Karnataka election result 2023: ವೀಕ್ಷಕರ ವರದಿ ಆಧರಿಸಿ ಹೈಕಮಾಂಡ್‌ನಿಂದ ಸಿಎಂ ಆಯ್ಕೆ! ನಾಳೆಯೇ ತೀರ್ಮಾನ

ಶಾಸಕಾಂಗ ಪಕ್ಷದ ಸಭೆಯ ಕುರಿತು ಹೈಕಮಾಂಡ್‌ಗೆ ಸಲ್ಲಿಸುವ ವೀಕ್ಷಕರ ವರದಿ ಆಧರಿಸಿ ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನಿಸಲಾಗುತ್ತದೆ.

Karnataka election result 2023 Chief Minister selected by High Command based on observer report sat

ಬೆಂಗಳೂರು (ಮೇ 14): ರಾಜ್ಯದಲ್ಲಿ ಕಾಂಗ್ರೆಸ್‌ 30 ವರ್ಷಗಳ ಬಳಿಕ ಭಾರಿ ಬಹುಮತ ಪಡೆದುಕೊಂಡಿದೆ.  ಸರ್ಕಾರ ರಚನೆಗೆ ಕಸರತ್ತು ನಡೆಸಿರುವ ರಾಜ್ಯ ನಾಯಕರು ಮುಖ್ಯಮಂತ್ರಿ ಹುದ್ದೆಗಾಗಿ ಭಾರಿ ಪೈಪೋಟಿಯನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಸಂಜೆ ಶಾಸಕಾಂಗದ ಸಭೆ ನಡೆಸಲಾಗಿದ್ದು, ಈ ವೇಳೆ ಕೇಂದ್ರದಿಂದ ಆಗಮಿಸಿದ ವೀಕ್ಷಕರ ವರದಿಯನ್ನು ಆಧರಿಸಿ ಹೈಕಮಾಂಡ್‌ ನೂತನ ಮುಖ್ಯಮಂತ್ರಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂದು ಅಭಿಪ್ರಾಯ ಪಡೆಯಲಿದ್ದಾರೆ. ಆದರೆ, ಕೇಂದ್ರದಿಂದ ಆಗಮಿಸಿದ ವೀಕ್ಷಕರು, ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ. ಈ ವರದಿಯನ್ನು ಆಧರಿಸಿ ಕೇಂದ್ರದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನಿಸಿ ಕರುನಾಡಿಗೆ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಹುದ್ದೆಯ ಪ್ರಮಾಣ ವಚನ ಸ್ವೀಕಾರದ ದಿನಾಂಕವೂ ನಿಗದಿ ಆಗಲಿದೆ.

Karnataka Election Result: ಸಿಎಂ ಕುರ್ಚಿ ಫೈಟ್‌ಗೆ ಪ್ರಬಲ ಸಮುದಾಯಗಳ ಎಂಟ್ರಿ: ಹೈಕಮಾಂಡ್‌ಗೆ ಟೆನ್ಶನ್‌ ಶುರು

ಮುಖ್ಯಮಂತ್ರಿ ಅಭ್ಯರ್ಥಿಗಳೊಂದಿಗೆ ಪ್ರತ್ಯೇಕ ಚರ್ಚೆ: ಕರ್ನಾಟಕದ ಮುಖ್ಯಮಂತ್ರಿಗಳ ಅಭ್ಯರ್ಥಿಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನಡುವೆ ಭಾರಿ ಪೈಪೋಟಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಮಗ್‌ ಸುರ್ಜೇವಾಲಾ ಅವರು ಇಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿಕೊಂಡು ಮಾತುಕತೆ ನಡೆಸುತ್ತಿದ್ದಾರೆ. ಇಲ್ಲಿ ಯಾವ ಅಭಿಪ್ರಾಯ ಬರುತ್ತದೆ ಎಂದುಕೊಂಡು ತಿಳಿದುಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ನಂತರ, ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುತ್ತದೆ.

ಸಿಎಂ ಸೀಟು ಬಿಟ್ಟುಕೊಡಲು ಸಿದ್ಧರಾದರೇ ಸಿದ್ದು: ರಾಜ್ಯ ರಾಜಧಾನಿ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಲು ಸಿದ್ದರಾಮಯ್ಯ ಚಿಂತನೆ ಮಾಡಿದ್ದಾರೆ. ಎರಡೂ ಸೂತ್ರಕ್ಕೂ ಓಕೆ ಅನ್ನಲು ಸಿದ್ದರಾಮಯ್ಯ ಟೀಮ್ ನಿಂದ ತಿರ್ಮಾನ ಮಾಡಿದೆ. ಸೂತ್ರ ಒಂದು - ಶಾಸಕರ ಅಭಿಪ್ರಾಯದಂತೆ ನಾಯಕನ ಆಯ್ಕೆಯಾಗಲಿ ಎನ್ನುವುದು. ಎರಡನೇ ಸೂತ್ರ: - ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ಸಿಂಗಲ್ ಲೈನ್ ತಿರ್ಮಾನ ಮಾಡಲು ಸಹ ಓಕೆ ಎಂದಿದ್ದಾರೆ. ಸಿದ್ದರಾಮಯ್ಯ ಕೊನೆಯ ಸುತ್ತಿನ ಆಪ್ತರ ಸಭೆಯಲ್ಲಿ ಚರ್ಚೆ ಮಾಡಿ ನಿರ್ಣಯಕ್ಕೆ ಬಂದಿದ್ದಾರೆ. 

ಸಿದ್ದು- ಡಿಕೆಶಿ ಪರ ಮೊಳಗಿದ ಘೋಷಣೆ: ಇನ್ನು ಬೆಂಗಳೂರಿನ ಶಾಸಕಾಂಗ ಸಭೆ ನಡೆಯುವ ಶಾಂಗ್ರಿಲಾ ಹೋಟೆಲ್‌ ಬಳಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಪರವಾಗಿ ಬೆಂಬಲಿಗ ಶಾಸಕರು ಘೋಷಣೆ ಕೂಗುತ್ತಿದ್ದಾರೆ. ಸಿದ್ದು ಸಿಎಂ ಎಂದು ಸಿದ್ದರಾಮಯ್ಯ ಬೆಂಬಲಿಗರು ಘೋಷಣೆ ಕೂಗಿದರೆ, ಮತ್ತೊಂದು ಕಡೆ ಡಿಕೆ.. ಡಿಕೆ.. ನೆಕ್ಟ್‌ ಸಿಎಂ ಡಿಕೆ... ಎಂದು ಘೋಷಣೆ ಕೂಗುತ್ತಿದ್ದಾರೆ. ಇದರಿಂದ ಶಾಂಗ್ರಿಲಾ ಹೋಟೆಲ್‌ನಲ್ಲಿ ಇನ್ನೂ ಎರಡೂ ಬಣಗಳ ನಡುವೆ ಲಾಬಿ ನಡೆಯುತ್ತಿದ್ದು, ಸಿಎಂ ಆಯ್ಕೆ ಕಸರತ್ತಿನಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Karnataka election result 2023: ಸಿದ್ದುಗೆ ಶಾಸಕರ ಜೈಕಾರ, ಹೈಕಮಾಂಡ್‌ ಡಿಕೆಶಿ ಪರ!

ಉತ್ತಮ ಆಡಳಿತ ನೀಡುವುದು ಅತಿಮುಖ್ಯ:  ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ಮುಖ್ಯವಾಗಿದೆ. ಇಡೀ ದೇಶದಲ್ಲಿಯೇ ಕಾಂಗ್ರೆಸ್‌ ಮುಳುಗುವ ಹಡಗು ಎಂದು ಹೇಳುತ್ತಿದ್ದ ಅವಧಿಯಲ್ಲಿ ಕಾಂಗ್ರೆಸ್‌ ನಾಯಕರ ಭರವಸೆ ಮತ್ತು ಗ್ಯಾರಂಟಿಗಳನ್ನು ಒಪ್ಪಿಕೊಂಡು ಭಾರಿ 30 ವರ್ಷಗಳಲ್ಲಿಯೇ ಕೊಡದಷ್ಟು ಬಹುಮತಗಳನ್ನು ಕರ್ನಾಟಕದ ಮತದಾರರು ಕೊಟ್ಟಿದ್ದಾರೆ. ಈಗ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡುವುದು ಕಾಂಗ್ರೆಸ್‌ಗೆ ಭಾರಿ ಮುಖ್ಯವಾಗಿದೆ. ಇನ್ನು ಒಮದು ವರ್ಷದಲ್ಲಿ ಕಾಂಗ್ರೆಸ್‌ ನೀಡುವ ಆಡಳಿತದ ಮೇಲೆ 2024ರ ಲೋಕಸಭಾ ಚುನಾವಣೆಯ ಮೇಲೆಯೂ ಪರಿಣಾಮ ಬೀರಲಿದೆ. 

Latest Videos
Follow Us:
Download App:
  • android
  • ios