Asianet Suvarna News Asianet Suvarna News

ಸುರ್ಜೆವಾಲಾಗೆ ಹನುಮನ ತಂದೆ-ತಾಯಿ ಯಾರು ಗೊತ್ತಿಲ್ಲ: ಶೋಭಾ ಕರಂದ್ಲಾಜೆ ಕಿಡಿ

ನಮಗೆ ಹನುಮಾನ್ ಚಾಲಿಸಾ ಹಾಡೋಕೆ ಬರತ್ತೊ ಇಲ್ವೊ ಎನ್ನುವುದನ್ನು ನೋಡುವುದಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಬರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಹ್ವಾನ ನೀಡಿದರು.

Karnataka Election 2023 Union Minister Shobha Karandlaje Outraged Against Randeep Singh Surjewala gvd
Author
First Published May 4, 2023, 2:01 PM IST

ಬೆಂಗಳೂರು (ಮೇ.04): ನಮಗೆ ಹನುಮಾನ್ ಚಾಲಿಸಾ ಹಾಡೋಕೆ ಬರತ್ತೊ ಇಲ್ವೊ ಎನ್ನುವುದನ್ನು ನೋಡುವುದಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಬರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಹ್ವಾನ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ಸಂಜೆ ಮಲ್ಲೇಶ್ವರಂಗೆ ಸುರ್ಜೆವಾಲಾ ಬರ್ತಾರೆ ಎಂದು ಭಾವಿಸುತ್ತೇನೆ. ನಾವು ಓದುವ ಹನುಮಾ ಚಾಲೀಸ ನೋಡಲು ಸುರ್ಜೆವಾಲಾ ಬರಬೇಕು ಎಂದು ಹೇಳಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಬಾಟಿಯಾ ಸಾಥ್ ನೀಡಿದರು. 

ಸುರ್ಜೆವಾಲಾಗೆ ಹನುಮನ ತಂದೆ ಯಾರು ಗೊತ್ತಾ?: ಹನುಮ ಅಂಜನಾಂದ್ರಿ ಬೆಟ್ಟದದಲ್ಲಿ ಹುಟ್ಟಿದ. ಅಲ್ಲಿಂದಲೇ ಸೂರ್ಯನನ್ನೆ ನುಂಗುತ್ತೇನೆ ಎಂದು ಹಾರಿದ್ದ. ಹಂಪಿ ತುಂಬಾ ಹನುಮ ಓಡಾಡಿದ್ದ. ವಾಲಿ ಸುಗ್ರೀವರ ಯುದ್ಧ ಕೂಡ ಅಲ್ಲೇ ನಡೆಯಿತು ಎಂದು ಓದಿದ್ದೇವೆ. ಹನುಮಾ ಚಾಲಿಸ ಹೇಳೊಕೆ ಬರತ್ತಾ ಎನ್ನುವ ಸುರ್ಜೆವಾಲಾಗೆ ಹನುಮನ ತಂದೆ ಯಾರು ಗೊತ್ತಾ? ಹನುಮ ವಾಯುಪುತ್ರ, ಅಂಜನಿ ಪುತ್ರ . ತುಳಸಿದಾಸರು ಇದನ್ನು ಬಹಳ ಸುಂದರವಾಗಿ ಹಾಡಿದ್ದಾರೆ. ಸುರ್ಜೆವಾಲಾಗೆ ಹನುಮನ ತಂದೆ ತಾಯಿ ಯಾರು ಗೊತ್ತಿಲ್ಲ. ಇವರು ನಮಗೆ ಪಾಠ ಮಾಡ್ತಾರೆ. ಸಂಜೆ ಏಳು ಗಂಟೆಗೆ ಬನ್ನಿ. ಅಲ್ಲಿ ಗೊತ್ತಾಗತ್ತೆ. ಆಂಜನೇಯನ ಹುಟ್ಟಿನ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿತ್ತು. ಹಿಂದುಗಳ ಭಾವನೆಗೆ ಧಕ್ಕೆ ತಂದು ಅಧಿಕಾರಕ್ಕೆ ಬರಬಹುದು ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಹಿಂದುಗಳು ಧರ್ಮ ಸಹಿಷ್ಣುಗಳು. ಅದೇ ಅಲ್ಲಾನ ಬಗ್ಗೆ ಮಾತಾಡಿದ್ರೆ ಕರ್ನಾಟಕ ಹೊತ್ತಿ ಉರಿಯುತ್ತಿತ್ತು ಎಂದು ವ್ಯಂಗ್ಯವಾಡಿದರು.

ರಾಹುಲ್‌ ಗಾಂಧಿಗೆ ಮೊದಲು ನಿರುದ್ಯೋಗ ಭತ್ಯೆ ನೀಡಿ: ಪ್ರಲ್ಹಾದ್‌ ಜೋಶಿ

ನಾವು ಭಜರಂಗದಳದ ಜೊತೆ ನಾವು ಜೊತೆ ಇದ್ದೇವೆ: Sdpi ಮತ್ತು PFI ಖುಷಿ ಪಡಿಸೋಕೆ ಭಜರಂಗದಳ ಬ್ಯಾನ್ ಮಾಡುವ ಭರವಸೆ ನೀಡಿದೆ. ಕರ್ನಾಟಕದ‌ ಎಲ್ಲಾ ಪ್ರದೇಶಗಳಲ್ಲಿ ಹನುಮಾ ಚಾಲೀಸ ಪಠಣ‌ ಮಾಡ್ತೇವೆ. ದಯಮಾಡಿ ಕಾಂಗ್ರೆಸ್ ನಾಯಕರು ಬರಬೇಕು. ನಮಗೆ ಹನುಮ ಚಾಲಿಸ ಓದೋಕೆ ಬರತ್ತಾ ಇಲ್ವೊ ತಿಳಿಬೇಕು. ಕಾಂಗ್ರೆಸ್ ಹಿಂದು ವಿರೋಧಿ ಎನ್ನೋದು ಮತ್ತೊಮ್ಮೆ ಸಾಬೀತು ಆಗಿದೆ. ತುಷ್ಟಿಕರಣ ಮಾಡೋದು ಕಾಂಗ್ರೆಸ್. ಹಿಂದು ಮುಸ್ಲಿಂ ಒಡೆಯುವ ಕೆಲಸ ಮಾಡಿತ್ತು. ಈಗ ಈ ಚುನಾವಣೆಯಲ್ಲಿ ಮತ್ತೆ ಸಾಬೀತು ಮಾಡಿತು. ಹಿಂದುಗಳಿಗೆ ನೋವಾಗುವ ರೀತಿ, ಧರ್ಮ ಎಳೆದು ತಂದು ನೋವು ಮಾಡಿದ್ದೀರಿ. ನಾವು ಭಜರಂಗದಳದ ಜೊತೆ ನಾವು ಜೊತೆ ಇದ್ದೇವೆ. ನಮ್ಮ ಅನೇಕ ನಾಯಕರು ಹನುಮ ಚಾಲೀಸ ಪಠಣ ಮಾಡ್ತೇವೆ ಎಂದು ಹೇಳಿದರು.

ಭಜರಂಗದಳ ನಮ್ಮ ಯುವಕರ ಶಕ್ತಿ: ನಮ್ಮೆಲ್ಲರ ತಾಯಿ ಬೇರು ಆರ್‌ಎಸ್‌ಎಸ್. ನಮ್ಮ ಯುವಕರಲ್ಲಿ ಕೆಲಸ ಮಾಡೋದು ಭಜರಂಗದಳ. ವಿದ್ಯಾರ್ಥಿಗಳ ಜೊತೆ ಕೆಲಸ ಮಾಡೋದು ABVP. ಹೀಗೆ ವಿವಿಧ ವಿಭಾಗದಲ್ಲಿ ಕೆಲಸ ಮಾಡುವ ಸಂಘಟನೆ. ಭಜರಂಗದಳ ನಮ್ಮ ಯುವಕರ ಶಕ್ತಿ. ಯುವಕರು ತಮ್ಮ ಭಾವನೆ ಇಷ್ಟ ಪಡುವ ಕೆಲಸವನ್ನು ಭಜರಂಗದಳ ಮಾಡುತ್ತದೆ. ಮಠ ಮಂದಿರ ದೇವಸ್ಥಾನ ಉಳಿಸಲು ಭಜರಂಗದಳ ಕೆಲಸ ಮಾಡುತ್ತದೆ. ಹಿಂದೆ ಯಾರು ಏನು ಹೇಳಿದ್ರು ಗೊತ್ತಿಲ್ಲ. ಆದರೆ ಭಜರಂಗದಳ ಬಿಜೆಪಿಯ ಒಂದು ಭಾಗ. ಹನುಮನ ಎಳೆದು ತಂದವರು ನಾವಲ್ಲ. ಕಾಂಗ್ರೆಸ್ ಹನುಮನ ಎಳೆದು ತಂದಿದೆ ಹನಮುನ ತಂದೆ ತಾಯಿ ಬಗ್ಗೆ ಸುರ್ಜೆವಾಲಾ ಮಾತಾಡಿದ್ದಾರೆ ಎಂದು ಶೋಭಾ ತಿಳಿಸಿದರು

ನಮ್ಮ ಪ್ರಧಾನಿ ನಮ್ಮ ಹೆಮ್ಮೆ ಹೆಸರಲ್ಲಿ ರೋಡ್ ಶೋ: ನರೇಂದ್ರ ಮೋದಿಯವರು ಎರಡು ದಿನ ರೋಡ್ ಶೋ ಮಾಡಲಿದ್ದಾರೆ. ಶನಿವಾರ ಸಿ.ವಿ ರಾಮನ್ ನಗರದ ಕೆಂಪೇಗೌಡ ಸ್ಟ್ಯಾಚು ಹೊಸ ತಿಪ್ಪಸಂದ್ರದಿಂದ ಆರಂಭವಾಗಿ, ಬ್ರಿಗೆಡ್ ರೋಡಲ್ಲಿ ಅಂತ್ಯವಾಗಲಿದೆ. ಭಾನುವಾರ ಬ್ರಿಗೆಡ್ ಮಿಲೇನಿಯಂ ಇಂದ ಆರಂಭವಾಗಿ, ಮಲ್ಲೇಶ್ವರದಲ್ಲಿ ಅಂತ್ಯವಾಗಲಿದೆ. ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗಿದೆ. ಇಡೀ ದಿನ ರೋಡ್ ಶೋ ಮಾಡೋದ್ರಿಂದ ಸಮಸ್ಯೆ ಆಗಲಿದೆ. ಟ್ರಾಫಿಕ್ ಸಮಸ್ಯೆ ಆಗಲಿದೆ‌. ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಎರಡು ದಿನ ರೋಡ್ ಶೋ. ಹಾಗಾಗಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ ರೋಡ್ ಶೋ ಮಾಡಲಾಗ್ತಿದೆ. ನಮ್ಮ ಪ್ರಧಾನಿ ನಮ್ಮ ಹೆಮ್ಮೆ ಹೆಸರಲ್ಲಿ ರೋಡ್ ಶೋ ಶನಿವಾರ ಬೆಳಗ್ಗೆ 10 ರಿಂದ 1ಗಂಟೆವರೆಗೂ ನಡೆಯಲಿದೆ. ಭಾನುವಾರ ಬೆಳಗ್ಗೆ 10ರಿಂದ 2ಗಂಟೆಯವರೆಗೂ ನಡೆಯಲಿದೆ. ಸಾರ್ವಜನಿಕರೂ ಕೂಡ ಸಹಕಾರ ನೀಡಲಿದ್ದಾರೆ ಎಂದು ಈ ವೇಳೆ ತಿಳಿಸಿದರು.

ಭ್ರಷ್ಟವ್ಯೂಹ ಭೇದಿಸಿದ್ದಕ್ಕಾಗಿ ಕಾಂಗ್ರೆಸ್‌ಗೆ ನನ್ನ ಕಂಡ್ರೆ ಸಿಟ್ಟು: ಪ್ರಧಾನಿ ಮೋದಿ

ಬಜರಂಗ ದಳ ಬ್ಯಾನ್ ಮಾಡಿಲ್ಲ: ನೀವು ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಯಾಕೆ ಬಜರಂಗ ದಳ ಬ್ಯಾನ್ ಮಾಡಿಲ್ಲ. ಅಲ್ಲಿ ಬ್ಯಾನ್ ಮಾಡಿ ನೋಡೊಣ. ಕೇವಲ ಚುನಾವಣೆಗಾಗಿ ಮತ್ತು ಒಂದು ಸಮುದಾಯದ ಮತಕ್ಕಾಗಿ ಕರ್ನಾಟಕದಲ್ಲಿ ಈ ಘೋಷಣೆ ಮಾಡಿದ್ದೀರಿ ಎಂದು ರಾಷ್ಟ್ರೀಯ ವಕ್ತಾರ ಗೌರವ್ ಬಾಟಿಯಾ ಕಾಂಗ್ರೆಸ್‌ಗೆ  ಸವಾಲು ಹಾಕಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios