Asianet Suvarna News Asianet Suvarna News

ಮೀಸಲಾತಿ ಕೇವಲ ರಾಜಕೀಯ ಗಿಮಿಕ್‌: ಸಿದ್ದರಾಮಯ್ಯ

ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿರುವುದಾಗಿ ಹೇಳುತ್ತಿರುವ ಬಿಜೆಪಿ ಸರ್ಕಾರ ಸಂವಿಧಾನದ 9ನೇ ಶೆಡ್ಯೂಲ್‌ದಲ್ಲಿ ಸೇರಿಸದೇ ಮೋಸ ಮಾಡಿದೆ. ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿರುವುದು, ಒಳ ಮೀಸಲಾತಿ ಒದಗಿಸಿರುವುದೆಲ್ಲ ಕೇವಲ ಇದೊಂದು ರಾಜಕೀಯ ಗಿಮಿಕ್‌ ಮಾತ್ರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

Karnataka election Reservation is just a political gimmick: saysSiddaramaiah at rayabag rav
Author
First Published Apr 28, 2023, 9:35 AM IST

ರಾಯಬಾಗ (ಏ.28) :  ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿರುವುದಾಗಿ ಹೇಳುತ್ತಿರುವ ಬಿಜೆಪಿ ಸರ್ಕಾರ ಸಂವಿಧಾನದ 9ನೇ ಶೆಡ್ಯೂಲ್‌ದಲ್ಲಿ ಸೇರಿಸದೇ ಮೋಸ ಮಾಡಿದೆ. ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿರುವುದು, ಒಳ ಮೀಸಲಾತಿ ಒದಗಿಸಿರುವುದೆಲ್ಲ ಕೇವಲ ಇದೊಂದು ರಾಜಕೀಯ ಗಿಮಿಕ್‌ ಮಾತ್ರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah)ಆರೋಪಿಸಿದರು.

ಪಟ್ಟಣದ ಆರ್‌ವಿಆರ್‌ ಕಾಲೇಜ ಮೈದಾನದಲ್ಲಿ ಮಂಗಳವಾರ ರಾಯಬಾಗ ಮತಕ್ಷೇತ್ರದ (Rayabag assembly constituency) ಕಾಂಗ್ರೆಸ್‌ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿ, ನಿಷ್ಕಿ್ರೕಯಗೊಂಡಿದೆ. ಮತದಾರರಲ್ಲಿ ಮತ ಕೇಳಲು ಸಹಿತ ಅವರಿಗೆ ನೈತಿಕತೆ ಇಲ್ಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಆಪ್‌ ಅಧಿಕಾರಕ್ಕೆ ಬಂದರೆ ಜಾತಿ ಆಧಾರದಲ್ಲಿ ಮೀಸಲು: ಮುಖ್ಯಮಂತ್ರಿ ಚಂದ್ರು

ಶಾಸಕಿ ಲಕ್ಷ್ಮೀ ಹೆಬ್ಬಾಳಕರ(Lakshmi hebbalkar), ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ(Satish jarkiholi), ಎಂಎಲ್‌ಸಿ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಎಸ್‌.ಬಿ.ಘಾಟಗೆ, ಮಾಜಿ ಸಂಸದ ಅಮರಸಿಂಹ ಪಾಟೀಲ ಮಾತನಾಡಿದರು. ಎಂಎಲ್‌ಸಿ ಪ್ರಕಾಶ ರಾಠೋಡ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ರಾಹುಲ್‌ ಜಾರಕಿಹೊಳಿ, ಡಾ.ಎನ್‌.ಎ.ಮಗದುಮ್ಮ, ಸಂಜೀವಕುಮಾ ಬಾನೆಸರಕಾರ, ಅರ್ಜುನ ನಾಯಿಕವಾಡಿ, ಸದಾಶಿವ ದೇಶಿಂಗೆ, ತ್ರಿಕಾಲ ಪಾಟೀಲ, ಸಿದ್ದು ಬಂಡಗರ, ರೇವಣ್ಣ ಸರವ, ನಿರ್ಮಲಾ ಪಾಟೀಲ, ಶಂಕರಗೌಡ ಪಾಟೀಲ, ಅಪ್ಪಾಸಾಬ್‌ ಕುಲಗುಡೆ, ನಾಮದೇವ ಕಾಂಬಳೆ, ಜಯಶ್ರೀ ಮೊಹಿತೆ, ಸತ್ತಾರ ಮುಲ್ಲಾ, ದಿಲೀಪ ಜಮಾದಾರ, ಹಾಜಿ ಮುಲ್ಲಾ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರಧಾನಿ ಮೋದಿ ಕಾರ್ಯಕ್ರಮ ಬರೀ ಗಿಮಿಕ್‌: ಸಿದ್ದು ಟೀಕೆ

ಸಿಎಂ ಬೊಮ್ಮಾಯಿ ರಾಜ್ಯದ ಅತ್ಯಂತ ಭ್ರಷ್ಟಸಿಎಂ ಎಂದು ಹೇಳಿದ್ದು, ಅದನ್ನು ತಿರುಚಿ ಲಿಂಗಾಯತ ಸಿಎಂ ಭ್ರಷ್ಟ್ರರು ಎಂದು ಹೇಳಿದ್ದೇನೆಂದು ತಮ್ಮ ವಿರುದ್ಧ ಅಪಪ್ರಚಾರ ಮಾಡಿ ಒಂದು ಜಾತಿಯನ್ನು ಎತ್ತಿಕಟ್ಟುವ ಕೆಲಸ ಬಿಜೆಪಿ ಮಾಡುತ್ತಿದೆ. ತಾವು ಸಿಎಂ ಆಗಿದ್ದಾಗ ಎಲ್ಲ ವರ್ಗ, ಧರ್ಮದ ಜನರಿಗೆ ಎಲ್ಲ ಭಾಗ್ಯಗಳನ್ನು ತಂದಿದ್ದೆ. ಈಗ ಅವುಗಳನ್ನು ಬಂದ ಮಾಡುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ 1 ತಿಂಗಳಲ್ಲಿ ನಾವು ಮತದಾರರಿಗೆ ಕೊಟ್ಟಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ರಾಯಬಾಗ ಮತಕ್ಷೇತ್ರದ ಭೆಂಡವಾಡ, ಕರಗಾಂವ, ಹನುಮಾನ ಹಾಗೂ ಕೊಟಬಾಗಿ 3ನೇ ಹಂತದ ನೀರಾವರಿ ಯೋಜನೆಗಳನ್ನು ಜಾರಿಗಾಗಿ ಹಣ ನೀಡುತ್ತೇವೆ.

ಸಿದ್ದರಾಮಯ್ಯ, ಮಾಜಿ ಸಿಎಂ.

Follow Us:
Download App:
  • android
  • ios