Asianet Suvarna News Asianet Suvarna News

ನಾವು ಐತಿಹಾಸಿಕ ಸಮಾವೇಶ ಮಾಡ್ತೇವೆ. ಇಂಥ ಕಾರ್ಯಕ್ರಮ ಹಿಂದೆ ನಡೆದಿಲ್ಲ; ಮುಂದೆ ನಡೆಯೋದಿಲ್ಲ: ಎಚ್‌ಡಿಕೆ

ಬಿಜೆಪಿಯವ್ರು ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ. ಜಾಹೀರಾತು ಎರಡ್ಮೂರು ಪೇಜ್ ಹಾಕ್ತಾರೆ. ಅದು ನೋಡೋದಿಕ್ಕೆ ಅಸಹ್ಯ ಆಗುತ್ತೆ. ಯಾರಪ್ಪನ ಮನೆ ದುಡ್ಡಲ್ಲಿ ಇವರು ಜಾಹೀರಾತು ಕೊಡ್ತಾ ಇದ್ದಾರೆ? ಜಾಹೀರಾತಿಗೆ ಜನರ ತೆರಿಗೆ ಹಣವನ್ನು ಬಳಸ್ತಾ ಇದ್ದಾರೆ ಬಿಜೆಪಿ ವಿರುದ್ಧ  ಕೆಂಡಾಮಂಡಲಾರದ ಎಚ್‌ಡಿ ಕುಮಾರಸ್ವಾಮಿ.

Karnataka election news HD Kumaraswamy outaraged against BJP Govt at bengaluru rav
Author
First Published Mar 25, 2023, 2:29 PM IST

ಬೆಂಗಳೂರು (ಮಾ.25) : ಪಂಚರತ್ನ ರಥಯಾತ್ರೆ ಸಮಾರೋಪ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಇಂಥ ಕಾರ್ಯಕ್ರಮ ಹಿಂದೆ ನಡೆದಿಲ್ಲ, ಮುಂದೆಯೂ ನಡೆಯೋದಿಲ್ಲ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಂಚರತ್ನ ರಥಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕ ದಿಂದಲೂ ಜನರು ಬರ್ತಾ ಇದ್ದಾರೆ. ಅದಕ್ಕಾಗಿ ಹತ್ತು ಸಾವಿರ ಬಸ್ ಗಳನ್ನು ನಿಗದಿ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಸಭೆ ಆಗಲಿದೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಡೆಯಲಿದೆ. ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮ ಯಶಸ್ಸು ಕಾಣುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿದ ಎಚ್‌ಡಿ ಕುಮಾರಸ್ವಾಮಿ, ವಿಧಾನಸಭಾ ಚುನಾವಣೆ ಹಿನ್ನೆಲೆ ಭೇಟಿಯಾಗಿದ್ದು. ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.

ನಾನು ಬಿಜೆಪಿ-ಕಾಂಗ್ರೆಸ್‌ನಿಂದ ಅನುಭವಿಸಿದ ಕಷ್ಟ ನನಗಷ್ಟೇ ಗೊತ್ತು: ರೈತರಿಗೆ ಭಾವನಾತ್ಮಕ ಪತ್ರ ಬರೆದ ಎಚ್‌ಡಿಕೆ

ದೇಶ, ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಿದ್ದೇವೆ. ಮುಂದಿನ ಚುನಾವಣೆ ಬಗ್ಗೆಯೂ ಚರ್ಚೆ ಆಗಿದೆ. ವಿರೋಧ ಪಕ್ಷಗಳು ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ನಡೆಯುವ ಎರಡ್ಮೂರು ಸಭೆಯಲ್ಲಿ ಅವರು ಭಾಗಿಯಾಗುವ ಇಚ್ಚೆ ಹೊಂದಿದ್ದಾರೆ ಎಂದರು.

ಮೀಸಲಾತಿ ವಿಚಾರ ಪ್ರಸ್ತಾಪಿಸಿದ ಎಚ್‌ಡಿಕೆ ಬಿಜೆಪಿ ಸರ್ಕಾರ ಜನರ ಭಾವನೆಗಳ ಜತೆಗೆ ಚೆಲ್ಲಾಟ ಆಡುತ್ತಿದೆ ಎಂದು ಕಿಡಿಕಾರಿದರು

ಎರಡ್ಮೂರು ಪೇಜ್ ಜಾಹೀರಾತು ಹಾಕ್ತಾರೆ ಅಸಹ್ಯ:

ಬಿಜೆಪಿಯವ್ರು ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ. ಜಾಹೀರಾತು ಎರಡ್ಮೂರು ಪೇಜ್ ಹಾಕ್ತಾರೆ. ಅದು ನೋಡೋದಿಕ್ಕೆ ಅಸಹ್ಯ ಆಗುತ್ತೆ. ಯಾರಪ್ಪನ ಮನೆ ದುಡ್ಡಲ್ಲಿ ಇವರು ಜಾಹೀರಾತು ಕೊಡ್ತಾ ಇದ್ದಾರೆ? ಜಾಹೀರಾತಿಗೆ ಜನರ ತೆರಿಗೆ ಹಣವನ್ನು ಬಳಸ್ತಾ ಇದ್ದಾರೆ. ಮೋದಿ, ಸಿಎಂ ಕಾರ್ಯಕ್ರಮಕ್ಕೆ ಸರ್ಕಾರಿ ಹಣದಲ್ಲಿ ಬಸ್ ಬುಕ್ ಮಾಡ್ತಾ ಇದ್ದಾರೆ. ಫಲಾನುಭವಿಗಳು ಅನ್ನೋ ಹೆಸರಲ್ಲಿ ಜನರನ್ನು ಒತ್ತಾಯ ಮಾಡಿ ಕರೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಂಡಾಮಂಡಲಾರದರು.

ನಾಳೆ ರಾಮನಗರದಲ್ಲಿ ಕಾರ್ಯಕ್ರಮ ಇದೆ ಸರ್ಕಾರಿ ವೆಚ್ಚದಲ್ಲಿ ಬಸ್ ವ್ಯವಸ್ಥೆ ಮಾಡಿದ್ದಾರೆ. ಜನರನ್ನು ಕರ್ಕೊಂಡು ಬರಲು ಅಧಿಕಾರಿಗಳಿಗೆ ಹೇಳಿದ್ದಾರೆ. ಅಧಿಕಾರಿಗಳೇ ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ. ಇದರಿಂದ ಏನೋ ಸಾಧನೆ ಮಾಡ್ತೀವಿ ಅಂತ ಹೊರಟಿದ್ದಾರೆ. ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡದೇ ಇಂಥ ಬೂಟಾಟಿಕೆ ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಮಂತ್ರಿಗಳು ಕೇಸರಿ ಶಾಲು ಹಾಕ್ತಾರೆ, ಬಾವುಟ ಕಟ್ಟುತ್ತಾರೆ. ಇದು ಸರ್ಕಾರಿ ಕಾರ್ಯಕ್ರಮನಾ? ಪಕ್ಷದ ಕಾರ್ಯಕ್ರಮನಾ? ಮೂರು ಬಾರಿ ರಾಜೀವ್ ಗಾಂಧಿ ಹೆಲ್ತ್ ಇನ್ಶಿಟ್ಯೂಟ್‌(Rajiv Gandhi Health Institute) ಗೆ ಶಂಕು ಸ್ಥಾಪನೆ ಮಾಡಿದ್ದಾರೆ. ಈಗ ನಾಲ್ಕನೇ ಬಾರಿ ಮಾಡ್ತಾ ಇದ್ದಾರೆ. ಸರ್ಕಾರ ಬಿದ್ದೋದ್ರೆ, ಮತ್ತೆ ಆರುನೂರು ಕೋಟಿ ಹಣವನ್ನು ನಿಲ್ಲಿಸುತ್ತಾರೆ. ಮತ್ತೆ ಮುಂದೆ ಬರುವ ಸರ್ಕಾರ ಅದಕ್ಕೆ ಹೋರಾಟ ಮಾಡಬೇಕು. ಈ ರೀತಿ ಜನರ ತೆರಿಗೆ ಹಣದಲ್ಲಿ ಚೆಲ್ಲಾಟ ಆಡೋದನ್ನ ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದ ಎಚ್‌ಡಿಕೆ.

ಶಂಕು ಸ್ಥಾಪನೆಯನ್ನು ಎರಡು ವರ್ಷ ಮುಂಚೆ ಮಾಡಿದ್ರೆ ಮೆಚ್ಚುತ್ತಿದ್ವಿ. ಆದರೆ ಒಂದು ವಾರ ಚುನಾವಣೆ ದಿನಾಂಕ ಘೋಷಣೆ ಮುನ್ನ ಮಾಡ್ತಾ ಇದ್ದಾರೆ. ಸಿದ್ದರಾಮಯ್ಯ(Siddaramaiah) ಅವರ ಕಾಲದಲ್ಲೂ ಇದೇ ಆಗಿತ್ತು. 

ಮುಸ್ಲಿಂರ ಮೀಸಲಾತಿ ವಿಚಾರ: 

ನಾನು ನೇರವಾಗಿ ಹೇಳ್ತೇನೆ ಮುಸ್ಲಿಂಗೆ ಇದ್ದ ಮೀಸಲಾತಿ ಇವರು ಡಿವೈಡ್ ಮಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿ ತೆಗೆದಿರೋದು ಅವೈಜ್ಞಾನಿಕ ಅಷ್ಟೆ. ಈ‌ ಮೂಲಕ ಸಮಾನತೆ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದ ಎಚ್‌ಡಿ ಕುಮಾರಸ್ವಾಮಿ.

ಮುಸ್ಲಿಂ ಸಮಾಜದಲ್ಲೂ ಬಡವರು ಇದ್ದಾರೆ. ಇದರಲ್ಲಿ ಕಾನೂನಾತ್ಮಕವಾಗಿ ಏನಾಗಲಿದೆ ನೋಡಬೇಕು. ಮೀಸಲಾತಿ ಅನ್ನೋದು ಇದೊಂದು ಘೋಷಣೆ ಅಷ್ಟೆ, ಚುನಾವಣೆ ಘೋಷಣೆ ಆದ ನಂತರ ಏನೂ ಆಗಲ್ಲ. ಜನರನ್ನು ದಾರಿ ತಪ್ಪಿಸುವ ಕೆಲಸ. ಇನ್ನು ಒಳ ಮೀಸಲಾತಿ ತಂದಿದ್ದಾರೆ, ಇಷ್ಟು ದಿನ ಏನು ಮಾಡ್ತಾ ಇದ್ದರು ಇವರು? ಆಯಾ ಸಮಾಜ ಖುಷಿ ಪಡಿಸಲಿಕ್ಕೆ ಅಷ್ಟೆ. ಮುಂದೆ ಯಾರ್ಯಾರು ಕೋರ್ಟ್ ಗೆ ಹೋಗ್ತಾರೆ, ಅಲ್ಲಿ ಏನು ಮಾಡ್ತಾರೆ ನೋಡಬೇಕು ಎಂದರು.

ನೇಮಕಾತಿಯಲ್ಲಿ ಅಕ್ರಮ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸರ್ಕಾರ ನೇಮಕಾತಿಯಲ್ಲಿ ಲಕ್ಷಾಂತರ ಹಣ ಪಡೆದು ನೇಮಕಾತಿ ಮಾಡ್ತಾ ಇದ್ದಾರೆ. ಇದರಿಂದ ಬಡವರಿಗೆ ಮೀಸಲಾತಿ ಇದ್ದರೂ ಕೆಲಸ ಸಿಗಲ್ಲ. ಹಣ ಕೊಡುವವರಿಗೆ ಕೆಲಸ ಸಿಕ್ಕಾಗ ಮೀಸಲಾತಿ ತಗೊಂಡು ಏನ್ ಮಾಡ್ತೀರ?

ರಾಹುಲ್ ಗಾಂಧಿ ಅನರ್ಹತೆ ವಿಚಾರ: ಸಂವಿಧಾನಕ್ಕೆ ಧಕ್ಕೆ: 

ರಾಹುಲ್ ಗಾಂಧಿಯವರ ಸಂಸದ ಸ್ಥಾನ ಅನರ್ಹತೆ ಗೊಳಿಸುವ ಮೂಲಕ ಸಂವಿಧಾನಕ್ಕೆ ಧಕ್ಕೆ ತಂದಿದ್ದಾರೆ. ದೇಶದ ರಾಹುಲ್ ಗಾಂಧಿಯವರ ಕುಟುಂಬದ ಕೊಡುಗೆ ಬಹಳಷ್ಟು ಇದೆ. ರಾಹುಲ್ ಗಾಂಧಿ ಆಡಿದ ಮಾತಿಗಿಂತ ಹೆಚ್ಚು ಕೆಟ್ಟದಾಗಿ ರಾಜ್ಯ ಬಿಜೆಪಿಯವರು ಬಳಸಿದ್ದಾರೆ. 'ಉರಿಗೌಡ ನಂಜೇಗೌಡ ಟಿಪ್ಪುನ ಹೇಗೆ ಕೊಂದ್ರು ಹಾಗೆ ಸಿದ್ದರಾಮಯ್ಯ ಅವರನ್ನ ಕೊಲ್ಲಬೇಕು' ಅಂತ ಮಂತ್ರಿ ಒಬ್ರು ಹೇಳಿದರು. ಅದಕ್ಕೆ ಯಾವುದೇ ಶಿಕ್ಷೆ ಆಗಿಲ್ಲ. ಆದರೆ ಹಿಂದೆ ಯಾವಾಗೋ ಕೋಲಾರದಲ್ಲಿ ಮಾತನಾಡಿದ್ದನ್ನು ಸೂರತ್ ಅಲ್ಲಿ ಈಗ ಕಂಪ್ಲೆಂಟ್ ಕೊಟ್ಟಿದ್ದಾರೆ. ಇನ್ನೂ ಕೋರ್ಟ್ ಕಾಪಿನೇ ಸಿಕ್ಕಿಲ್ಲ. ಆಗಲೇ ಡಿಸ್ಕ್ವಾಲಿಫಿಕೇಷನ್(Disqualification) ಮಾಡಿದ್ದಾರೆ. ಬಿಜೆಪಿ ಸರ್ಕಾರದವ್ರು ತರಾತುರಿತಯಲ್ಲಿ ಇದನ್ನು ಮಾಡಿದ್ದಾರೆ. ಇದಕ್ಕೆ ತಕ್ಕ ಪ್ರಾಯಶ್ಚಿತ್ತ ಅನುಭವಿಸುತ್ತಾರೆ. ಈ ಘಟನೆಯಿಂದ ರಾಹುಲ್ ಗಾಂಧಿಗೆ ಸಿಂಪಥಿ ಬರಬಹುದು ಎಂದರು.

ಆರ್ ಅಶೋಕ್‌ ಕಾಲಜ್ಞಾನಿ ಎಂಬುದು ನನಗೆ ಗೊತ್ತಿರಲಿಲ್ಲ: ಎಚ್‌ಡಿಕೆ ವ್ಯಂಗ್ಯ

ಈ ಬಿಜೆಪಿ ಸರ್ಕಾರ ಬಂದಾಗಿನಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡ್ತಿದೆ. ಅವರ ಪಕ್ಷದ ಬಗ್ಗೆ ಮಾತನಾಡಿದವರನ್ನು ಮುಗಿಸುವ ಕೆಲಸ ಆಗ್ತಿದೆ. ಇದೊಂದು ಅನ್ ಡಿಕ್ಲೇಯರ್ ಎಮರ್ಜೆನ್ಸಿಯಾಗಿದೆ. ಎಮರ್ಜೆನ್ಸಿ ಡಿಕ್ಲೇಯರ್ ಆದಾಗಲೂ ಇಷ್ಟೊಂದು ಇರಲಿಲ್ಲ. ಬಿಜೆಪಿ ಸರ್ಕಾರದ ನಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಚ್‌ಡಿ ಕುಮಾರಸ್ವಾಮಿ.

Follow Us:
Download App:
  • android
  • ios