ಬಿಜೆಪಿ ಟಿಕೇಟ್‌ ಘೋಷಣೆ ಆಗ್ತಿದ್ದಂತೆ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯ ಹೊಗೆಯಾಡ್ತಿದೆ. 2ನೇ ಪಟ್ಟಿ ರಿಲೀಸ್ ಆದ ಬಳಿಕ ಬಂಡಾಯದ ಬೆಂಕಿ ಮತ್ತಷ್ಟು ಹೊತ್ತಿ ಉರಿಯೋದಕ್ಕೆ ಶುರುವಾಗಿದೆ. 

ಷಡಕ್ಷರಿ ಕಂಪೂನವರ, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಏ.14): ಬಿಜೆಪಿ ಟಿಕೇಟ್‌ ಘೋಷಣೆ ಆಗ್ತಿದ್ದಂತೆ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯ ಹೊಗೆಯಾಡ್ತಿದೆ. 2ನೇ ಪಟ್ಟಿ ರಿಲೀಸ್ ಆದ ಬಳಿಕ ಬಂಡಾಯದ ಬೆಂಕಿ ಮತ್ತಷ್ಟು ಹೊತ್ತಿ ಉರಿಯೋದಕ್ಕೆ ಶುರುವಾಗಿದೆ. ವಿಜಯಪುರ ನಗರ ಕ್ಷೇತ್ರಕ್ಕೆ ಹಾಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳರಿಗೆ ಟೀಕೆಟ್‌ ಘೋಷಣೆಯಾಗ್ತಿದ್ದಂತೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬಂಡೆದಿದ್ದಾರೆ. ಇತ್ತ ಎರಡನೇ ಪಟ್ಟಿಯಲ್ಲಿ ಬಸವನ ಬಾಗೇವಾಡಿ ಟಿಕೇಟ್‌ ಎಸ್‌ ಕೆ ಬೆಳ್ಳುಬ್ಬಿಗೆ ಘೋಷಣೆಯಾಗ್ತಿದ್ದಂತೆ, ಪ್ರಬಲ ಟಿಕೇಟ್‌ ಆಕಾಂಕ್ಷಿಯಾಗಿದ್ದ ಸೋಮನಗೌಡ ಊರ್ಫ್‌ ಅಪ್ಪುಗೌಡ ಪಾಟೀಲ್‌ ಮನಗಳು ತಿರುಗಿ ಬಿದ್ದಿದ್ದಾರೆ.

ಹೊತ್ತಿ ಉರಿಯುತ್ತಿರುವ ಬಿಜೆಪಿ ಬಂಡಾಯ: ಜಿಲ್ಲೆಯ 8 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ವಿಜಯಪುರ ನಗರ ಹಾಗೂ ಬಸವನ ಬಾಗೇವಾಡಿ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೇಟ್‌ ಕೈತಪ್ಪುತ್ತಿದ್ದಂತೆ ಪ್ರಬಲ ಆಕಾಂಕ್ಷಿಗಳು ಬಂಡಾಯವೆದ್ದಿದ್ದಾರೆ. ತಮಗೆ ಬಿಜೆಪಿ ಟಿಕೇಟ್‌ ಸಿಗುವ ನಿರೀಕ್ಷೆ ಇತ್ತು. ಆದ್ರೆ ಹೈಕಮಾಂಡ್‌ ಟಿಕೇಟ್‌ ನೀಡಿಲ್ಲ ಎಂದು ಮುನಿಸಿಕೊಂಡಿದ್ದಾರೆ. ಈ ಮುನಿಸು ಬರಿ ಮುನಿಸಾಗಿ ಉಳಿಯದೆ ಬಂಡಾಯದ ಸ್ವರೂಪ ಪಡೆದುಕೊಳ್ತಿದೆ. ಎರಡು ಕ್ಷೇತ್ರಗಳಲ್ಲು ಬಿಜೆಪಿ ಪಕ್ಷದಲ್ಲಿ ಬಂಡಾಯ ಬುಗಿಲೆದ್ದಿದೆ.

ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಗೆ ತಲೆಬಿಸಿ: ಶಾಸಕ ಶರತ್‌ ಬಚ್ಚೇಗೌಡ

ವಿಜಯಪುರ ನಗರದಲ್ಲಿ ಯತ್ನಾಳ್‌ ವರ್ಸಸ್‌ ಅಪ್ಪು: ವಿಜಯಪುರ ನಗರ ಕ್ಷೇತ್ರದಿಂದ ಹಿಂದೂ ಪೈರ್‌ ಬ್ರಾಂಡ್‌ ಅಂತಾ ಕರೆಯಿಸಿಕೊಳ್ಳುವ ಬಸನಗೌಡ ಯತ್ನಾಳರಿಗೆ ಟಿಕೇಟ್‌ ನೀಡಲಾಗಿದೆ. ಆದ್ರೆ ಈ ಬಾರಿಯಾದ್ರು ಬಿಜೆಪಿ ಟಿಕೇಟ್‌ ಸಿಗಬಹುದು ಎಂದು ಕಾಯುತ್ತಿದ್ದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಗೆ ಹೈಕಮಾಂಡ್‌ ಶಾಕ್‌ ಕೊಟ್ಟಿದೆ. ಇದರಿಂದ ರಾಂಗ್‌ ಆಗಿರೋ ಅಪ್ಪು ಪಟ್ಟಣಶೆಟ್ಟಿ ವೈಲೆಂಟ್‌ ಆಗಿದ್ದಾರೆ. ಈ ಬಾರಿ ಯಾವುದೆ ಕಾರಣಕ್ಕು ಮರ್ಜಿಗೆ ಬೀಳಲ್ಲ, ಬಂಡಾಯ ಪಕ್ಕಾ ಎನ್ತಿದ್ದಾರೆ. ಈಗಲು ಕಾಲ ಮಿಂಚಿಲ್ಲ ಯತ್ನಾಳ್‌ ರಿಗೆ ಬೇರೆ ಕಡೆಗೆ ಕಳಿಸಿ ಬೀ ಪಾರಂ ನನಗೆ ಕೊಡಿ ಎನ್ತಿದ್ದಾರೆ..

ಬೆಂಬಲಿಗರ ಸಭೆ ಸೇರಿಸಿದ ಅಪ್ಪು ಪಟ್ಟಣಶೆಟ್ಟಿ: ಇತ್ತ ಗುರುವಾಗ ಬಿಜೆಪಿ ಅಭ್ಯರ್ಥಿ ಯತ್ನಾಳ್‌ ವಿಜಯಪುರ ನಗರದಲ್ಲಿ ತಮ್ಮ ಚುನಾವಣಾ ಕಚೇರಿ ಆರಂಭ ಮಾಡಿದ್ರೆ, ಸಂಜೆ ಬಂಡಾಯವೆದ್ದಿರುವ ಅಪ್ಪು ಪಟ್ಟಣಶೆಟ್ಟಿ ನಗರದ ರಾಮಚಂದ್ರ ಆಲಕುಂಟ ಮಂಗಲ ಕಾರ್ಯಾಲಯದಲ್ಲಿ ಬೆಂಬಲಿಗರ ಸಭೆ ನಡೆಸಿದರು. ಅಪ್ಪು ಪಟ್ಟಣಶೆಟ್ಟಿ ಸ್ವಾಭಿಮಾನಿ ಬಳಗದಿಂದ ಸಭೆ ನಡೆಸಲಾಯಿತು. ಈ ಮೂಲಕ ಬಂಡಾಯದ ಶಕ್ತಿ ಪ್ರದರ್ಶನ ನಡೆಸಿದರು. ಈ ಸಭೆಯಲ್ಲಿ ರವಿಕಾಂತ ಬಗಲಿ, ರಾಜು ಬಿರಾದಾರ್‌, ಗುರುಲಿಂಗಪ್ಪ ಅಂಗಡಿ, ಭೀಮಾಶಂಕರ್‌ ಹದ್ನೂರ್‌, ಮಲ್ಲಿಕಾರ್ಜುನ್‌ ಚೌಕಿಮಠ, ಮಲ್ಲಿಕಾರ್ಜುನ್‌ ರೂಡಗಿ, ಗೋಪಾಲ್‌ ಘಟಕಾಂಬಳೆ, ದಲಿತ ಮುಖಂಡ ನಾಗರಾಜ್‌ ಲಂಬು ಭಾಗಿಯಾಗಿ ಯತ್ನಾಳ್‌ ವಿರುದ್ಧ ಶಕ್ತಿಪ್ರದರ್ಶನ ನಡೆಸಿದರು.

ಇನ್ನೊಂದು ಸಭೆ ಕರೆದು ಅಂತಿಮ ತೀರ್ಮಾನ: ಈ ಸಭೆಯಲ್ಲಿ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದು ಕಂಡು ಬಂತು. ಇದೆ ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಹೇಳ್ತೀನಿ ಎಂದಿದ್ದ ಅಪ್ಪು ಪಟ್ಟಣಶೆಟ್ಟಿ ಯಾವ ಪಕ್ಷದಿಂದ ಸ್ಪರ್ಧೆಗೆ ಇಳಿಯುತ್ತಾರೆ ಜೆಡಿಎಸ್‌ ಅಥವಾ ಬೇರೆ ಪಕ್ಷವಾ ಇಲ್ಲಾ ಸ್ವತಂತ್ರವಾಗಿ ಕಣಕ್ಕೆ ಇಳಿಯುತ್ತಾರಾ ಅಂತಾ ಬೆಂಬಲಿಗರು ಅಪ್ಪು ಮಾತಿಗಾಗಿ ಕಾಯ್ತಾ ಇದ್ರು. ಆದ್ರೆ ಸಭೆ ಉದ್ದೇಶಿಸಿ ಮಾತನಾಡಿದ ಅಪ್ಪು ಪಟ್ಟಣಶೆಟ್ಟಿ ಇನ್ನೊಂದು ಸಭೆ ನಡೆಸಿ ಗಟ್ಟಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ರು, ಇದು ಏನೋ ಒಂದು ತೀರ್ಮಾನವಾಗಲಿದೆ ಎಂದು ನಿರೀಕ್ಷೆ ಇಟ್ಟು ಸಭೆಗೆ ಬಂದಿದ್ದ ಬೆಂಬಲಿಗರಲ್ಲಿ ಬೇಸರ ಮೂಡಿಸಿತು..

ಬಸವನ ಬಾಗೇವಾಡಿಯಲ್ಲಿ ಬಂಡಾಯದ ಕುದಿಕುದಿ ಕೆಂಡ: ತಡರಾತ್ರಿ ರಿಲೀಸ್‌ ಆದ ಬಿಜೆಪಿ ಎರಡನೇ ಪಟ್ಟಿಯಲ್ಲಿ ಎಸ್‌ ಕೆ ಬೆಳ್ಳುಬ್ಬಿಗೆ ಟಿಕೇಟ್‌ ಘೋಷಣೆಯಾಗಿತ್ತು. ಇದನ್ನ ತಿಳಿದ ಟಿಕೇಟ್‌ ನ ಪ್ರಬಲ ಆಕಾಂಕ್ಷಿಯಾಗಿದ್ದ ಸೋಮನಗೌಡ ಊರ್ಪ್‌ ಅಪ್ಪುಗೌಡ ಪಾಟೀಲ್‌ ಮನಗೂಳಿ ಕುದಿಕುದಿ ಕೆಂಡವಾಗಿದ್ದಾರೆ. ಟಿಕೇಟ್‌ ಕೈ ತಪ್ಪುತ್ತಿದ್ದಂತೆ ಅಪ್ಪುಗೌಡ ಮನಗೂಳಿ ಬೆಂಬಲಿಗರು ಸಭೆಗಳ ಮೇಲೆ ಸಭೆ ನಡೆಸಿದ್ದಾರೆ. ಇನ್ನೊಂದು ದೊಡ್ಡ ಬಹಿರಂಗ ಸಭೆ ನಡೆಸೋದಕ್ಕು ಅಪ್ಪುಗೌಡ ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎನ್ನಲಾಗಿದೆ..

ವಾಪಾಸ್‌ ಜೆಡಿಎಸ್‌ ಅಪ್ಪಿಕೊಳ್ತಾರ ಸೋಮನಗೌಡ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಜೆಡಿಎಸ್‌ ಮೂಲಕ ಅಪ್ಪುಗೌಡ ಮನಗೂಳಿ ಸ್ಪರ್ಧೆ ನಡೆಸಿದ್ದರು. ಎದುರಾಳಿ ಕಾಂಗ್ರೆಸ್‌ ನ ಶಿವಾನಂದ ಪಾಟೀಲರಿಗೆ ಒಳ್ಳೆಯ ಟಕ್ಕರನ್ನೇ ನೀಡಿದ್ದರು. ಆದ್ರೆ ಮುಂದೆ ನಡೆದ ಬೆಳವಣಿಗೆಯಲ್ಲಿ ಕಳೆದ ಒಂದು ವರೆ ವರ್ಷದ ಹಿಂದೆ ಬಿಜೆಪಿ ಸೇರಿದ್ದರು. ಬಿಜೆಪಿ ಸೇರಿದಾಗಲೇ ಅಪ್ಪುಗೌಡ ಈ ಬಾರಿ ಬ.ಬಾಗೇವಾಡಿ ಟಿಕೇಟ್‌ ತಮಗೆ ಎಂದು ಮೈಂಡಲ್ಲಿ ಪಿಕ್ಸ್‌ ಆಗಿದ್ರು. ಆದ್ರೆ 2ನೇ ಪಟ್ಟಿಯಲ್ಲಿ ಅಪ್ಪಗೌಡರಿಗು ಶಾಕ್‌ ಆಗಿತ್ತು. ಈಗ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದಾರೆ. ಜೆಡಿಎಸ್‌ ಪಕ್ಷಕ್ಕೆ ವಾಪಸ್‌ ಹೋಗ್ತಾರೆ, ಅಲ್ಲಿಂದಲೇ ಬ.ಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರ್ತೀವೆ..

2 ಕ್ಷೇತ್ರಗಳಲ್ಲಿ ಬಿಜೆಪಿಗೆ ಕಂಟಕವಾದ ಬಂಡಾಯಗಾರರು: ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳ ಪೈಕಿ ವಿಜಯಪುರ ನಗರ ಹಾಗೂ ಬಸವನ ಬಾಗೇವಾಡಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹಾಗೂ ಪಕ್ಷಕ್ಕೆ ಬಂಡಾಯಗಾರರು ಕಂಟವಾಗಿ ಪರಿಣಮಿಸಿದ್ದಾರೆ. ಅಕಸ್ಮಾತ್‌ ಆಗಿ ಚುನಾವಣೆಯಲ್ಲಿ ಇಬ್ಬರು ಸಹ ಬಂಡಾಯವಾಗಿ ಬಿಜೆಪಿ ವಿರುದ್ಧ ಸ್ಪರ್ಧೆಗೆ ಇಳಿದ್ರೆ ಬಿಜೆಪಿ ಸಂಕಷ್ಟ ಎದುರಾಗೋದು ಗ್ಯಾರಂಟಿ ಎನ್ನಲಾಗ್ತಿದೆ. ಇಬ್ಬರು ಕೊನೆಯ ಕ್ಷಣದಲ್ಲಿ ಗೆಲ್ಲದೆ ಹೋದ್ರು ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನ ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ ಅಂತಾ ಜನರೇ ಮಾತನಾಡ್ತಿದ್ದಾರೆ.

ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್‌

ಬಂಡಾಯ ಶಮನಕ್ಕೆ ನಾಯಕರ ನಿರಂತರ ಪ್ರಯತ್ನ: ವಿಜಯಪುರ ಜಿಲ್ಲೆ ಎರಡು ಕ್ಷೇತ್ರಗಳ ಬಿಜೆಪಿಯಲ್ಲಿ ಹೊತ್ತಿರುವ ಬಂಡಾಯ ಬೆಂಕಿಯನ್ನ ತಣ್ಣಗೆ ಮಾಡೋಕೆ ಬಿಜೆಪಿ ನಾಯಕರು ಸತತ ಪ್ರಯತ್ನದಲ್ಲಿದ್ದಾರಂತೆ. ಆದ್ರೆ ಅದು ಸಾಧ್ಯವಾಗ್ತಿಲ್ಲ. ಇನ್ನು ಅಥಣೀ ಸೇರಿದಂತೆ ರಾಜ್ಯ ನಾನಾ ಕಡೆಗಳಲ್ಲಿ ಬಿಜೆಪಿ ಬಂಡಾಯ ಎದುರಿಸುತ್ತಿರುವಾಗ ಬಂಡಾಯದ ಬೆಂಕಿ ತಣಿಸಲು ನಾಯಕರು ಪರದಾಡುವಂತಾಗಿದೆ. ಆದಷ್ಟು ಬೇಗ ಬಂಡಾಯ ಶಮನಗೊಳಿಸಬೇಕಿದೆ. ಇಲ್ಲದೆ ಹೋದ್ರೆ ಬಿಜೆಪಿಗೆ ಕಂಟಕ ತಪ್ಪಿದ್ದಲ್ಲ ಎನ್ತಿದ್ದಾರೆ ಮತದಾರರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.