ರಾಯಚೂರು: ಜೆಡಿಎಸ್ ಎರಡನೇ ಪಟ್ಟಿಯಲ್ಲೂ ಜಿಲ್ಲೆಗಿಲ್ಲ ಸ್ಥಾನ!
ಜೆಡಿಎಸ್ ಪ್ರಕಟಿಸಿರುವ 2ನೇ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಸಿಕ್ಕಿಲ್ಲ, 7 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ ಐದು ಕಡೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದ ಪಕ್ಷದ ಮುಖಂಡರು ಎರಡು ಕಡೆ ಬಾಕಿ ಉಳಿಸಿಕೊಂಡಿದ್ದರು. ಇದೀಗ ಎರಡನೇ ಪಟ್ಟಿಯಲ್ಲಾದರು ಆ ಎರಡೂ ಕ್ಷೇತ್ರಗಳಿಗೆ ಸಮರ್ಥರನ್ನು ಆಯ್ಕೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಹೊಂದಿದ್ದ ಪಕ್ಷದ ಕಾರ್ಯಕರ್ತರು ಇದೀಗ ನಿರಾಸೆಪಟ್ಟಿದ್ದಾರೆ.
ರಾಯಚೂರು (ಏ.15) : ಜೆಡಿಎಸ್ ಪ್ರಕಟಿಸಿರುವ 2ನೇ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಸಿಕ್ಕಿಲ್ಲ, 7 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ ಐದು ಕಡೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದ ಪಕ್ಷದ ಮುಖಂಡರು ಎರಡು ಕಡೆ ಬಾಕಿ ಉಳಿಸಿಕೊಂಡಿದ್ದರು. ಇದೀಗ ಎರಡನೇ ಪಟ್ಟಿಯಲ್ಲಾದರು ಆ ಎರಡೂ ಕ್ಷೇತ್ರಗಳಿಗೆ ಸಮರ್ಥರನ್ನು ಆಯ್ಕೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಹೊಂದಿದ್ದ ಪಕ್ಷದ ಕಾರ್ಯಕರ್ತರು ಇದೀಗ ನಿರಾಸೆಪಟ್ಟಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ವೇಳೆ ಎಲ್ಲೆಡೆ ರಾಜಕೀಯ ಕಾವು ಜೋರು ಪಡೆಯುತ್ತಿದ್ದು, ಅಭ್ಯರ್ಥಿಗಳಿಗೆ ಟಿಕೆಟ್ ಆಯ್ಕೆಯಲ್ಲಿ ರಾಜಕೀಯ ಪಕ್ಷಗಳು ಸೃಷ್ಟಿಸಿಕೊಂಡಿರುವ ಗೊಂದಲವು ರಾಯಚೂರು ಜಿಲ್ಲೆಯ ಚುನಾವಣಾ ವಾತಾವರಣದ ಮೇಲೂ ಪರಿಣಾಮವನ್ನುಂಟು ಮಾಡುತ್ತಿದೆ.
ರಾಯಚೂರು: ಚುನಾವಣೆ ಪ್ರಚಾರದ ವೇಳೆ ಡಾಬಾಕ್ಕೆ ಹೋಗುವ ಮದ್ಯ ಪ್ರಿಯರೇ ಎಚ್ಚರ..!
ಕಳೆದ ಜ.11ರಂದು ಬಿಡುಗಡೆ ಮಾಡಿದ್ದ ಜೆಡಿಎಸ್ ಮೊದಲ ಪಟ್ಟಿ(JDS Candidate list)ಯಲ್ಲಿ ಜಿಲ್ಲೆ 7 ಕ್ಷೇತ್ರಗಳ ಪೈಕಿ ರಾಯಚೂರು ಗ್ರಾಮೀಣ ಕ್ಷೇತ್ರ(Raichur rural assembly constituency)ದಿಂದ ಸಣ್ಣ ನರಸಿಂಹ ನಾಯಕ, ಮಾನ್ವಿ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ(Rajavenkatappa nayak), ಸಿಂಧನೂರಿನ ಹಾಲಿ ಶಾಸಕ ವೆಂಕಟರಾವ ನಾಡಗೌಡ(Venkatarao nadagowda), ದೇವದುರ್ಗದಿಂದ ಕರೆಮ್ಮ ಜಿ.ನಾಯಕ ಮತ್ತು ಲಿಂಗಸುಗೂರಿನಿಂದ ಸಿದ್ದು ವೈ.ಬಂಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರು. ರಾಯಚೂರು ನಗರ ಮತ್ತು ಮಸ್ಕಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಘೊಷಿಸದೇ ಬಾಕಿ ಇಟ್ಟಿದ್ದರು.
ಇದೀಗ ಶುಕ್ರವಾರ ಘೋಷಣೆಯಾಗಿರುವ 2ನೇ ಪಟ್ಟಿಯಲ್ಲಿ ಎರಡೂ ಕ್ಷೇತ್ರಗಳಿಗೆ ಟಿಕೆಟ್ ಖಚಿತವಾಗುತ್ತವೆ ಎನ್ನುವ ವಿಶ್ವಾಸ ಹೊಂದಿದ ಪಕ್ಷದ ಮುಖಂಡರು ಗೊಂದಲದಲ್ಲಿ ಮುಳುಗಿದ್ದಾರೆ.
ರಾಯಚೂರು ನಗರ ಕ್ಷೇತ್ರದಿಂದ ಕಾಂಗ್ರೆಸ್ ಯಾರಿಗೆ ಟಿಕೆಟ್ ಕೊಡುತ್ತದೆ ಎನ್ನುವ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿರುವ ಕಾರಣಕ್ಕೆ ಜೆಡಿಎಸ್ ಅಭ್ಯರ್ಥಿಯ ಅಧಿಕೃತ ಘೊಷಣೆಯನ್ನು ಪಕ್ಷದ ಮುಖಂಡರು ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗಿದೆ.
ರಾಯಚೂರು ಕದನ: ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಹಾಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಸ್ಪರ್ಧೆ ಖಚಿತಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್ನಿಂದ ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆದಿದ್ದು, ಕೆಲವೇ ದಿನಗಳಲ್ಲಿ ಬಾಕಿ ಉಳಿದ ರಾಯಚೂರು ನಗರ ಮತ್ತು ಮಸ್ಕಿ ಕ್ಷೇತ್ರಕ್ಕೆ ಸಮರ್ಥರನ್ನು ಪಕ್ಷದ ವರಿಷ್ಠರು ಘೋಷಣೆ ಮಾಡಲಿದ್ದಾರೆ ಎಂದು ಜೆಡಿಎಸ್ನ ಪ್ರಮುಖ ಮುಖಂಡರೊಬ್ಬರು ತಿಳಿಸಿದ್ದಾರೆ.