Karnataka Election Result 2023 ಪ್ರಮುಖ 10 ಸಮೀಕ್ಷೆಯಲ್ಲಿ ಒಬ್ಬರ ಭವಿಷ್ಯ ಪಕ್ಕಾ, ಉಳಿದವರ ಲೆಕ್ಕ ಉಲ್ಟಾ!
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಿದರೆ, ಬಿಜೆಪಿ ಧೂಳೀಪಟವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು 10ಕ್ಕೂ ಹೆಚ್ಚು ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿತ್ತು. ಆದರೆ ಬಹುತೇಕ ಸಮೀಕ್ಷೆಗಳ ಲೆಕ್ಕಾಚಾರ ಉಲ್ಟಾ ಆಗಿದ್ದರೆ, ಒಂದು ಸಂಸ್ಥೆಯ ಭವಿಷ್ಯ ನಿಜವಾಗಿದೆ.
ಬೆಂಗಳೂರು(ಮೇ.13): ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬೀದಿ ಬೀದಿಯಲ್ಲಿ ಕಾಂಗ್ರೆಸ್ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಜೊತೆ ಸರ್ಕಾರ ರಚನೆ ಕುರಿತು ಸಭೆ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದರಲ್ಲಿ 131 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಕುರಿತು 10ಕ್ಕೂ ಹೆಚ್ಚು ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿ ಭವಿಷ್ಯ ನುಡಿದಿತ್ತು. ಇದರಲ್ಲಿ ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಎಂದಿತ್ತು. ಆದರೆ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. 10ಕ್ಕೂ ಹೆಚ್ಚು ಸಮೀಕ್ಷೆಯಲ್ಲಿ ಒಂದು ಸಮೀಕ್ಷೆ ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಭವಿಷ್ಯ ನುಡಿದಿತ್ತು. ಇಂಡಿಯಾ ಟುಡೆ ಆ್ಯಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆ ಬಹುತೇಕ ನಿಖರ ಭವಿಷ್ಯ ನೀಡಿದೆ.
ಕರ್ನಾಟಕ ವಿಧಾಸಭಾ ಚುನಾವಣೆ 2023ರ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ 136 ಸ್ಥಾನ ಗೆದ್ದು ಜಯಭೇರಿ ಭಾರಿಸಿದ್ದರೆ, ಬಿಜೆಪಿ 65 ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಇತರರು 4 ಕ್ಷೇತ್ರದಲ್ಲಿ ಗೆಲುವಿನ ಸಿಹಿ ಕಂಡಿದ್ದಾರೆ. ಕಾಂಗ್ರೆಸ್ ಈ ಗೆಲುವನ್ನ ಆ್ಯಕ್ಸಿಸ್ ಮೈ ಇಂಡಿಯಾ-ಇಂಡಿಯಾ ಟುಡೆ ಭವಿಷ್ಯ ನುಡಿದಿತ್ತು. ಆ್ಯಕಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಕಾಂಗ್ರೆಸ್ 122 ರಿಂದ 140 ಸ್ಥಾನ ಗೆಲ್ಲಲಿದೆ ಎಂದಿತ್ತು. ಇತ್ತ ಬಿಜೆಪಿ 62 ರಿಂದ 80 ಸ್ಥಾನಕ್ಕೆ ಕುಸಿಯಲಿದೆ ಎಂದಿತ್ತು. ಇನ್ನು ಜೆಡಿಎಸ್ 20 ರಿಂದ 25 ಸ್ಥಾನ ಗೆಲ್ಲಲಿದೆ. ಇತರರು 3 ಸ್ಥಾನ ಗೆಲ್ಲಲಿದೆ ಎಂದಿದೆ.
Karnataka Election Result 2023 ಮೋದಿ ಅವಲಂಬನೆ, ಭ್ರಷ್ಟಾಚಾರ ಆರೋಪ; ಬಿಜೆಪಿ ಸೋಲಿಗಿದೆ 5 ಕಾರಣ!
ಆಕ್ಸಿಸ್ ಮೈ ಇಂಡಿಯಾ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ಸಂಸ್ಥೆಗಳ ಸಮೀಕ್ಷೆ ಉಲ್ಟಾ ಆಗಿದೆ. ಸಿವೋಟರ್ ಎಬಿಪಿ ನ್ಯೂಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 100 ರಿಂದ 112 ಸ್ಥಾನ ಗೆಲ್ಲಲಿದೆ ಎಂದರೆ ಬಿಜೆಪಿ 83 ರಿಂದ 95 ಸ್ಥಾನ ಗೆಲ್ಲಲಿದೆ ಎಂದಿತ್ತು. ಜೆಡಿಎಸ್ 21 ರಿಂದ 26 ಹಾಗೂ ಇತರರು 2 ರಿಂದ 6 ಸ್ಥಾನ ಅನ್ನೋ ಭವಿಷ್ಯ ಹೇಳಿತ್ತು. ಟುಡೇಸ್ ಚಾಣಾಕ್ಯ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 120 ಸ್ಥಾನ, ಬಿಜೆಪಿ 922 ಸ್ಥಾನ, ಜೆಡಿಎಸ್ 12 ಹಾಗೂ ಇತರರು ಯಾವುದೇ ಸ್ಥಾನ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿತ್ತು.
ಇಂಡಿಯಾ ಟಿವಿ ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 110 ರಿಂದ 120 ಸ್ಥಾನ, ಬಿಜೆಪಿ 80 ರಿಂದ 90 ಸ್ಥಾನ, ಜೆಡಿಎಸ್ 20 ರಿಂದ 24 ಸ್ಥಾನ ಹಾಗೂ ಇತರರು 1 ರಿಂದ 3 ಸ್ಥಾನ ಗೆಲ್ಲಲಿದೆ ಎಂದಿತ್ತು. ಟೈಮ್ಸ್ ನೌ ಇಟಿಜಿ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ 113 ಸ್ಥಾನ ಗೆಲ್ಲಲಿದೆ ಎಂದಿದ್ದರೆ, ಬಿಜೆಪಿ 85 ಸ್ಥಾನ ಗೆಲ್ಲಲಿದೆ ಎಂದಿತ್ತು. ಜೆಡಿಎಸ್ 23 ಸ್ಥಾನ ಗೆಲ್ಲುವ ಸಾಧ್ಯತೆ ಹೇಳಿದ್ದರೆ, ಇತರರು 3 ಸ್ಥಾನ ಗೆಲ್ಲಲಿದೆ ಎಂದಿತ್ತು.
ನ್ಯೂಸ್ ನೇಷನ್ ಸಿಜಿಎಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 86, ಬಿಜೆಪಿ 114, ಜೆಡಿಎಸ್ 21 ಹಾಗೂ ಇತರರು 3 ಸ್ಥಾನ ಗೆಲ್ಲಲಿದೆ ಎಂದಿತ್ತು. ರಿಪಬ್ಲಿಕ್ ಟಿವಿ ಪಿ ಮಾರ್ಕ್ ಸಮೀಕ್ಷೆ ಪ್ರಕಾರ 94 ರಿಂದ 108 ಸ್ಥಾನ ಗೆಲ್ಲಲಿದೆ ಎಂದಿದ್ದರೆ, ಬಿಜೆಪಿ 85 ರಿಂದ 100, ಜೆಡಿಎಸ್ 24 ರಿಂದ 32 ಹಾಗೂ ಇತರರು 2 ರಿಂದ 6 ಸ್ಥಾನದಲ್ಲಿ ಗೆಲುವು ಸಾಧಸಲಿದೆ ಎಂದಿತ್ತು. ಇನ್ನು ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 91 ರಿಂದ 106, ಬಿಜೆಪಿ 94 ರಿಂದ 117, ಜೆಡಿಎಸ್ 14 ರಿಂದ 24 ಹಾಗೂ ಇತರರು 3 ಸ್ಥಾನದಲ್ಲಿ ಗೆಲ್ಲಲಿದೆ ಎಂದಿತ್ತು. ಪೋಲ್‌ಸ್ಟಾರ್ಟ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 99 ರಿಂದ 109, ಬಿಜೆಪಿ 88 ರಿಂದ 98, ಜೆಡಿಎಸ್ 21 ರಿಂದ 26 ಹಾಗೂ ಇತರರು 4 ಸ್ಥಾನದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿತ್ತು. ಜಿ ನ್ಯೂಸ್ ಮ್ಯಾಟ್ರಿಜ್ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ 103 ರಿಂದ 118 , ಬಿಜೆಪಿ 79 ರಿಂದ 94, ಜೆಡಿಎಸ್ 25 ರಿಂದ 33 ಹಾಗೂ ಇತರರು 2 ರಿಂದ 5 ಸ್ಥಾನ ಗೆಲ್ಲಲಿದೆ ಎಂದಿತ್ತು.
Karnataka Election Result 2023 ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಭರವಸೆ ಈಡೇರಿಕೆ;ಗೆಲುವಿನ ಬೆನ್ನಲ್ಲೇ ರಾಹುಲ್
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.