ಈ ಮೊದಲು ಭವಾನಿ ರೇವಣ್ಣ ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ  ಹೆಚ್ ಡಿ ರೇವಣ್ಣ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವೆ ಮುನಿಸು ಇತ್ತು. ಇದೀಗ ವೈಎಸ್‌ವೈ ದತ್ತಾ ಮರಳಿ ಪಕ್ಷಕ್ಕೆ ಬರುತ್ತಿರುವುದಕ್ಕೆ ಕಿಚ್ಚು ಆರಂಭವಾಗಿದೆ.

ಕಲಬುರಗಿ(ಏ.13): ರಾಜ್ಯ ರಾಜಕೀಯದಲ್ಲಿ ಸದ್ಯಕ್ಕೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಟಿಕೆಟ್ ವಿಚಾರವಾಗಿ ದಳಪತಿಗಳ ಕಾದಾಟದಲ್ಲಿ ಸಹೋದರರ ನಡುವಿನ ವೈಮನಸ್ಸು ಮುಂದುವರೆದಿದೆ. ಈ ಮೊದಲು ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿ ಹೆಚ್ ಡಿ ರೇವಣ್ಣ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವೆ ಮುನಿಸು ಇತ್ತು. ಇದೀಗ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ವೈ ಎಸ್ ವಿ ದತ್ತಾ ಮರಳಿ ಜೆಡಿಎಸ್‌ ಸೇರ್ಪಡೆಯಾಗುತ್ತಿರುವುದು ಕುಮಾರಸ್ವಾಮಿಗೆ ಇಷ್ಟವಿಲ್ಲ. ಇದು ಕೂಡ ಸಹೋದರರ ನಡುವೆ ಕಿಚ್ಚು ಹಚ್ಚಿದೆ. 

ರೇವಣ್ಣ ದತ್ತಾ ಭೇಟಿಗೆ ಹೆಚ್‌ಡಿಕೆ ತೀಕ್ಷ್ಣ ಪ್ರತಿಕ್ರಿಯೆ:
ಇನ್ನು ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿಯ ನಿಲುವುವೇನು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಸದ್ಯ ಕಲಬುರಗಿ ಪ್ರವಾಸದಲ್ಲಿರುವ ಹೆಚ್‌ಡಿಕೆ ವೈಎಸ್ ವಿ ದತ್ತರನ್ನ ರೇವಣ್ಣ ಪ್ರಜ್ವಲ್ ಭೇಟಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದೆಲ್ಲಾ ದೊಡ್ಡವರದ್ದು. ಅವರದ್ದು ನನಗೆ ಗೊತ್ತಿಲ್ಲ. ದತ್ತಾ ನನಗೆ ಸಂಪಕರ್ದಲ್ಲಿಲ್ಲ, ನನ್ನೊಂದಿಗೆ ಅವರು ಅನ್ಯೋನ್ಯವಾಗಿಲ್ಲ. ಈಗಷ್ಟೇ ಅಲ್ಲ ಅವರು ಶಾಸಕರಾಗಿದ್ದಾಗಲೂ ನನ್ನೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಅವರೊಂದಿಗೆ ರೇವಣ್ಣ , ಪ್ರಜ್ವಲ್ ಸಂಬಂಧ ಇಟ್ಟುಕೊಂಡಿದ್ದಾರೆ. ದತ್ತಾಗೆ ನನ್ನ ಅವಶ್ಯಕತೆ ಇಲ್ಲ. ಅವರು ನನಗೆ ಬೇಕಾಗಿಲ್ಲ. ದತ್ತಾ ಪಕ್ಷಕ್ಕೆ ಬರೋದು ಬಿಡೋದು ದೇವೇಗೌಡರು ತೀರ್ಮಾನ ತಗೋತಾರೆ. ಕಡೂರು ಹಾಸನ ಲೋಕ ಸಭಾ ವ್ಯಾಪ್ತಿಯಲ್ಲಿ ಬರುತ್ತೆ. ಹಾಗಾಗಿ ಅದು ಅವರೇ ಭೇಟಿಯಾಗಿದ್ದಾರೆ. ನನಗೇನೂ ಗೊತ್ತಿಲ್ಲ . ವೈಎಸ್ ವಿ ದತ್ತ ಸೇರ್ಪಡೆ ಬಗ್ಗೆ ಸಹ ಮಾಹಿತಿಯಿಲ್ಲ. ಪ್ರವಾಸ‌ ಮುಗಿದ ಬಳಿಕ ಇದರ ಬಗ್ಗೆ‌ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ. 

ಭವಾನಿ ರೇವಣ್ಣ ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ಗುಟ್ಟು: ಇನ್ನು ಭವಾನಿ ರೇವಣ್ಣ ಚಾಮರಾಜ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಾತನಾಡಿದ ಮಾಜಿ ಸಿಎಂ‌ ಎಚ್.ಡಿ.ಕುಮಾರಸ್ವಾಮಿ ಚಾಮರಾಜ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಫರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ‌ ನಾನು ಪ್ರವಾಸದಲ್ಲಿದ್ದೇನೆ. ಹೀಗಾಗಿ ಅವರ ಸ್ಪರ್ಧೆ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಭವಾನಿ ರೇವಣ್ಣ ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ಗುಟ್ಟು ಬಿಟ್ಟು ಕೊಡಲಿಲ್ಲ.

ಹಳೆಗಂಡನ ಪಾದವೇ ಗತಿ ಮರಳಿ ಜೆಡಿಎಸ್‌ಗೆ ವೈಎಸ್‌ವಿ ದತ್ತಾ, ಏ.18 ನಾಮಪತ್ರ ಸಲ್ಲಿಕೆ

ದೇವೇಗೌಡರ ಮಾನಸಪುತ್ರ ವೈಎಸ್‌ ವಿ ದತ್ತಾಗೆ ಹೆಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಮರಳಿ ಜೆಡಿಎಸ್ ಸೇರಲು ಆಫರ್ ನೀಡಿದ್ದು, ದತ್ತಾ ಇದಕ್ಕೆ ಒಪ್ಪಿ ಏ.18ರಂದು ಕಡೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಘೋಷಣೆ ಮಾಡಿದ್ದ ದತ್ತಾ ಜೆಡಿಎಸ್ ಆಹ್ವಾನ ಹಿನ್ನೆಲೆ ತಮ್ಮ ನಿರ್ಧಾರ ಬದಲಿಸಿ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ.

ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಹರಿಬಿಟ್ಟ ಹೆಚ್.ಡಿ. ಕುಮಾರಸ್ವಾಮಿ: ಮೋದಿ,

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.