Ticket fight: ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬೆಳ್ತಂಗಡಿ ಕ್ಷೇತ್ರದಲ್ಲಿ ಭುಗಿಲೆದ್ದ ಅಸಮಾಧಾನ!
ದಿನೇದಿನೆ ವಿಧಾನಸಭಾ ಕಾವು ಪಡೆದುಕೊಳ್ಳುತ್ತಿದ್ದು, ಇದೀಗ ಕಾಂಗ್ರೆಸ್ ಪಕ್ಷ ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವುದು ಚುನಾವಣ ಕಣ ಮತ್ತಷ್ಟು ರಂಗೇರಿಸುವಂತೆ ಮಾಡಿದೆ. ಆದರೆ ಬೆಳ್ತಂಗಡಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಕಾಂಗ್ರೆಸ್‌ಗೆ ಹೊಸ ತಲೆನೋವು ತಂದಿಟ್ಟಿದೆ.
ಬೆಳ್ತಂಗಡಿ (ಮಾ.25) : ದಿನೇದಿನೆ ವಿಧಾನಸಭಾ ಕಾವು ಪಡೆದುಕೊಳ್ಳುತ್ತಿದ್ದು, ಇದೀಗ ಕಾಂಗ್ರೆಸ್ ಪಕ್ಷ ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವುದು ಚುನಾವಣ ಕಣ ಮತ್ತಷ್ಟು ರಂಗೇರಿಸುವಂತೆ ಮಾಡಿದೆ. ಆದರೆ ಬೆಳ್ತಂಗಡಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಕಾಂಗ್ರೆಸ್‌ಗೆ ಹೊಸ ತಲೆನೋವು ತಂದಿಟ್ಟಿದೆ.
ದಕ್ಷಿಣ ಕನ್ನಡ(Daskhina kannada) ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್. ಐದು ಕ್ಷೇತ್ರಗಳ ಪೈಕಿ ಬೆಳ್ತಂಗಡಿಯಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆಯಿದೆ. ಕೆಪಿಸಿಸಿ ಕಾರ್ಯದರ್ಶಿ, ಯುವನಾಯಕ ರಕ್ಷಿತ್ ಶಿವರಾಂ(Rakshit shivaram)ಗೆ ಬೆಳ್ತಂಗಡಿ ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
Congress First List: ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ, ಅಲ್ಪಸಂಖ್ಯಾತರಿಗೆ ಮಣೆ ಹಾಕಿದ 'ಕೈ'
ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad)ಸಹೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ(BK Shivaram) ಪುತ್ರ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡುವುದನ್ನು ಮಾಜಿ ಶಾಸಕ ವಸಂತ ಬಂಗೇರಾ, ಗಂಗಾಧರ ಗೌಡ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ರಕ್ಷಿತ್ ಗೆ ಟಿಕೆಟ್ ನೀಡದಂತೆ ಹಲವು ಬಾರಿ ಕಾಂಗ್ರೆಸ್ ಹೈಕಮಾಂಡ್ ಗೆ ದೂರು ನೀಡಿದ್ದ ಬೆಳ್ತಂಗಡಿ ಟಿಕೆಟ್ ಆಕಾಂಕ್ಷಿಗಳು.
ಬೆಳ್ತಂಗಡಿ ಮೂಲದವರೇ ಆದರೂ ಬೆಂಗಳೂರಿನಲ್ಲೇ ವಾಸವಿದ್ದ ರಕ್ಷಿತ್ ಶಿವರಾಂ. ಕಳೆದ ಕೊರೋನಾ ಅವಧಿಯಲ್ಲಿ ಬೆಳ್ತಂಗಡಿಗೆ ಆಗಮಿಸಿದ್ದ ರಕ್ಷಿತ್ ಶಿವರಾಂ. ಬೆಸ್ಟ್ ಫೌಂಡೇಶನ್ ಸಂಸ್ಥೆ(Best Foundation Organiztion) ಸ್ಥಾಪಿಸಿ ಎರಡು ವರ್ಷಗಳ ಹಿಂದೆಯೇ ಬೆಳ್ತಂಗಡಿ(Beltangadi) ಕಣಕ್ಕೆ ಧುಮುಕಿದ್ದ ರಕ್ಷಿತ್ ಶಿವರಾಂ. ಬೆಳ್ತಂಗಡಿಯವರೇ ಆದರೂ ಇಲ್ಲಿ ವಾಸವಾಗಿಲ್ಲ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಹೀಗಾಗಿ ಹೊರಗಿನ ವ್ಯಕ್ತಿ ಎಂಬ ಕಾರಣಕ್ಕೆ ರಕ್ಷಿತ್ ಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದರು.
ಇಂದು ದಾವಣಗೆರೆಯಲ್ಲಿ ಮೋದಿ ಚುನಾವಣಾ ಪಾಂಚಜನ್ಯ: ಬಿಜೆಪಿ ಲ್ಯಾಂಡ್ ಮಾರ್ಕ್ ಆಗಲಿದೆಯಾ ಸಮಾವೇಶ?
ಇದೀಗ ವಿರೋಧದ ಮಧ್ಯೆಯೂ ರಕ್ಷಿತ್ ಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್ ಹೈಕಮಾಂಡ್. ಬೆಳ್ತಂಗಡಿ ಕ್ಷೇತ್ರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಯಾವುದೇ ಗೊಂದಲವಿಲ್ಲ. ಬಂಟ್ವಾಳ, ಮೂಡಬಿದ್ರೆ, ಸುಳ್ಯ, ಮಂಗಳೂರು ಕ್ಷೇತ್ರಗಳಲ್ಲೂ ಟಿಕೆಟ್ ಘೋಷಣೆಯಾಗಿದೆ. ಆದರೆ ಬೆಳ್ತಂಗಡಿ ಕ್ಷೇತ್ರದಲ್ಲಿ ವಿರೋಧದ ಮಧ್ಯೆಯೂ ಬಿಕೆ ರಕ್ಷಿತ್‌ಗೆ ಟಿಕೆಟ್ ನೀಡಿರುವುದು ಅಸಮಾಧಾನ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ.