗುತ್ತಿದೆ.

Karnataka election results 2023 live Congress victory gift for Kharge wedding anniversary sat
Author
First Published May 13, 2023, 12:48 PM IST

ಬೆಂಗಳೂರು (ಮೇ 13): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದತ್ತ ಕಾಂಗ್ರೆಸ್ ಮುನ್ನುಗ್ಗುತ್ತಿದೆ. ಇಂದು 58ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಆಚರಣೆ ಮಾಡಿಕೊಳ್ಳುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್‌ ಗೆಲುವಿನ ಉಡುಗೊರೆಯನ್ನು ನಿಡಲಾಗುತ್ತಿದೆ.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಖರ್ಗೆ ಯಶಸ್ವಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಬಳಿಕ 3ನೇ ರಾಜ್ಯದ ಗೆಲುವು ಸಾಧಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಯಶಸ್ವಿ ಅಧ್ಯಕ್ಷರಾಗಿ ಹೊರ ಹೊಮ್ಮಿದ್ದಾರೆ. ಈಗಾಗಲೇ ಹಿಮಾಚಲ ಪ್ರದೇಶ, ಛತ್ತೀಸ್‌ಘಡ ಗೆಲುವಿನ ನಂತರ ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವುಯ ಸಾಧಿಸುತ್ತಿದೆ. ಈ ಮೂಲಕ ಎಐಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಗೆ ಗೆಲುವಿನ ರುಚಿ ತಂದುಕೊಟ್ಟ ಮಲ್ಲಿಕಾರ್ಜುನ ಖರ್ಗೆಗೆ ಕರ್ನಾಟಕದಲ್ಲಿಯೂ ಸಿಹಿಯನ್ನು ನೀಡಲಾಗುತ್ತಿದೆ. ಅವರ ಮದುವೆ ವಾರ್ಷಿಕೋತ್ಸವಕ್ಕೆ ಕಾಂಗ್ರೆಸ್‌ ಗೆಲುವಿನ ಉಡುಗೊರೆಯನ್ನು ನೀಡುತ್ತಿದೆ.

Karnataka Election 2023 Live: 130 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಮುನ್ನಡೆ, ಸಂಭ್ರಮ ಎಲ್ಲೆಡೆ...

ಇಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್‌ ಗಿಫ್ಟ್ ನೀಡಿದಂತಾಗಿದೆ. ಇಂದು 58ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಸದಾಶಿವನಗರದ ತಮ್ಮ ನಿವಾಸದಲ್ಲಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇನ್ನು ರಾಜ್ಯ ನಾಯಕರ ನಡುವೆ ಭಿನ್ನಮತ ಬೇಡ,  ರಾಜ್ಯ ಗೆಲ್ಲಬೇಕು ಅಷ್ಟೇ ಎಂದು ಹೇಳಿದ್ದ ಖರ್ಗೆ ಅವರಿಗೆ ಕಾಂಗ್ರೆಸ್‌ ನಾಯಕರು ಕೂಡ ಶರಣಾಗಿದ್ದಾರೆ. ರಾಜ್ಯ ಗೆದ್ದರೆ ಅದೇ ನೀವು ನನಗೆ ಕೊಡುವ ಗೌರವ ಎಂದು ಹೇಳಿ ಎಲ್ಲರನ್ನೂ ಒಗ್ಗಟ್ಟಾಗಿ ಕರೆದೊಯ್ದಿದ್ದರು. ರಾಜ್ಯ ಗೆದ್ದು ದೇಶಕ್ಕೆ ಸಂದೇಶ ಕೊಡುವ ಮಲ್ಲಿಕಾರ್ಜುನ ಖರ್ಗೆ ಲೆಕ್ಕಾಚಾರ ಸಕ್ಸಸ್ ಆಗಿದೆ.

ನಾಳೆ ಅಧಿಕೃತ ಕಾಂಗ್ರೆಸ್ ಶಾಸಕಾಂಗ ಸಭೆ ಸಾಧ್ಯತೆ: ಕಾಂಗ್ರೆಸ್‌ ಸ್ಪಷ್ಟ ಬಹುಮತವನ್ನು ಪಡೆಯುತ್ತಿದ್ದ ಕಾಂಗ್ರೆಸ್‌ ಎಲ್ಲ ನಾಯಕರೊಂದಿಗೆ ನಾಳೆ ಅಧಿಕೃತವಾಗಿ ಶಾಸಕಾಂಗ ಸಭೆಯನ್ನು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಅನೌಪಚಾರಿಕ ಶಾಸಕಾಂಗ ಸಭೆ ನಡೆಸಲಾಗುತ್ತದೆ. ನಾಳೆ ಮಧ್ಯಾಹ್ನ ಅಧಿಕೃತವಾಗಿ ಶಾಸಕಾಂಗ ಸಭೆ ಮಾಡಲು ನಿರ್ಧರಿಸಲಾಗಿದೆ. ಎಂಬ್ಯಾಸಿ ಹಿಲ್ಟನ್ ಹೊಟೇಲ್ ನಲ್ಲಿ ಸಭೆ ಸಾಧ್ಯತೆಯಿದೆ. ಶಾಸಕಾಂಗ ಸಭೆಯಲ್ಲಿ ಎಲ್ಲ ನೂತನ ಶಾಸಕರ ಅಭಿಪ್ರಾಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಡೆಯಲಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿ ನಾಳೆ ಅಂತಿಮ ತೀರ್ಮಾನ ಸಾಧ್ಯತೆಯಿದೆ. ಈ ಕುರಿತಂತೆ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಇಬ್ಬರ ಬಳಿಯೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚರ್ಚೆ ಮಾಡಿದ್ದಾರೆ.

karnataka election results 2023: ಗೂಗಲ್‌ ಸರ್ಚ್‌ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಟಾಪ್‌ ಟ್ರೆಂಡಿಂಗ್‌

ಸಿಎಂ ಆಯ್ಕೆಯೂ ಪಾರದರ್ಶಕವಾಗಿರಲಿ ಎಂದ ಹೈಕಮಾಂಡ್‌: ಗೆಲುವಿಗೆ ಎಲ್ಲ ನಾಯಕರ ಸಹಕಾರ ಇರುವುದರಿಂದ ಸಿಎಂ ಆಯ್ಕೆಯೂ ಪಾರದರ್ಶಕವಾಗಿರಲಿ ಎಂದಿರುವ ಕೈ ಹಿರಿಯ ನಾಯಕರು. ದೇಶದ ರಾಜಕಾರಣಕ್ಕೆ ಸಂದೇಶ ಕೊಟ್ಟ ಕರ್ನಾಟಕ ಫಲಿತಾಂಶವಾಗಿದೆ. ಪಕ್ಷ ಅಧಿಕಾರಕ್ಕೆ ಬರೋದು ಮುಖ್ಯ ಎಂದು ಹಠ ಹಿಡಿದಿದ್ದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಎ ಗೆಲುವಿನ ಸಕ್ಕರೆ ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆ ವಿಶ್ವಾಸದಂತೆ ಭರವಸೆ ಮೂಡಿಸಿದ ರಾಜ್ಯ ಕಾಂಗ್ರೆಸ್ ನಾಯಕರು. ಖರ್ಗೆ ಬಯಕೆಯಂತೆ ಕಾಂಗ್ರೆಸ್ ಕಲರವ ಆರಂಭವಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ, ಅದೇ ನೀವು ನನಗೆ ಕೊಡುವ ಗೌರವ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಮಲ್ಲಿಕಾರ್ಜುನ ಖರ್ಗೆ ನಾಯಕತ್ವ ಸಾಬೀತು ಪಡಿಸಿ, ದೇಶಕ್ಕೆ ಸಂದೇಶ ರವಾನಿಸಿದ್ದಾರೆ.

Follow Us:
Download App:
  • android
  • ios