ಮಾಜಿ ಸಚಿವ ಲಕ್ಷ್ಮಣ ಸವದಿ ಬಿಜೆಪಿಯಲ್ಲಿಯೇ ಉಳಿದಿದ್ದರೆ ಇನ್ನೂ ದೊಡ್ಡ ಸ್ಥಾನ ಸಿಗುತ್ತಿತ್ತು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

ಬಳ್ಳಾರಿ (ಏ.15): ಮಾಜಿ ಸಚಿವ ಲಕ್ಷ್ಮಣ ಸವದಿ ಬಿಜೆಪಿಯಲ್ಲಿಯೇ ಉಳಿದಿದ್ದರೆ ಇನ್ನೂ ದೊಡ್ಡ ಸ್ಥಾನ ಸಿಗುತ್ತಿತ್ತು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

ಸುದ್ದಿಗಾರರರೊಂದಿಗೆ ಶನಿವಾರ ಮಾತನಾಡಿ, ಚುನಾವಣೆಯಲ್ಲಿ ಸೋತಾಗಲೂ ಬಿಜೆಪಿ ಅವರನ್ನು ಉಪಮುಖ್ಯಮಂತ್ರಿ ಮಾಡಿತ್ತು. ಈಗ ಟಿಕೆಟ್‌ ಸಿಕ್ಕಿಲ್ಲವೆಂಬ ಕಾರಣಕ್ಕೆ ಪಕ್ಷದಿಂದ ಹೊರ ಹೋಗಿರುವುದು ಬೇಸರ ತರಿಸಿದೆ. ಸವದಿ ಅವರ ಈ ನಡೆಯನ್ನು ಪಕ್ಷದ್ರೋಹ ಎನ್ನುವುದಿಲ್ಲ, ಆತುರದ ನಿರ್ಧಾರ ಎಂದಷ್ಟೇ ಹೇಳುವೆ ಎಂದರು.

ಶಾಸಕ ಗೋಪಾಲಕೃಷ್ಣ ರಾಜೀನಾಮೆ ನೋವು ತಂದಿದೆ: ಸಚಿವ ಶ್ರೀರಾಮುಲು

ಶೆಟ್ಟರ್‌ ಕಡೆಗಣಿಸಿಲ್ಲ: ಜಗದೀಶ್‌ ಶೆಟ್ಟರ್‌ರನ್ನು ಪಕ್ಷ ಕಡೆಗಣಿಸಿಲ್ಲ. ಟಿಕೆಟ್‌ ವಿಳಂಬಕ್ಕೆ ಅವರಿಗೆ ಬೇಸರವಾಗಿರಬಹುದು. ಪಕ್ಷದ ನಾಯಕರು ಶೆಟ್ಟರ್‌ ಮನವೊಲಿಸುತ್ತಾರೆ. ರಾಷ್ಟ್ರೀಯ ಪಕ್ಷಕ್ಕೆ ಆಕಾಂಕ್ಷಿಗಳು ಹೆಚ್ಚು, ಟಿಕೆಟ್‌ ಸಿಕ್ಕಿಲ್ಲ ಎಂದಾಗ ಅಲ್ಲಲ್ಲಿ ಬಂಡಾಯ ಏಳುವುದು ಸಹಜ. ಅವರ ಮನ ವೊಲಿಸಲಾಗುವುದು ಎಂದು ಶ್ರೀ ರಾಮುಲು ತಿಳಿಸಿದರು.

ಚುನಾವಣಾ ಆಯೋಗದಿಂದ ವೆಚ್ಚ ವೀಕ್ಷಕರ ನೇಮಕ

ಬಳ್ಳಾರಿ:: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಸಲುವಾಗಿ ಚುನಾವಣಾ ಆಯೋಗವು ಜಿಲ್ಲೆಗೆ ಮೂವರು ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದ್ದಾರೆ.

Karnataka BJP: ವಾರದೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಅಂತಿಮ ಆಗುತ್ತೆ: ಕಟೀಲ್‌

ಕಂಪ್ಲಿ ವಿಧಾನಸಭಾ ಕ್ಷೇತ್ರ ಮತ್ತು ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ರಾವುತ್‌ ಮನೀಶ್‌ ಮಹೇಂದ್ರ ಮೊ. 9141010824, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಯುಧಸ್‌್ತ ಕುಮಾರ್‌ ಅವರ ಮೊ. 9141010825, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಅನಿಸ್‌ ಖಾನ್‌ ಮೊ. 9141010826 ಅವರು ನೇಮಕಗೊಂಡಿದ್ದು, ಇವರು ಅಧಿಸೂಚನೆ ದಿನದಿಂದ ನಿಯೋಜನೆಗೊಂಡಿರುತ್ತಾರೆ. ಚುನಾವಣೆ ಅಕ್ರಮ ಕಂಡುಬಂದಲ್ಲಿ ನೇರವಾಗಿ ಇವರನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.