Karnataka election 2023: ಯುವಕರ ಮುಂದಿನ ಭವಿಷ್ಯಕ್ಕಾಗಿ ಬಿಜೆಪಿ ಗೆಲ್ಲಿಸಿ: ಬಿಎಸ್‌ವೈ ಮನವಿ

ವಿಧಾನಸಭಾ ಚುನಾವಣೆ ವೀರಶೈವ ಲಿಂಗಾಯಿತ ಸಮಾಜಕ್ಕೆ ಸವಾಲಾಗಿ ಪರಿಣಮಿಸಿದ್ದು, ಬೇರೆಯವರಿಗೆ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸ್ಥಾನದಿಂದ ಸ್ವತಃ ನಾನೇ ಕೆಳಗೆ ಇಳಿದಿದ್ದೇನೆ. ಕಾಂಗ್ರೆಸ್‌ನವರು ಮಾಡುವ ಆರೋಪದಲ್ಲಿ ಎಳ್ಳಷ್ಟುಹುರುಳಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Karnataka election 2023 Win BJP party for better future of youth says bs yadiyurappa rav

ರಾಮದುರ್ಗ (ಏ.28) : ವಿಧಾನಸಭಾ ಚುನಾವಣೆ ವೀರಶೈವ ಲಿಂಗಾಯಿತ ಸಮಾಜಕ್ಕೆ ಸವಾಲಾಗಿ ಪರಿಣಮಿಸಿದ್ದು, ಬೇರೆಯವರಿಗೆ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸ್ಥಾನದಿಂದ ಸ್ವತಃ ನಾನೇ ಕೆಳಗೆ ಇಳಿದಿದ್ದೇನೆ. ಕಾಂಗ್ರೆಸ್‌ನವರು ಮಾಡುವ ಆರೋಪದಲ್ಲಿ ಎಳ್ಳಷ್ಟುಹುರುಳಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ತಾಲೂಕಿನ ಕಟಕೋಳ ಗ್ರಾಮದಲ್ಲಿ ವಿಧಾನಸಭಾ ಚುನಾವಣಾ ಅಂಗವಾಗಿ ಗುರುವಾರ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ (BJP Candidate chikkarevanna)ಪರ ಮತಯಾಚಿಸಿ ಮಾತನಾಡಿದ ಅವರು, ಯಡಿಯೂರಪ್ಪ,(BS Yadiyurappa) ಯುವಕರ ಮುಂದಿನ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಗೆಲ್ಲಿಸಬೇಕು. ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಯಾವುದೇ ರೀತಿಯಿಂದ ಸಮನಾಗಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್‌, ಸವದಿ: ಯಡಿಯೂರಪ್ಪ

ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಳೆದ 40 ವರ್ಷಗಳಿಂದ ಎಸ್ಸಿ, ಎಸ್ಟಿಸಮುದಾಯಕ್ಕೆ ಕಾಂಗ್ರೆಸ್‌ ಸರ್ಕಾರ ಮೀಸಲಾತಿ ಹೆಚ್ಚಿಸಿರಲಿಲ್ಲ. ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಿಸಿದ್ದಲ್ಲದೇ ಒಳ ಮೀಸಲಾತಿಗೂ ಅನುಮೋದನೆ ಕೊಟ್ಟಿದೆ. ಇಂತಹ ಮಹತ್ವದ ನಿರ್ಧಾರವನ್ನು ಕಾಂಗ್ರೆಸ್‌ ಸರ್ಕಾರದ್ದು ಮಾಡುವುದಾಗಿ ಹೇಳುತ್ತಿದೆ. ಅಲ್ಪಸಂಖ್ಯಾತ, ದೀನ-ದಲಿತ ಹಾಗೂ ಹಿಂದುಳಿದ ವರ್ಗದವರನ್ನು ಕೇವಲ ಓಟ್‌ ಬ್ಯಾಂಕ್‌ ಮಾಡಿಕೊಂಡ ಕಾಂಗ್ರೆಸ್‌ ಪಕ್ಷವನ್ನು ಕಿತ್ತೊಗೆಯಬೇಕು ಎಂದು ಕೋರಿದರು.

ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಮಾತನಾಡಿದರು. ವೇದಿಕೆಯಲ್ಲಿ ಉತ್ತರ ಪ್ರದೇಶ ರಾಜ್ಯಸಭಾ ಸದಸ್ಯೆ ಸಂಗೀತಾ ಯಾದವ್‌, ಉಸ್ತುವಾರಿ ಲಕ್ಷ್ಮಣ ತಪಸಿ, ಮುಖಂಡರಾದ ಡಾ.ಕೆ.ವಿ.ಪಾಟೀಲ, ರೇಣಪ್ಪ ಸೋಮಗೊಂಡ, ರೇಖಾ ಚಿನ್ನಕಟ್ಟಿಸೇರಿದಂತೆ ಹಲವರು ಇದ್ದರು.

ಲಿಂಗಾಯತರಿಗೆ ಕಳಂಕ ತಂದ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ ಕಿಡಿ

ನಮ್ಮ ಸರ್ಕಾರದ ಅವಧಿಯಲ್ಲಿ ಕಾಗಿನೆಲೆ ಅಭಿವೃದ್ಧಿಗಾಗಿ .50 ಕೋಟಿ ಅನುದಾನ, ಕನಕ ಜಯಂತಿ ಆಚರಣೆ ಮಾಡಿದ ತೃಪ್ತಿ ನನಗಿದೆ. ಬಡ ಹೆಣ್ಣು ಮಕ್ಕಳು ಹುಟ್ಟಿದರೇ ಕಣ್ಣೀರು ಹಾಕಬಾರದು, ಸ್ವಾಭಿಮಾನದ ಬದುಕನ್ನು ಸಾಗಿಸಬೇಕೆಂಬ ಉದ್ದೇಶದಿಂದ ಭಾಗ್ಯಲಕ್ಷ್ಮೇ ಯೋಜನೆ ಜಾರಿಗೆ ತಂದಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಯೋಜನೆಯ ಮೊದಲ ಫಲಾನುಭವಿಗಳ ಕೈಗೆ .1 ಲಕ್ಷ ಹಣ ಸೇರಲಿದೆ.

ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ.

Latest Videos
Follow Us:
Download App:
  • android
  • ios