Karnataka election 2023: ದೇವದುರ್ಗ ಶಾಸಕ ಶಿವನಗೌಡ ನಾಯಕಗೆ ಬುದ್ಧಿ ಭ್ರಮಣೆ ಆಗಿದೆ : ಕರೆಮ್ಮ
ಸೋಲಿನ ಹತಾಶೆಯಿಂದ ಶಾಸಕ ಕೆ.ಶಿವನಗೌಡ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದ್ದು ಕೂಡಲೆ ಬಿಜೆಪಿ ಮುಖಂಡರು ಹುಚ್ಚಾಸ್ಪತ್ರೆಗೆ ಕಳುಹಿಸಬೇಕೆಂದು ಕಲ್ಯಾಣ ಕರ್ನಾಟಕ ಜೆಡಿಎಸ್ ವೀಕ್ಷಕರಾದ ಕರೆಮ್ಮ ಜಿ.ನಾಯಕ ತಿಳಿಸಿದರು.
ದೇವದುರ್ಗ: (ಮಾ.12) : ಸೋಲಿನ ಹತಾಶೆಯಿಂದ ಶಾಸಕ ಕೆ.ಶಿವನಗೌಡ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದ್ದು ಕೂಡಲೆ ಬಿಜೆಪಿ ಮುಖಂಡರು ಹುಚ್ಚಾಸ್ಪತ್ರೆಗೆ ಕಳುಹಿಸಬೇಕೆಂದು ಕಲ್ಯಾಣ ಕರ್ನಾಟಕ ಜೆಡಿಎಸ್ ವೀಕ್ಷಕರಾದ ಕರೆಮ್ಮ ಜಿ.ನಾಯಕ(Karemma G Nayak) ತಿಳಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನ್ನ ನೀಡಿದ ಮನೆಗೆ ಕಲ್ಲು ಹೊಡೆಯುವ ಮನೋಭಾವ ಕೆ.ಶಿವನಗೌಡನಾಯಕ(K Shivanagowda Nayak MLA)ರಿಗೆ ಇದೆ. ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಕಂಡಲ್ಲಿ ಶಾಸಕರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ
ಇಂತಹ ಶಾಸಕರಿಂದ ತಾಲೂಕಿನಲ್ಲಿ ರಾಜಕೀಯ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸ್ಥಿತಿ ಯಾವ ಕಾಲಕ್ಕೂ ಇದ್ದಿಲ್ಲ. ಭ್ರಷ್ಟಾಚಾರ ಮಾಡಿ ರಾಯಚೂರು,ಬೆಂಗಳೂರಲ್ಲಿ ಬೆಲೆ ಬಾಳುವ ಆಸ್ತಿ ಸೇರಿದಂತೆ ಸಾವಿರಾರು ಕೋಟಿ ಅಕ್ರಮವಾಗಿ ಗಳಿಸಿದ್ದು, ಹಣದ ಮದದಲ್ಲಿ ಮಾತನಾಡಿದರೆ ಕೋಣೆಯಲ್ಲಿ ಕಾರ್ಯಕರ್ತರು ಕೂಡಿ ಹಾಕುತ್ತಾರೆ. ಜೆಡಿಎಸ್ ನಾಯಕರ ಬಗ್ಗೆ ಏನಂದರೆ ಅದು ಮಾತನಾಡಿರುವ ಅವರು ಕೂಡಲೆ ಮಾಧ್ಯಮ ಮತ್ತು ಜನರ ಮುಂದೆ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಹೋರಾಟಗಳು ತೀವ್ರಗೊಳ್ಳಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಮರೇಶ ಪಾಟೀಲ್ ಪರ್ತಪೂರ, ಸಿದ್ದನಗೌಡ ಮೂಡಲಗುಂಡ, ಶರಣಪ್ಪ ಬಳೆ, ಶಾಲಂ ಉದ್ದಾರ, ದಾವುದ್ ಆವಂಟಿ, ಸಾಬಗೌಡ, ಬಸವರಾಜ ಅರಕೇರಾ, ಈಸಾಕ್ ಮೇಸ್ತ್ರಿ ಹಾಗೂ ಇತರರು ಇದ್ದರು.
ಮಸ್ಕಿ: ಯಡಿಯೂರಪ್ಪಗೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ
ಮಸ್ಕಿ : ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yadiyurappa)ನವರಿಗೆ ಬಸವೇಶ್ವರ ನಗರದ ಬಳಿ ವಿವಿಧ ಸಂಘಟನೆಗಳ ಮುಖಂಡರು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಮಸ್ಕಿ ಪಟ್ಟಣದ ವಾರ್ಡ್ ನಂ.2, 12ರ ಸೋಮನಾಥ ನಗರದಲ್ಲಿ ಕಳೆದ 30 ವರ್ಷಗಳಿಂದ ಟಿಬಿಪಿ ಸರ್ಕಾರಿ ನೀರಾವರಿ ಇಲಾಖೆಗೆ ಸೇರಿದ ಭೂಮಿಯಲ್ಲಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಸುಮಾರು 40 ರಿಂದ 500 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಸುಮಾರು 1500 ಮತದಾರರು ಇದ್ದಾರೆ. ಆದರೆ, ಈವರಗೆ ಪ್ರತಿ ಚುನಾವಣೆಯಲ್ಲಿ ಹಕ್ಕು ಪತ್ರ ಕೊಡಿಸುವುದಾಗಿ ಹೇಳಿ ನಮಗೆ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಆದ್ದರಿಂದ ಇಲ್ಲಿ ವಾಸಿಸುವ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕು. ಕೂಡಲೆ ಹಕ್ಕು ಪತ್ರಗಳನ್ನು ನೀಡಬೇಕು. ಇಲ್ಲದಿದ್ದರೆ ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಹೋರಾಟ ಸಮಿತಿಯ ಮುಖಂಡ ಹನುಮಂತಪ್ಪ ವೆಂಕಟಾಪೂರು, ಮಲ್ಲಯ್ಯ ಬಳ್ಳಾ ಸೇರಿದಂತೆ ವಾರ್ಡಿನ ನೂರಾರು ನಿವಾಸಿಗಳು ಮನವಿ ಪತ್ರವನ್ನು ಬಿಎಸ್ ಯಡಿಯೂರಪ್ಪಗೆ ಸಲ್ಲಿಸಿದರು.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಪೈಪೋಟಿ, ಬಿಜೆಪಿ ಸೋಲಿಸಲು ಜೆಡಿಎಸ್ - ಕಾಂಗ್ರೆಸ್ ರಣತಂತ್ರ
ವಿವಿಧ ಸಂಘಟನೆಗಳಿಂದ ಮನವಿ:
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಅಧ್ಯಕ್ಷ ದುರ್ಗರಾಜ್ ವಟಗಲ್ ಮಸ್ಕಿ ತಾಲೂಕು ಕೇಂದ್ರಕ್ಕೆ ಸಮಗ್ರವಾಗಿ ಸರ್ಕಾರಿ ಕಚೇರಿ ಸೇರಿದಂತೆ ಇನ್ನತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕಿರಣ್ ಮುರಾರಿ ಮಸ್ಕಿ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೇಗೆ ಏರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಕರ್ನಾಟಕ ರೈತ ಸಂಘಟನೆ ಕಾರ್ಯದರ್ಶಿ ಮಾರುತಿ ಜಿನ್ನಾಪೂರು ಮಸ್ಕಿ ತಾಲೂಕಿಗೆ ಪೂರ್ಣಾವಧಿ ಕೋರ್ಚ್ ಸ್ಥಾಪನೆ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಹೆಚ್ಚಿಸಲು ಹಾಗೂ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರಿಗೆ ಪಟ್ಟಾನೀಡುವಂತೆ ಆಗ್ರಹಿಸಿದರು.