Asianet Suvarna News Asianet Suvarna News

Gadag Election Result 2023: ಗದಗದಲ್ಲಿ ಸ್ಥಾನ ಬಿಟ್ಟುಕೊಟ್ಟ ಬಿಜೆಪಿ

ಗದಗದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಎಐಸಿಸಿ ಉನ್ನತ ಸಮಿತಿ ಸದಸ್ಯ ಎಚ್‌.ಕೆ. ಪಾಟೀಲ ಹಾಗೂ ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲರು ಗೆಲುವಿನ ನಗೆ ಬೀರಿದ್ದಾರೆ. 

Karnataka Election Result 2023 Gadag Assembly Constituencies gvd
Author
First Published May 13, 2023, 6:01 PM IST

ಗದಗ (ಮೇ.13): ಗದಗದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಎಐಸಿಸಿ ಉನ್ನತ ಸಮಿತಿ ಸದಸ್ಯ ಎಚ್‌.ಕೆ. ಪಾಟೀಲ ಹಾಗೂ ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲರು ಗೆಲುವಿನ ನಗೆ ಬೀರಿದ್ದಾರೆ. ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಶಿರಹಟ್ಟಿ, ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಬಿಜೆಪಿ, ಕಾಂಗ್ರೆಸ್‌ಗಳೆರಡೂ ಹೊಸಮುಖಗಳಿಗೆ ಮಣೆ ಹಾಕಿತ್ತು. 2023 ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 2 ಕ್ಷೇತ್ರಗಳನ್ನು ಗೆದ್ದಿವೆ. ಅಲ್ಲದೇ 2018ರಲ್ಲಿ ಜಿಲ್ಲೆಯ 4 ಕ್ಷೇತ್ರಗಳ ಪೈಕಿ 3ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ತನ್ನ ಪ್ರಾಬಲ್ಯ ಮೆರೆದಿತ್ತು.

ಗದಗ ಕ್ಷೇತ್ರ (Gadag Assembly Constiuency): ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್ ಗೆಲುವು
ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ.ಪಾಟೀಲ, ಈ ಬಾರಿಯೂ ‘ಕೈ’ ಅಭ್ಯರ್ಥಿಯಾಗಿ ಸ್ಫರ್ಧಿಸಿ 89958 ಮತಗಳನ್ಗನು ಗಳಿಸಿ ಗೆದಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಅನಿಲ ಮೆಣಸಿನಕಾಯಿ ಸ್ಪರ್ಧಿಸಿದ್ದರು. ಸತತ 2 ಚುನಾವಣೆಗಳಲ್ಲಿ ಇಬ್ಬರೂ ಪರಸ್ಪರ ಎದುರಾಳಿಗಳಾಗಿದ್ದರು. ಇಲ್ಲಿ ಪಂಚಮಸಾಲಿ ಮತಗಳೆ ಅತಿ ಹೆಚ್ಚು. ನಂತರದ ಸ್ಥಾನದಲ್ಲಿ ಮುಸ್ಲಿಂ ಮತ್ತು ಕುರುಬ ಸಮುದಾಯದ ಮತಗಳಿವೆ. ಕಳೆದ 45 ವರ್ಷಗಳಿಂದ ಇಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತಾ ಬಂದಿದ್ದು, 45 ವರ್ಷಗಳಿಂದಲೂ ಹುಲಕೋಟಿಯ ಪಾಟೀಲ ಮನೆತನದವರೇ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ. ಇನ್ನು 2018 ರಲ್ಲಿ  ಎಚ್.ಕೆ.ಪಾಟೀಲ್ ಅವರು ಕಾಂಗ್ರೆಸ್‌ನಿಂದ 1,58,483 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಅನಿಲ್ ಮೆಣಸಿನಕಾಯಿ (Anil Menasinakayi)-74828
ಕಾಂಗ್ರೆಸ್‌-ಎಚ್.ಕೆ.ಪಾಟೀಲ್ (HK Patil)-89958
ಜೆಡಿಎಸ್-ವೆಂಕನಗೌಡ (Venkanagouda)-698

ಪುರುಷ ಮತದಾರರು-110331
ಮಹಿಳಾ ಮತದಾರರು-112221
ಇತರೆ-17
ಒಟ್ಟು-222569 

ಗದಗ ಜಾತಿ ಲೆಕ್ಕಾಚಾರ
ಲಿಂಗಾಯತ    85,000
ಕುರುಬ    25,000
ಮುಸ್ಲಿಂ    35,000
ಪರಿಶಿಷ್ಟ ಜಾತಿ    20,000
ಪರಿಶಿಷ್ಟ ಪಂಗಡ    11,000
ಬ್ರಾಹ್ಮಣ    5,000
ಪಟೇಗಾರ್    15,000

ನರಗುಂದ ಕ್ಷೇತ್ರ (Naragunda Assembly Constituency): ಬಿಜೆಪಿಯ ಸಿ.ಸಿ.ಪಾಟೀಲ್ ಗೆಲುವು
ರೈತ ಬಂಡಾಯಕ್ಕೆ ಹೆಸರಾಗಿದ್ದ, 80ರ ದಶಕದ ಕರ್ನಾಟಕದ ರೈತ ಚಳವಳಿಯ ಮೂಲ ಸ್ಥಾನವಾದ ನರಗುಂದದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 72835 ಮತಗಲನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ.ಆರ್‌.ಯಾವಗಲ್ಲ ಕಣದಲ್ಲಿದ್ದರು. ಪ್ರಸ್ತುತ ಚುನಾವಣೆ ಸೇರಿದಂತೆ ಒಟ್ಟು 6 ಚುನಾವಣೆಗಳಲ್ಲಿ ಸಿ.ಸಿ.ಪಾಟೀಲ ಮತ್ತು ಬಿ.ಆರ್‌.ಯಾವಗಲ್ಲ ಪರಸ್ಪರ ಎದುರಾಳಿಗಳಾಗಿದ್ದರು. ಇದು ಲಿಂಗಾಯತ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಪಂಚಮಸಾಲಿ ಸಮುದಾಯ ಒಟ್ಟು ಮತದಾರರ ಪೈಕಿ 37%ರಷ್ಟು ಪಾಲು ಹೊಂದಿತ್ತು. ಇನ್ನು 2018 ರಲ್ಲಿ   ಸಿ.ಸಿ.ಪಾಟೀಲ್ ಅವರು ಬಿಜೆಪಿಯಿಂದ 1,43,422 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಸಿ.ಸಿ.ಪಾಟೀಲ್ (CC Patil)-72835
ಕಾಂಗ್ರೆಸ್‌-ಬಿ.ಆರ್.ಯಾವಗಲ್ (BR Yavagal)-71044
ಜೆಡಿಎಸ್-ರುದ್ರಗೌಡ ಪಾಟೀಲ್ (Rudragouda Patil)-653

ಪುರುಷ ಮತದಾರರು-94605
ಮಹಿಳಾ ಮತದಾರರು-91926
ಇತರೆ-7
ಒಟ್ಟು-186538

ನರಗುಂದ ಜಾತಿ ಲೆಕ್ಕಾಚಾರ
ಲಿಂಗಾಯತ    85,000
ಕುರುಬ    30,000
ಮುಸ್ಲಿಂ    19,000
ಪರಿಶಿಷ್ಟ ಜಾತಿ    18,000
ಪರಿಶಿಷ್ಟ ಪಂಗಡ 7,000

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ರೋಣ ಕ್ಷೇತ್ರ (Rona Assembly Constituency): ಕಾಂಗ್ರೆಸ್‌ನ ಜಿ.ಎಸ್.ಪಾಟೀಲ್ ಗೆಲುವು
ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಕಳಕಪ್ಪ ಬಂಡಿ ಕಣಕ್ಕೆ ಇಳಿದಿದ್ದು, ಕ್ಷೇತ್ರ ಉಳಿಸಿಕೊಳ್ಳುವ ಸವಾಲಿನಲ್ಲಿ ಸೋತಿದ್ದಾರೆ. ಹೌದು! ಕಾಂಗ್ರೆಸ್‌ ಅಭ್ಯರ್ಥಿ ಜಿ.ಎಸ್.ಪಾಟೀಲ್ 94865 ಮತಗಳನ್ನು ಪಡೆಯುವ ಮೂಲಕ ಜಯಶಾಲಿಯಾಗಿದ್ದಾರೆ. ಹಾಲಿ ಶಾಸಕರ ಸಹೋದರ, ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಿದ್ಧಪ್ಪ ಬಂಡಿಯವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದು, ಕಾಂಗ್ರೆಸ್‌ಗೆ ವರವಾಗಿದೆ. ಇನ್ನು, ಬೆಂಗಳೂರಿನ ಉದ್ಯಮಿ, ಆನೇಕಲ್‌ ದೊಡ್ಡಯ್ಯನವರು ಆಮ್‌ ಆದ್ಮಿಯಿಂದ ಕಣಕ್ಕೆ ಇಳಿದಿದ್ದರು. ಇನ್ನು 2018 ರಲ್ಲಿ ಕಳಕಪ್ಪ ಬಂಡಿ ಅವರು ಬಿಜೆಪಿಯಿಂದ 1,67,890 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಕಳಕಪ್ಪ ಬಂಡಿ (Kalakappa Bandi)-70177
ಕಾಂಗ್ರೆಸ್‌-ಜಿ.ಎಸ್.ಪಾಟೀಲ್ (GS Patil)-94865
ಜೆಡಿಎಸ್-ಮುಕ್ದುಮ್ ಸಾಬ್ (Mukdum Saab)-652

ಪುರುಷ ಮತದಾರರು-116176
ಮಹಿಳಾ ಮತದಾರರು-115828
ಇತರೆ-23
ಒಟ್ಟು-232027

ರೋಣ ಜಾತಿ ಲೆಕ್ಕಾಚಾರ
ಲಿಂಗಾಯತ    1,00,000
ಮುಸ್ಲಿಂ    20,000
ಪರಿಶಿಷ್ಟ ಜಾತಿ    20,000
ಪರಿಶಿಷ್ಟ ಪಂಗಡ    15,000

ಶಿರಹಟ್ಟಿ ಕ್ಷೇತ್ರ (Shirahatti Assembly Constituency): ಬಿಜೆಪಿಯ ಡಾ.ಚಂದ್ರು ಲಮಾಣಿ ಗೆಲುವು
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಶಿರಹಟ್ಟಿ. ಬಿಜೆಪಿಯಿಂದ ಡಾ.ಚಂದ್ರು ಲಮಾಣಿ ಸ್ಫರ್ಧಿಸಿದ್ದು, 74489 ಮತಗಳನ್ನು ಗಳಿಸಿ ಗೆದಿದ್ದಾರೆ. ಕಾಂಗ್ರೆಸ್‌ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ, ಸುಜಾತಾ ದೊಡ್ಡಮನಿ ಸ್ಪರ್ಧಿಸಿದ್ದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಆಮ್‌ ಆದ್ಮಿ, ಜೆಡಿಎಸ್‌ ಸೇರಿದಂತೆ ಒಟ್ಟು 14 ಜನ ಸ್ಪರ್ಧಿಸಿದ್ದರು. ಇನ್ನು 2018 ರಲ್ಲಿ  ರಾಮಣ್ಣ ಲಮಾಣಿ ಅವರು ಬಿಜೆಪಿಯಿಂದ 1,59,395 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಡಾ.ಚಂದ್ರು ಲಮಾಣಿ (Dr Chandru Lamani)-74489
ಕಾಂಗ್ರೆಸ್‌-ಸುಜಾತ ಎಲ್.ದೊಡ್ಡಮನಿ (Sujata L Doddhamani)-34791
ಜೆಡಿಎಸ್-ಹನುಮಂತಪ್ಪ ನಾಯಕ್ (Hanumantappa Nayak)-2065

ಪುರುಷ ಮತದಾರರು-113885
ಮಹಿಳಾ ಮತದಾರರು-112922 
ಇತರೆ-14
ಒಟ್ಟು-226821

ಶಿರಹಟ್ಟಿ (Shirahatti Assembly Constituency) ಜಾತಿ ಲೆಕ್ಕಾಚಾರ
ಕುರುಬ    60,000
ಲಿಂಗಾಯತ    50,000
ಎಸ್ಸಿ 45,000
ಎಸ್ಟಿ 10,000
ಮುಸ್ಲಿಂ    35,000
ಲಂಬಾಣಿ    10,000
ಬ್ರಾಹ್ಮಣ    5,000
ಮರಾಠ    2,500

Follow Us:
Download App:
  • android
  • ios