ರಾಜ್ಯದಲ್ಲಿ ಲೂಟಿ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಪ್ರಿಯಾಂಕಾ ಗಾಂಧಿ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ನವಲಗುಂದ ಮತ್ತು ಕುಂದಗೋಳದಲ್ಲಿ ರೋಡ್‌ ಶೋ ನಡೆಸಿದರು. 

Karnataka Election 2023 Priyanka Gandhi Slams On BJP Govt At Hubballi gvd

ಹುಬ್ಬಳ್ಳಿ (ಏ.30): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ನವಲಗುಂದ ಮತ್ತು ಕುಂದಗೋಳದಲ್ಲಿ ರೋಡ್‌ ಶೋ ನಡೆಸಿದರು. ರಾಜ್ಯದಲ್ಲಿ ಲೂಟಿ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದರೆ ಕಾಂಗ್ರೆಸ್‌ಗೆ ಮತ ಚಲಾಯಿಸಿ ಎಂದು ಇದೇ ವೇಳೆ ಕರೆ ನೀಡಿದರು. ಇದಕ್ಕೂ ಮೊದಲು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಕುಂದಗೋಳಕ್ಕೆ ಆಗಮಿಸಿದ ಆಗಮಿಸಿದ ಅವರು ಜನರತ್ತ ಕೈ ಬೀಸುತ್ತಾ ಸಾಗಿದರು. 

ರಸ್ತೆ ಅಕ್ಕಪಕ್ಕದಲ್ಲಿ ನಿಂತಿದ್ದ ಜನರತ್ತ ತೆರಳಿ ಕೈ ಕುಲುಕಿದರು.  ಬಳಿಕ ಪ್ರವಾಸಿ ಮಂದಿರದ ಬಳಿಯಿಂದ ಭರ್ಜರಿ ರೋಡ್‌ ಶೋ ನಡೆಸಿದರು. ಕಾಂಗ್ರೆಸ್‌ ನಾಯಕಿಯನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲೆಲ್ಲ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ನಿಂತಿದ್ದರು. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಿಯಾಂಕಾ, ಬಿಜೆಪಿ ಆಡಳಿತದಿಂದ ನೀವೆಲ್ಲ ಕಹಿಯನ್ನೇ ಅನುಭವಿಸಿದ್ದೀರಿ ಎಂಬುದು ಗೊತ್ತು. ಬಿಜೆಪಿ ಜನಪರ ಕೆಲಸ ಮಾಡದೇ ಬರೀ ಲೂಟಿ ಮಾಡುವುದರಲ್ಲಿ ನಿರತವಾಗಿತ್ತು. ಬಿಜೆಪಿಯ ದುರಾಡಳಿತ ಪ್ರತಿಯೊಬ್ಬ ಮತದಾರರ ಗಮನಕ್ಕೂ ಬಂದಿದೆ. 

ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಈ ಸಲ ಕಹಿ ಅನುಭವ ನೀಡಿದ ಬಿಜೆಪಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ.  ಅದಕ್ಕಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸಿ. ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಯೋಜನೆ ಮೂಲಕ ಮುಂದಿನ ಆಡಳಿತದ ಬಗ್ಗೆ ಭರವಸೆ ನೀಡುತ್ತಿದೆ ಎಂದು ಹೇಳಿದರು. ಅಲ್ಲದೇ ಈ ಹಿಂದೆ ಇದ್ದ ಕ್ಷೀರಭಾಗ್ಯ, ಅನ್ನ ಭಾಗ್ಯ ಯೋಜನೆಯನ್ನು ಪುನಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಹೆಲಿಪ್ಯಾಡ್‌ನಿಂದ ವೇದಿಕೆ ಕಾರ‍್ಯಕ್ರಮಕ್ಕೆ ಆಗಮಿಸುವಾಗ ದಾರಿ ಮಧ್ಯೆ ಬಡ ವ್ಯಾಪಾರಿ ಬಾಲನಾಗಮ್ಮ ಎಂಬುವರನ್ನು ಭೇಟಿಯಾಗಿದ್ದನ್ನು ಭಾಷಣದಲ್ಲಿ ಪ್ರಸ್ತಾಪಿಸಿದರು. 

ಅವರ ಮನೆಯಲ್ಲಿ ಒಂದು ಕಪ್‌ ಚಹಾ ಸೇವಿಸಿ ಮಾತನಾಡಾತ್ತಾ, ಬಾಲನಾಗಮ್ಮನ ಜೀವನ, ನಿರ್ವಹಣೆ ಬಗ್ಗೆ ಕೇಳಿದಾಗ, ಬೆಲೆ ಏರಿಕೆಯಿಂದ ಸಾಕಾಗಿ ಹೋಗಿದೆ. ಏಳು ಮಕ್ಕಳಿದ್ದು ಜೀವನ ಕಷ್ಟಕರವಾಗಿದೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ನೀಡುತ್ತಿದ್ದ ಯೋಜನೆಗಳು ಈಗ ನಮಗೆ ತಲುಪುತ್ತಿಲ್ಲ ಎಂದು ನನಗೆ ಅವರು ದೂರಿದರು ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಕುಂದಗೋಳದಲ್ಲಿ ಭರ್ಜರಿ ರೋಡ್‌ ಶೋ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕುಂದಗೋಳದಲ್ಲಿ ಶನಿವಾರ ಭರ್ಜರಿ ರೋಡ್‌ ಶೋ ನಡೆಸಿದರು. ಲೂಟಿ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದರೆ ಕಾಂಗ್ರೆಸ್‌ಗೆ ಮತ ಚಲಾಯಿಸಿ ಎಂದು ಇದೇ ವೇಳೆ ಪ್ರಿಯಾಂಕಾ ಗಾಂಧಿ ಕರೆ ನೀಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಪ್ರಿಯಾಂಕಾ ಗಾಂಧಿ ಜನರತ್ತ ಕೈ ಬೀಸುತ್ತಾ ಸಾಗಿದರು. ರಸ್ತೆ ಅಕ್ಕಪಕ್ಕದಲ್ಲಿ ನಿಂತಿದ್ದ ಜನರತ್ತ ತೆರಳಿ ಕೈ ಕುಲುಕಿದರು. ಬಳಿಕ ಪ್ರವಾಸಿ ಮಂದಿರದ ಬಳಿಯಿಂದ ಭರ್ಜರಿ ರೋಡ್‌ ಶೋ ನಡೆಸಿದರು. 

ಯುವನಾಯಕಿಯನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲೆಲ್ಲ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ನಿಂತಿದ್ದರು. ಯುವನಾಯಕಿ ಬರುತ್ತಿದ್ದು, ಕಾಂಗ್ರೆಸ್‌, ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಪರವಾಗಿ ಘೋಷಣೆಗಳು ಮುಗಿಲು ಮುಟ್ಟಿದ್ದವು. ರೋಡ್‌ ಶೋ ಉದ್ದಕ್ಕೂ ಕಾರ್ಯಕರ್ತರು ಹೂಮಳೆ ಗೈಯುವ ಮೂಲಕ ಆತ್ಮೀಯ ಸ್ವಾಗತ ಕೋರಿದರು. ಕಾರ್ಯಕರ್ತರತ್ತ ಕೈಬೀಸುತ್ತಾ ಕುಂದಗೋಳ ಪಟ್ಟಣದ ವೃತ್ತಕ್ಕೆ ಆಗಮಿಸಿದರು. ರೋಡ್‌ ಶೋನಲ್ಲಿ ಕಾಂಗ್ರೆಸ್‌ ಬಾವುಟಗಳು ಎಲ್ಲೆಡೆ ರಾರಾಜಿಸಿದವು. ಮೆರವಣಿಗೆಯಲ್ಲಿ ಮಾಜಿ ಸಚಿವ ದಿ. ಸಿ.ಎಸ್‌. ಶಿವಳ್ಳಿ ಭಾವಚಿತ್ರವನ್ನು ಪ್ರದರ್ಶಿಸಿದ್ದು ವಿಶೇಷ. 

ಇನ್ನಷ್ಟು ಪ್ರಗತಿ ಸಾಧಿಸಲು ಬಿಜೆಪಿ ಬೆಂಬಲಿಸಿ: ನಳಿನ್‌ ಕುಮಾರ್‌ ಕಟೀಲ್‌ ಮನವಿ

ಗೊಂಬೆ ಕುಣಿತ, ಹೆಜ್ಜೆ ಮೇಳಗಳು ರೋಡ್‌ ಶೋಗೆ ಮೆರಗು ತಂದವು. ರೋಡ್‌ ಶೋ ಮುಕ್ತಾಯಗೊಳಿಸಿದ ನಂತರ ತೆರೆದ ವಾಹನದಲ್ಲಿ ನಿಂತು ಜನರನ್ನುದ್ದೇಶಿಸಿ ಕೆಲ ನಿಮಿಷ ಮಾತನಾಡಿದರು. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಿಯಾಂಕಾ, ಬಿಜೆಪಿ ಆಡಳಿತದಿಂದ ನೀವೆಲ್ಲ ಕಹಿಯನ್ನೇ ಅನುಭವಿಸಿದ್ದೀರಿ ಎಂಬುದು ಗೊತ್ತು. ಬಿಜೆಪಿ ಜನಪರ ಕೆಲಸ ಮಾಡದೇ ಬರೀ ಲೂಟಿ ಮಾಡುವುದರಲ್ಲಿ ನಿರತವಾಗಿತ್ತು. ಬಿಜೆಪಿಯ ದುರಾಡಳಿತ ಪ್ರತಿಯೊಬ್ಬ ಮತದಾರರ ಗಮನಕ್ಕೂ ಬಂದಿದೆ. ಈ ಸಲ ಕಹಿ ಅನುಭವ ನೀಡಿದ ಬಿಜೆಪಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಅದಕ್ಕಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸಿ ಎಂದರು.

Latest Videos
Follow Us:
Download App:
  • android
  • ios