Asianet Suvarna News Asianet Suvarna News

Gandhi Nagar election results 2023: ಬರೀ 113 ಮತಗಳ ಅಂತರದಲ್ಲಿ ಗೆದ್ದು ಬೀಗಿದ ದಿನೇಶ್‌ ಗುಂಡೂರಾವ್‌!

Karnataka Election Results 2023: ದಿನೇಶ್‌ ಗುಂಡೂ ರಾವ್‌ ಕೊನೆಗೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೇನು ಸೋತೇಬಿಟ್ಟರು ಎನ್ನುವ ಹಂತದಲ್ಲಿ ಬಿಜೆಪಿಯ ಸಪ್ತಗಿರಿ ಗೌಡರನ್ನು ಸೋಲಿಸಿ ಆರನೇ ಬಾರಿಗೆ ಜಯ ಪಡೆದುಕೊಂಡಿದ್ದಾರೆ.

Gandhi Nagar Dinesh Gundu Rao  Karnataka election results 2023 updates winning candidates san
Author
First Published May 13, 2023, 5:28 PM IST

ಬೆಂಗಳೂರು (ಮೇ.13): ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ದಿನೇಶ್‌ ಗುಂಡೂರಾವ್‌ ಕೇವಲ 113 ಮತಗಳ ಅಂತರದಲ್ಲಿ ಬಿಜೆಪಿಯ ಸಪ್ತಗಿರಿ ಗೌಡರನ್ನು ಸೋಲಿಸಿದ್ದಾರೆ. ಅದರ ಬೆನ್ನಲ್ಲಿಯೇ ಚುನಾವಣಾ ಆಯೋಗ ಈ ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ ನಿರ್ಧಾರ ಮಾಡಿದೆ ಎಂದು ಹೇಳಲಾಗಿತ್ತಾದರೂ, ಕೊನೆಗೆ ಆಯೋಗ ಈ ಮನವಿಯನ್ನು ತಿರಸ್ಕರಿಸಿದೆ. ದಿನೇಶ್‌ ಗುಂಡೂ ರಾವ್‌ ಒಟ್ಟು 53980 ಮತಗಳನ್ನು ಪಡೆದುಕೊಂಡಿದ್ದರೆ, 2ನೇ ಸ್ಥಾನ ಪಡೆದಿರುವ ಸಪ್ತಗಿರಿ ಗೌಡ 53867 ಮತಗಳನ್ನು ಪಡೆದುಕೊಂಡು ತೀರಾ ಅಲ್ಪ ಅಂತರದಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ ಪ್ರಾಬಲ್ಯವಿದ್ದ ಈ ಕ್ಷೇತ್ರದಲ್ಲಿ ದಿನೇಶ್‌ ಗುಂಡೂ ರಾವ್‌ ಸತತ ಆರನೇ ಬಾರಿಗೆ ಜಯ ಪಡೆದುಕೊಂಡಿದ್ದಾರೆ. 1999 ರಿಂದಲೂ ಈ ಕ್ಷೇತ್ರದಲ್ಲಿ  ದಿನೇಶ್‌ ಗುಂಡೂ ರಾವ್‌ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಲೇ ಬಂದಿದ್ದರು. ಈ ಬಾರಿ ಅವರು ಈ ಕ್ಷೇತ್ರದಲ್ಲಿ ಸೋಲು ಕಂಡೇ ಕಾಣುತ್ತಾರೆ ಎನ್ನಲಾಗಿತ್ತು. ಆದರೆ, ಕೊನೆಯ ಹಂತದವರೆಗೂ ಹಾವು-ಏಣಿ ಆಟವಾಗಿದ್ದ ಕ್ಷೇತ್ರದಲ್ಲಿ ದಿನೇಶ್‌ ಗುಂಡೂರಾವ್‌ ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ.

ಬರೋಬ್ಬರಿ 17 ಸುತ್ತುಗಳಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆ ಬಳಿಕ ದಿನೇಶ್‌ ಗುಂಡೂ ರಾವ್‌ 53,980 ಮತಗಳನ್ನು ಪಡೆದುಕೊಂಡಿದ್ದರೆ, ಸಪ್ತಗಿರಿ ಗೌಡ 53867 ಮತಗಳನ್ನು ಪಡೆದುಕೊಂಡಿದ್ದಾರೆ.ಮೂರನೇ ಸ್ಥಾನ ಪಡೆದ ಜೆಡಿಎಸ್‌ನ ವಿ ನಾರಾಯಣಸ್ವಾಮಿ 12832 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ 1689 ನೋಟಾ ಮತಗಳು ಬಿದ್ದಿವೆ.

ಗಾಂಧಿನಗರ ಕ್ಷೇತ್ರಕ್ಕೆ ಬರುವ ಸುಭಾಷ್‌ ನಗರ ಹಾಗೂ ಓಕಳಿಪುರಂ ಕ್ಷೇತ್ರದಲ್ಲಿ ಕೆಳವರ್ಗದ ಮತದಾರರ ಸಂಖ್ಯೆಯೇ ಹೆಚ್ಚಿದ್ದವು. ಅದರೊಂದಿಗೆ ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ಹೆಚ್ಚಿನ ವಾಣಿಜ್ಯ ಚಟುವಟಿಕೆಯ ಕ್ಷೇತ್ರ ಇದಾಗಿತ್ತು. ಮಾಜಿ ಸಚಿವ ರಾಮಚಂದ್ರ ಗೌಡ ಅವರ ಪುತ್ರನಾಗಿರುವ ಸಪ್ತಗಿರಿ ಗೌಡ ಕಳೆದ ಬಾರಿಯೂ ದಿನೇಶ್‌ ಗುಂಡೂರಾವ್‌ ವಿರುದ್ಧ ಸ್ಪರ್ಧೆ ಮಾಡಿದ್ದರಾದರೂ ಆಗ  10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು. ಬಿಜೆಪಿಯಿಂದ ಬಂಡಾಯವೆದ್ದು ಸ್ಪರ್ಧೆ ಮಾಡಿದ್ದ  ಕೃಷ್ಣಯ್ಯ ಶೆಟ್ಟಿ 6862 ಮತಗಳನ್ನು ಪಡೆದುಕೊಂಡಿದ್ದರು.

Karnataka Election Result 2023: ಬಿಜೆಪಿಗೆ ಭಜರಂಗ ಬಲಿ, ಕಾಂಗ್ರೆಸ್‌ ಕದನ ಕಲಿ; ದಿಗ್ವಿಜಯಕ್ಕೆ ಇದೇ ಐದು ಕಾರಣಗಳು!

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯು ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕಿತ್ತು.

KARNATAKA ELECTION RESULT 2023: ಬಿಜೆಪಿಗೆ ನೆರವಿಗೆ ಬರದ ಹನುಮ, ಕಾಂಗ್ರೆಸ್‌ ಹಂಗಾಮ!

Follow Us:
Download App:
  • android
  • ios