Karnataka election result 2023: ಸಿದ್ದುಗೆ ಶಾಸಕರ ಜೈಕಾರ, ಹೈಕಮಾಂಡ್‌ ಡಿಕೆಶಿ ಪರ!

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಫೈಪೋಟಿ ಆರಂಭವಾಗಿದ್ದು, ಶಾಸಕರಿಂದ ಸಿದ್ದರಾಮಯ್ಯಗೆ ಹಾಗೂ ಹೈಕಮಾಂಡ್‌ನಿಂದ ಡಿ.ಕೆ. ಶಿವಕುಮಾರ್‌ಗೆ ಬೆಂಬಲ ವ್ಯಕ್ತವಾಗುತ್ತಿದೆ.

Karnataka election result 2023 MLAs wants Siddaramaiah High Command Support DK Shivakumar for CM post sat

ಬೆಂಗಳೂರು (ಮೇ 14): ದೇಶದ ರಾಜಕೀಯ ಚಿತ್ರಣದಲ್ಲಿಯೇ ಅತ್ಯಂತ ಮಹತ್ವದ ಚುನಾವಣೆಯಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭಾರಿ ಬಹುಮತವನ್ನು ಗಳಿಸಿದೆ. ಇನ್ನು ಅಧಿಕಾರವನ್ನು ಹಿಡಿಯಲು ಕೆಲವು ಕ್ಷಣಗಣನೆ ಆರಂಭಿಸಿರುವ ಕಾಂಗ್ರೆಸ್‌ ನಾಯಕರು ಸಿಎಂ ಹುದ್ದೆಗಾಗಿ ಫೈಟ್‌ ಆರಂಭಿಸಿದ್ದಾರೆ. ಆದರೆ, ಶಾಸಕರ ಬಹುಮತ ಸಿದ್ದರಾಮಯ್ಯಗೆ ಇದ್ದು, ಹೈಕಮಾಂಡ್‌ನಿಂದ ಡಿ.ಕೆ. ಶಿವಕುಮಾರ್‌ ಕಡೆಗೆ ಒಲವಿದೆ. ಈಗ ಸಿಎಂ ಖುರ್ಚಿ ಫೈಟ್‌ಗೆ ಸಮುದಾಯಗಳ ಮುಖಂಡರು ಕೂಡ ಪಟ್ಟು ಹಿಡಿದಿದ್ದಾರೆ.

ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಇನ್ನೇನು ಉಳಿಗಾಲವೇ ಇಲ್ಲ ಎನ್ನುವಂತಹ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ನೇತೃತ್ವದಲ್ಲಿ ನಾಲ್ಕನೇ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆ (Karnataka election result 2023) ಇಡೀ ದೇಶದಲ್ಲಿ ಭಾರಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ರಾಜ್ಯದಲ್ಲಿ ಗೆದ್ದು ಸೋನಿಯಾ ಗಾಂಧಿಗೆ ಗಿಫ್ಟ್‌ ಕೊಡುತ್ತೇನೆ ಎಂದು ಹೇಳಿದಂತೆ ಮಾತು ಉಳಿಸಿಕೊಂಡಿದ್ದಾರೆ. ಇನ್ನು ಇಡೀ ರಾಜ್ಯದ ಜನತೆಗೆ, ಬಿಜೆಪಿಯ ಭ್ರಷ್ಟಾಚಾರ ಮತ್ತು ದುರಹಂಕಾರದ ಆಡಳಿತ ಕೊನೆಗಳಿಸಿ, ಬಡಜನರಿಗೆ ಅನುಕೂಲ ಆಗುವಂತಹ ವಾತಾವಣ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದು, ಈಗ ಅದನ್ನು ಈಡೇರಿಸುವ ಕಾಲ ಸನ್ನಿಹಿತವಾಗಿದೆ.

Karnataka election results 2023: ನಾನೇ ಸಿಎಂ 'ಆಗ್ಬೇಕು', ಹೈಕಮಾಂಡ್‌ ಮುಂದೆ ಡಿಕೆಶಿ ಪಟ್ಟು

ಶಾಸಕರಿಂದ ಸಿದ್ದರಾಮಯ್ಯಗೆ ಬೆಂಬಲ: ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತವನ್ನು ಗಳಿಸಿದ ಕೂಡಲೇ ಸಾಂಪ್ರದಾಯಿಕವಾಗಿ ಕೆಪಿಸಿಸಿ ಅಧ್ಯಕ್ಷರೇ (KPCC President)  ಸಿಎಂ ಆಗಬೇಕು. ಆದರೆ, 2013ರಲ್ಲಿ ಈ ನಿಯಮ ಮೀರಲಾಗಿದ್ದು, ಈ ಬಾರಿಯೂ ಕೂಡ ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಲಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಕಾರಣ ರಾಜ್ಯದ 135 ಶಾಸಕರ ಪೈಕಿ ಕನಿಷ್ಠ 90ಕ್ಕೂ ಅಧಿಕ ಶಾಸಕರು ಸಿದ್ದರಾಮಯ್ಯ Siddaramaiah) ಅವರ ಪರವಾಗಿ ಜೈ ಎನ್ನಲು ಸಿದ್ಧವಾಗಿದ್ದಾರೆ. ಇನ್ನು ಸಿದ್ದರಾಮಯ್ಯ ಅವರೂ ಕೂಡ ತಮಗೆ ಅಧಿಕಾರಿ ನಡೆಸಲು ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಬೇಡಿಕೊಂಡು, ಬಹಿರಂಗವಾಗಿ ಸಿಎಂ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಈಗ ಶಾಸಕಾಂಗ ಸಭೆ ನಡೆಸಿದರೂ ಸಿದ್ದರಾಮಯ್ಯಗೆ ಹೆಚ್ಚಿನ ಶಾಸಕರು ಬೆಂಬಲ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಹೈಕಮಾಂಡ್‌ನಿಂದ ಡಿಕೆಶಿಗೆ ಗಿಫ್ಟ್‌ ಕೊಡಲು ಚಿಂತನೆ: ಇನ್ನು ನಾಳೆ (ಮೇ 15) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ (DK Shivakumar Birthday) ಜನ್ಮದಿನವಿದೆ. ನಾಳೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲ್ಲಿಸಿಕೊಂಡು ಬಂದಿದ್ದೇನೆ ಎಂಬ ಗಿಫ್ಟ್‌ ಕೊಟ್ಟು ಆಶೀರ್ವಾದ ಪಡೆಯಲಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾಗಾಂಧಿ ಭರ್ಜರಿ ಗಿಫ್ಟ್‌ (huge gift) ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರೆ, ಆ ಗಿಪ್ಟ್‌ ಸಿಎಂ ಹುದ್ದೆಯೇ ಆಗಿರುತ್ತದೆ ಎಂಬ ಭಾರಿ ನಂಬಿಕೆಯಲ್ಲಿದ್ದಾರೆ. ಇನ್ನು ಸೋನಿಯಾಗಾಂಧಿಗೂ ಕೂಡ ಸಿದ್ದರಾಮಯ್ಯಗಿಂತ ಡಿಕೆಶಿ ಪರವೇ ಹೆಚ್ಚಿನ ಒಲವಿದ್ದು, ಯಾ ತೀರ್ಮಾನ ಕೈಗೊಳ್ಳುತ್ತಾರೋ ನೋಡಬೇಕಿದೆ. 

‘ಕೈ’ ಹೈಕಮಾಂಡ್‌ ಮುಂದೆ ಸಿಎಂ ಆಯ್ಕೆ ಸವಾಲು: ಮೂವರು ವೀಕ್ಷಕರನ್ನು ನೇಮಿಸಿದ ಎಐಸಿಸಿ

ಇಬ್ಬರಿಂದಲೂ ಸಿಎಂ ನಾನೇ ಎಂದು ಘೋಷಣೆ: ರಾಜ್ಯದ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಸಮಿದಾಯಗಳ ಸಭೆಯಲ್ಲಿ ಕಾಂಗ್ರೆಸ್‌ನ ಇಬ್ಬರೂ ಸಿಎಂ ಅಭ್ಯರ್ಥಿಗಳೆಂದೇ ಹೇಳಲಾಗುವ ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಸಭೆಯಲ್ಲಿ ಹಾಗೂ ಕೆಪಿಸಿಸಿ ಅಧ್ಯಕ್ಷ ಒಕ್ಕಲಿಗ ಮೀಸಲಾತಿ ಕುರಿತ ಹೋರಾಟದ ಸಭೆಯಲ್ಲಿ ತನ್ನನ್ನು ಸಿಎಂ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ, ಈಗ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಸಿಕ್ಕಿದ್ದು, ಸಿಎಂ ಯಾರಾಗಲಿದ್ದಾರೆ ಎಂಬುದೇ ರಾಜ್ಯದ ಜನರಲ್ಲಿ ಕುತೂಹಲ ಕೆರಳಿದೆ.

Latest Videos
Follow Us:
Download App:
  • android
  • ios