Vijayasankalpa yatre: ‘ಕೈ’ಯಿಂದ ಸೋಲೋ ಗ್ಯಾರಂಟಿ ಕಾರ್ಡ್‌ ಹಂಚಿಕೆ: ಡಿವಿ ಸದಾನಂದಗೌಡ

ರಾಜ್ಯದಲ್ಲಿ 13 ಬಾರಿ ಬಜೆಟ್‌ ಮಂಡಿಸಿರೋ ಸಿದ್ದರಾಮಯ್ಯರವರೇ ನಿಮಗೆ ತಾಕತ್ತು ಇದ್ರೆ ಸಾಧನೆಯ ಬುಕ್‌ ತನ್ನಿ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರು ಸವಾಲ್‌ ಹಾಕಿದ್ದಾರೆ.

Karnataka election DV sadanandagowda statement in vijayasankalpa yatre at chikkamagaluru rav

ಚಿಕ್ಕಮಗಳೂರು (ಮಾ.17) : ರಾಜ್ಯದಲ್ಲಿ 13 ಬಾರಿ ಬಜೆಟ್‌ ಮಂಡಿಸಿರೋ ಸಿದ್ದರಾಮಯ್ಯರವರೇ ನಿಮಗೆ ತಾಕತ್ತು ಇದ್ರೆ ಸಾಧನೆಯ ಬುಕ್‌ ತನ್ನಿ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ(DV Sadananda gowda) ಅವರು ಸವಾಲ್‌ ಹಾಕಿದ್ದಾರೆ. ವಿಜಯ ಸಂಕಲ್ಪ ಯಾತ್ರೆ(Vijayasankalpa yatre)ಯ ಹಿನ್ನೆಲೆಯಲ್ಲಿ ಇಲ್ಲಿನ ವಿಜಯಪುರ ಗಣಪತಿ ಪೆಂಡಾಲ್‌ನಲ್ಲಿ ಗುರುವಾರ ಬಿಜೆಪಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ್ರೆ ಉಚಿತವಾಗಿ 10 ಕೆ.ಜಿ. ಅಕ್ಕಿ ಕೊಡ್ತೀವಿ, 200 ಯೂನಿಟ್‌ ವಿದ್ಯುತ್‌ ಕೊಡ್ತೀವಿ ಎಂದು ಬೋರ್ಡ್‌ ಹಾಕುವ ಪರಿಸ್ಥಿತಿ ಅವರಿಗೆ ಬಂದಿದೆ. ಇವರು ಗ್ಯಾರಂಟಿ ಬೋರ್ಡ್‌ ಹಾಕೋ ಗಿರಾಕಿಗಳು. ಇವರುಗಳು ವಿತರಣೆ ಮಾಡ್ತಾ ಇರೋದು ಈ ಬಾರಿಯ ಚುನಾವಣೆಯಲ್ಲಿ ಸೋಲೋ ಗ್ಯಾರಂಟಿ ಕಾರ್ಡ್‌ವೆಂದು ವ್ಯಂಗ್ಯವಾಡಿದರು.

Assembly election: ಬಿಜೆಪಿ ಟಿಕೆಟ್‌ ಹಂಚಿಕೆ: ಮತ್ತೊಂದು ಬಾಂಬ್‌ ಸಿಡಿಸಿದ ಡಿ.ವಿ. ಸದಾನಂದ ಗೌಡ!

ಇಂದಿರಾಗಾಂಧಿಯವರು ಜನರ ತಲೆ ಕೆಡಿಸಲು ಗರೀಬೀ ಹಠಾವೋ(Garibi Hatao) ಘೋಷಣೆ ಮಾಡಿದರು. ಈ ಘೋಷಣೆ ಹೊರಡಿಸಿ ದಶಕಗಳೇ ಕಳೆದರೂ ದೇಶ ದಲ್ಲಿ ಬಡತನ ನಿರ್ಮೂಲನೆ ಆಗಲಿಲ್ಲ. ಆದರೆ, ಕಾಂಗ್ರೆಸ್‌ ನಾಯಕರ ಬಡತನ ನಿವಾರಣೆ ಆಯಿತು ಎಂದು ಆರೋಪಿಸಿದರು.

ಕೋವಿಡ್‌(Covid-19) ಸಂದರ್ಭದಲ್ಲಿ 140 ಕೋಟಿ ಜನರಿಗೆ 2 ಡೋಸ್‌ ಲಸಿಕೆ ನೀಡುವುದು ಮಾತ್ರವಲ್ಲ, 120 ಪ್ರಬಲ ದೇಶಗಳಿಗೆ ವ್ಯಾಕ್ಸಿನ್‌ ನೀಡಿದರು. ಭಿಕ್ಷಾ ಪಾತ್ರೆ ಹಿಡಿದು ಹೋಗುವವರಲ್ಲ, ಭಿಕ್ಷೆ ಕೊಡುವವರು ಎಂದು ಮೋದಿ ಸಾಬೀತು ಮಾಡಿದ್ದಾರೆ ಎಂದರು.

ಶಾಸಕ ಸಿ.ಟಿ.ರವಿ(CT Ravi) ಮಾತನಾಡಿ, ತಾನೂ ಮಾಡಲಿಲ್ಲ, ಬೇರೆಯವರು ಮಾಡುವುದನ್ನು ಕಂಡರೆ ಹೊಟ್ಟೆಕಿಚ್ಚು ಪಡುವವರು ಇದ್ದಾರೆ. ನಿಮಗೆ ಯೋಗ್ಯತೆ ಇದ್ರೆ, ನಿಮ್ಮ ಕೊಡುಗೆ ಏನು, ಪುಸ್ತಕ ಮಾಡಿ ಹಂಚಿ. ಎರಡೂ ಪುಸ್ತಕಗಳನ್ನು ಇಟ್ಟು ಜನ ನೋಡಲಿ ಎಂದು ಸವಾಲು ಹಾಕಿದರು.

ನಾನು ಸಿದ್ಧಾಂತ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ನನಗೆ ಜಾತಿವಾದಿ ಎನ್ನುತ್ತಿದ್ದೀರಾ, ನಿಮ್ಮ ಬೇಳೆ ಬೇಯುವುದಿಲ್ಲ ಎಂದು ಜಾತಿಯ ಬಣ್ಣ ಕಟ್ಟುತ್ತಿದ್ದೀರಾ ಎಂದು ಹರಿಹಾಯ್ದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ವಿಜಯ ಸಂಕಲ್ಪ ಯಾತ್ರೆಯ ಮೆರವಣಿಗೆ ನಡೆಯಿತು. ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕರುಗಳಾದ ಬೆಳ್ಳಿ ಪ್ರಕಾಶ್‌, ಸುರೇಶ್‌, ಮೂಡಿಗೆರೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ ವಿಜಯ ಕುಮಾರ್‌ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಈ ಯಾತ್ರೆ ಐ.ಜಿ. ರಸ್ತೆಯ ಮೂಲಕ ಹನುಮಂತಪ್ಪ ವೃತ್ತಕ್ಕೆ ತಲುಪಿ, ಅಲ್ಲಿಂದ ಬಸವನಹಳ್ಳಿ ರಸ್ತೆಯಲ್ಲಿ ಸಾಗಿ ವಿಜಯಪುರದ ಗಣಪತಿ ಪೆಂಡಾಲ್‌ ತಲುಪಿತು.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ‘ಸಂಕಲ್ಪದ ಸಾಧನೆ ನಿಮ್ಮ ರವಿ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಸಿ. ಕಲ್ಮರಡಪ್ಪ, ಜಿಲ್ಲಾ ಉಸ್ತುವಾರಿ ಚನ್ನಬಸಪ್ಪ, ದತ್ತಾತ್ರಿ, ನಗರಾಧ್ಯಕ್ಷ ಮಧುಕುಮಾರ್‌ ರಾಜ್‌ ಅರಸ್‌, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್‌, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ನಗರಸಭಾ ಸದಸ್ಯ ಟಿ. ರಾಜಶೇಖರ್‌, ಮಾಜಿ ಸದಸ್ಯರಾದ ಪ್ರೇಮ್‌ಕುಮಾರ್‌, ರವಿಕುಮಾರ್‌, ರವಿ ಚಿಕ್ಕದೇವನೂರು ಉಪಸ್ಥಿತರಿದ್ದರು.

ಮೈಸೂರು-ಬೆಂಗಳೂರು ಹೆದ್ದಾರಿ ಯೋಜನೆ ಕಾಂಗ್ರೆಸ್‌ ಪೂರ್ಣಗೊಳಿಸಲಿಲ್ಲವೇಕೆ?: ಸದಾನಂದಗೌಡ

ಕಾಂಗ್ರೆಸ್‌ ಕಾಲದಲ್ಲಿ ಬೇರೆ ದೇಶಗಳಿಗೆ ಭಿಕ್ಷಾ ಪಾತ್ರೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ಬೇರೆ ದೇಶಗಳಿಗೆ ಭಿಕ್ಷೆ ಕೊಡುವ ರೀತಿಯಲ್ಲಿ ಬದಲಾಗಿದ್ದೇವೆ. ಮೋದಿಯಾಗಲೀ, ಕೇಂದ್ರದ ಸಚಿವರ ಮೇಲೆ ಯಾವುದಾದರೂ ಬ್ಲಾಕ್‌ಸ್ಪಾಟ್‌ ಇದೀಯಾ?, ತೋರಿಸಿ.

- ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ

ನನಗೆ ಯಡಿಯೂರಪ್ಪ ಪ್ರೇರಣೆ: ಸಿ.ಟಿ.ರವಿ

ನಿಮಗೆ ನೈತಿಕತೆ ಇದ್ರೆ ರಿಪೊರ್ಚ್‌ ಕಾರ್ಡ್‌ ಕೊಡಿ, ನಿಮ್ಮ ಕಾಲದಲ್ಲಿ ಏನು ಮಾಡಿದೇವೆಂದು ತಿಳಿಸಿ, ನಿಮಗೆ ವೋಟ್‌ ಕೇಳುವ ಯೋಗ್ಯತೆಯೂ ಇಲ್ಲ. ಚಿಕ್ಕಮಗಳೂರು ನೆಮ್ಮದಿ ಹಾಳು ಮಾಡುವವರು ಸಿ.ಟಿ. ರವಿಯ ಸೋಲು ಬಯಸುತ್ತಾರೆ. ತಲೆ ತಗ್ಗಿಸುವ ಒಂದು ಸುದ್ದಿಯೂ ನನ್ನಿಂದ ಬರಲಿಲ್ಲ, ಕಾಯಾ ವಾಚಾ ಮನಸಾ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ಸಿ.ಟಿ.ರವಿ, ನನಗೆ ಯಡಿಯೂರಪ್ಪ ಪ್ರೇರಣೆ, ಆಲ್ದೂರಿಗೆ ಅವರು ಬಂದಿದ್ದಾಗ, ನನ್ನ ಹಾಗೆಯೇ ಆಗ್ತಿಯಾ ಎಂದಿದ್ದರು. ಅವರು ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ನನಗೆ ಪ್ರೇರಣೆಯಾದರು ಎಂದು ಹೇಳಿದರು.

Latest Videos
Follow Us:
Download App:
  • android
  • ios