ಚುನಾವಣೆ ಕಣದಲ್ಲಿ ಕೋಟಿ ಕುಬೇರರು: ಬುಧವಾರ ನಾಮಪತ್ರ ಸಲ್ಲಿಸಿದವರಲ್ಲಿ ಎಲ್ಲರೂ ಲಕ್ಷ್ಮೀಪುತ್ರರು

ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಇತರೆ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ ನೂರಾರು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮತ ಭಿಕ್ಷೆಗಾಗಿ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವ ಅಭ್ಯರ್ಥಿಗಳ ಪೈಕಿ ಹಲವರು ಲಕ್ಷ್ಮೀಪುತ್ರರಾಗಿರುವುದು ವಿಶೇಷ. 

Karnataka Election 2023 Nomination by billionaires in Bengaluru gvd

ಬೆಂಗಳೂರು (ಏ.20): ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಇತರೆ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ ನೂರಾರು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮತ ಭಿಕ್ಷೆಗಾಗಿ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವ ಅಭ್ಯರ್ಥಿಗಳ ಪೈಕಿ ಹಲವರು ಲಕ್ಷ್ಮೀಪುತ್ರರಾಗಿರುವುದು ವಿಶೇಷ. ಬುಧವಾರ ನಾಮಪತ್ರ ಸಲ್ಲಿಸಿದವರಲ್ಲಿ ಎಲ್ಲರೂ ಕೋಟಿ ಆಸ್ತಿ ಒಡೆಯರು.

ಕೃಷ್ಣಯ್ಯ ಶೆಟ್ಟಿ102.60 ಕೋಟಿ ಆಸ್ತಿವಂತ: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಲೂರು ಎಸ್‌.ಎನ್‌.ಕೃಷ್ಣಯ್ಯ ಶೆಟ್ಟಿತಮ್ಮ ಕುಟುಂಬ .102.60 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ .94.62 ಕೋಟಿ ಸ್ಥಿರಾಸ್ತಿ ಮತ್ತು .7.98 ಕೋಟಿ ಚರಾಸ್ತಿ ಇದೆ. .3.50 ಲಕ್ಷ ಮೌಲ್ಯದ ಇನೋವಾ ಕಾರು, .60.46 ಲಕ್ಷ ಮೌಲ್ಯದ ಚಿನ್ನಾಭರಣ, .10.59 ಲಕ್ಷ ಮೌಲ್ಯದ ಬೆಳ್ಳಿ ಸೇರಿದಂತೆ ಒಟ್ಟು .1.11 ಕೋಟಿ ಚರಾಸ್ತಿ ಇದೆ. ಕೃಷಿ ಭೂಮಿ, ಕೃಷಿಯೇತರ ಭೂಮಿ, ವಿವಿಧ ಕಟ್ಟಡ ಸೇರಿದಂತೆ .58.19 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. .5.70 ಕೋಟಿ ಸಾಲವಿದೆ. ಪತ್ನಿ ಸುನಿತಾ ಕೆ.ಶೆಟ್ಟಿ.67.32 ಲಕ್ಷ ಮೌಲ್ಯದ ಚಿನ್ನಾಭರಣ, .8.55 ಲಕ್ಷ ಮೌಲ್ಯದ ಬೆಳ್ಳಿ, ಷೇರುಗಳಲ್ಲಿ ಹೂಡಿಕೆ, ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಹಣ ಸೇರಿದಂತೆ ಒಟ್ಟು .5.08 ಕೋಟಿ ಮೌಲ್ಯದ ಚರಾಸ್ತಿ, .13.72 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. .7.90 ಕೋಟಿ ಸಾಲವಿದೆ. ಪುತ್ರ ಹೇಮಂತ್‌ ಕೆ.ಶೆಟ್ಟಿ.11 ಲಕ್ಷ ಮೌಲ್ಯದ ಕಾರು, ಷೇರುಗಳಲ್ಲಿ ಹೂಡಿಕೆ ಸೇರಿದಂತೆ ಒಟ್ಟು .1.79 ಕೋಟಿ, ಮೌಲ್ಯದ ಚರಾಸ್ತಿ, .22.70 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. .8.17 ಕೋಟಿ ಸಾಲವಿದೆ.

ಏ.28ರಿಂದ ರಾಜ್ಯದಲ್ಲಿ 1 ವಾರ ಮೋದಿ 20+ ಸಮಾವೇಶ?: 1-2 ದಿನದಲ್ಲಿ ವೇಳಾಪಟ್ಟಿ ಅಂತಿಮ ಸಂಭವ

69.85 ಕೋಟಿ ಹೆಚ್ಚಳ: ಕೃಷ್ಣಯ್ಯ ಶೆಟ್ಟಿಅವರು 2018ರಲ್ಲಿ 32.75 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಕಳೆದ ಐದು ವರ್ಷಗಳಲ್ಲಿ ಆಸ್ತಿಯಲ್ಲಿ .69.85 ಕೋಟಿ ಹೆಚ್ಚಳವಾಗಿದೆ.

ಅಖಂಡ ಆಸ್ತಿ 3 ಪಟ್ಟು ಹೆಚ್ಚಳ: ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಖಂಡ ಶ್ರೀನಿವಾಸಮೂರ್ತಿ .41.39 ಕೋಟಿ ಆಸ್ತಿ ಹೊಂದಿರುವ ಬಗ್ಗೆ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅದರಲ್ಲಿ .5.34 ಕೋಟಿ ಚರಾಸ್ತಿ ಮತ್ತು .36.04 ಕೋಟಿ ಸ್ಥಿರಾಸ್ತಿಯಾಗಿದೆ. 2018ರಲ್ಲಿ ಅಖಂಡ ಶ್ರೀನಿವಾಸಮೂರ್ತಿ ಆಸ್ತಿ .12.76 ಕೋಟಿ ಇತ್ತು. ಕಳೆದ 5 ವರ್ಷದಲ್ಲಿ ಆಸ್ತಿಯ ಪ್ರಮಾಣ .28.63 ಕೋಟಿ ಹೆಚ್ಚಳವಾಗಿದೆ. ಅದರಲ್ಲೂ ಚರಾಸ್ತಿ .50.10 ಲಕ್ಷದಿಂದ .5.34 ಕೋಟಿಕ್ಕೆ, ಸ್ಥಿರಾಸ್ತಿ .12.76 ಕೋಟಿಯಿಂದ .36.04 ಕೋಟಿಕ್ಕೆ ಹೆಚ್ಚಳವಾಗಿದೆ. ಸದ್ಯ ಅಖಂಡ ಶ್ರೀನಿವಾಸಮೂರ್ತಿ ಮತ್ತು ಕುಟುಂಬದವರ ಬಳಿ 1.20 ಕೆ.ಜಿ. ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ವಸ್ತುಗಳಿವೆ. 2018ರಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಯಾವುದೇ ಸಾಲ ಹೊಂದಿರಲಿಲ್ಲ, ಈಗ .15.7 ಕೋಟಿ ಸಾಲ ಹೊಂದಿದ್ದಾರೆ.

ಪದ್ಮನಾಭನಗರದ ರಘುನಾಥ 52 ಕೋಟಿ ಆಸ್ತಿ ಘೋಷಣೆ: ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿ.ರಘುನಾಥ ನಾಯ್ದು ಬಳಿ .52 ಕೋಟಿ ಆಸ್ತಿ ಇರುವ ಕುರಿತು ಘೋಷಿಸಿಕೊಂಡಿದ್ದಾರೆ. ಅದರಲ್ಲಿ .21.89 ಕೋಟಿ ಚರಾಸ್ತಿ ಮತ್ತು .30.11 ಕೋಟಿ ಸ್ಥಿರಾಸ್ತಿಯಾಗಿದೆ. ಚರಾಸ್ತಿ ಪೈಕಿ 1.10 ಕೇಜಿ ಚಿನ್ನಾಭರಣ, 21 ಕೇಜಿ ಬೆಳ್ಳಿ ವಸ್ತುಗಳನ್ನು ಹೊಂದಿದ್ದಾರೆ. ರಘುನಾಥ ನಾಯ್ಡು ಹೆಸರಿನಲ್ಲಿ ಯಾವುದೇ ಸಾಲವಿಲ್ಲ. ಆದರೆ, ಅವರ ಪತ್ನಿ ಹೆಸರಿನಲ್ಲಿ 1.02 ಕೋಟಿ ರು. ಹೊಣೆಗಾರಿಕೆ ಇರುವ ಬಗ್ಗೆ ನಾಮಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದಾಸರಹಳ್ಳಿ ಧನಂಜಯ 154.38 ಕೋಟಿ ಆಸ್ತಿ: ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಿ.ಧನಂಜಯ ಅವರು .154.38 ಕೋಟಿ ಮೊತ್ತದ ಆಸ್ತಿ ಘೋಷಿಸಿದ್ದಾರೆ. ಆ ಪೈಕಿ .4.76 ಕೋಟಿ ಚರಾಸ್ತಿ, .149.62 ಕೋಟಿ ಸ್ಥಿರಾಸ್ತಿಯಾಗಿದೆ. ಚರಾಸ್ತಿಯಲ್ಲಿ 6.5 ಕೇಜಿ ಚಿನ್ನಾಭರಣವಿದ್ದು, ಬೆಳ್ಳಿ ವಸ್ತುಗಳಿಲ್ಲ. ಸ್ಥಿರಾಸ್ತಿ ಪೈಕಿ 2.17 ಎಕರೆ ವಿಸ್ತೀರ್ಣದ ಕೃಷಿಯೇತರ ಭೂಮಿ ಹಾಗೂ ಒಟ್ಟು 1.04 ಲಕ್ಷ ಚದರ ಅಡಿ ವಿಸ್ತೀರ್ಣದ 28 ವಸತಿ ಕಟ್ಟಡಗಳಿವೆ. .26.50 ಲಕ್ಷ ಹೊಣೆಗಾರಿಯನ್ನು ಹೊಂದಿದ್ದಾರೆ.

ಆಪ್‌ ಅಭ್ಯರ್ಥಿ ರಾಥೋಡ್‌ 3.50 ಕೋಟಿ ಆಸ್ತಿ ಮಾಲಿಕ: ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿರುವ ಸುರೇಶ್‌ ರಾಥೋಡ್‌ ಅವರು ತಮ್ಮ ಕುಟುಂಬವು .3.50 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ .57.82 ಲಕ್ಷ ಮೌಲ್ಯದ ಚರಾಸ್ತಿ ಮತ್ತು .2.92 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಸುರೇಶ್‌ ರಾಥೋಡ್‌ ಅವರು .14.90 ಲಕ್ಷ ಮೌಲ್ಯದ ಕಾರು, ವಿವಿಧ ಪಾಲಿಸಿಗಳು ಸೇರಿದಂತೆ ಒಟ್ಟು .21.56 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಂತೆಯೆ ಮನೆ ಸೇರಿದಂತೆ .2.92 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪತ್ನಿ ಸೀತಾ ಅವರು .29.69 ಲಕ್ಷ ಮೌಲ್ಯದ ಚಿನ್ನಾಭರಣ, .2.52 ಲಕ್ಷ ಮೌಲ್ಯದ ಬೆಳ್ಳಿ, ದ್ವಿಚಕ್ರವಾಹನ ಸೇರಿದಂತೆ ಒಟ್ಟು .36.25 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. ದಂಪತಿಗೆ ಯಾವುದೇ ಸಾಲವಿಲ್ಲ.

ಬಿಜೆಪಿ ಅಭ್ಯರ್ಥಿ ತಮ್ಮೇಶ್‌ ಬಳಿ 4.62 ಕೋಟಿ ಆಸ್ತಿ: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಎಚ್‌.ಸಿ.ತಮ್ಮೇಶ್‌ ಗೌಡ ಅವರು ತಮ್ಮ ಕುಟುಂಬವು ಒಟ್ಟು .4.62 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ .87.89 ಲಕ್ಷ ಮೌಲ್ಯದ ಚರಾಸ್ತಿ ಮತ್ತು .3.75 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ತಮ್ಮೇಶ್‌ ಗೌಡ ಅವರು .21 ಲಕ್ಷ ಮೌಲ್ಯದ ಚಿನ್ನ, .6.51 ಲಕ್ಷ ಮೌಲ್ಯದ ಬೆಳ್ಳಿ, .45 ಸಾವಿರ ಮೌಲ್ಯದ ಬೈಕ್‌ ಸೇರಿದಂತೆ ಒಟ್ಟು .44.03 ಲಕ್ಷ ಚರಾಸ್ತಿ ಹೊಂದಿದ್ದಾರೆ. .75 ಲಕ್ಷ ಮೌಲ್ಯದ ಕೃಷಿ ಭೂಮಿ, .1.87 ಕೋಟಿ ಮೌಲ್ಯದ ಮನೆ ಸೇರಿದಂತೆ .1.87 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದರ ಜತೆಗೆ .41.09 ಲಕ್ಷ ಸಾಲವೂ ಇದೆ. ಇವರ ಪತ್ನಿ ಕಾವ್ಯಾ ಅವರು .27 ಲಕ್ಷ ಮೌಲ್ಯದ ಚಿನ್ನ, .12.40 ಲಕ್ಷ ಮೌಲ್ಯದ ಬೆಳ್ಳಿ ಸೇರಿದಂತೆ ಒಟ್ಟು .41.15 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಂತೆಯೆ ಮನೆ ಸೇರಿದಂತೆ .1.87 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದರ ಜತೆಗೆ .16.60 ಲಕ್ಷ ಸಾಲಗಾರರಾಗಿದ್ದಾರೆ. ಇವರ ಪುತ್ರ ಸೋಹನ್‌ ಗೌಡ .2.70 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿಶ್ವನಾಥ್‌ 59.44 ಕೋಟಿ ಒಡೆಯ: ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಸ್‌.ಆರ್‌.ವಿಶ್ವನಾಥ್‌ ಅವರು ತಮ್ಮ ಕುಟುಂಬ .59.44 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಈ ಪೈಕಿ .10.44 ಕೋಟಿ ಮೌಲ್ಯದ ಚರಾಸ್ತಿ ಮತ್ತು .49 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ವಿಶ್ವನಾಥ್‌ ಬಳಿ .1.80 ಕೋಟಿ ಮೌಲ್ಯದ ಚಿನ್ನ, .16 ಲಕ್ಷ ಮೌಲ್ಯದ ಬೆಳ್ಳಿ, .25 ಲಕ್ಷ ಮೌಲ್ಯದ ಇನೋವಾ ಕಾರು, .38 ಲಕ್ಷ ಮೌಲ್ಯದ ಫಾರ್ಚೂನರ್‌ ಕಾರು ಸೇರಿದಂತೆ .3.81 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಂತೆಯೆ ಮನೆ, ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನಗಳು, ವಾಣಿಜ್ಯ ಕಟ್ಟಡಗಳು ಸೇರಿದಂತೆ .27.36 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಂತೆಯೇ ವಿಶ್ವನಾಥ್‌ ಅವರಿಗೆ .42.50 ಲಕ್ಷ ಸಾಲವಿದೆ.

ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ 24 ಗಂಟೆಯಲ್ಲೇ ಬದಲು

ಪತ್ನಿ ವಾಣಿಶ್ರೀ ವಿಶ್ವನಾಥ್‌ ಅವರು .2.37 ಕೋಟಿ ಮೌಲ್ಯದ ಚಿನ್ನಾಭರಣ, .13.60 ಲಕ್ಷ ಮೌಲ್ಯದ ಬೆಳ್ಳಿ, .11.50 ಲಕ್ಷ ಮೌಲ್ಯದ ಎರಡು ಟ್ರಾಕ್ಟರ್‌, .12 ಲಕ್ಷ ಮೌಲ್ಯದ ಜೀಪು ಸೇರಿದಂತೆ .5.36 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಂತೆಯೇ .15.98 ಕೋಟಿ ಮೌಲ್ಯದ ಸ್ಥಿರಾಸ್ತಿಯ ಒಡೆಯರಾಗಿದ್ದಾರೆ. ಇವರಿಗೆ .35.16 ಲಕ್ಷ ಸಾಲವಿದೆ. ಪುತ್ರಿ ಅಪೂರ್ವ ಅವರು .60 ಲಕ್ಷ ಮೌಲ್ಯದ ಚಿನ್ನ, .8 ಲಕ್ಷ ಮೌಲ್ಯದ ಬೆಳ್ಳಿ, .8 ಲಕ್ಷ ಮೌಲ್ಯದ ಎರಡು ವಾಚ್‌ ಸೇರಿದಂತೆ .1.25 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಂತೆಯೇ .5.65 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

16.33 ಕೋಟಿ ಆಸ್ತಿ ಹೆಚ್ಚಳ: ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ .43.11 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದರು. .1.62 ಕೋಟಿ ಸಾಲ ತೋರಿಸಿದ್ದರು. ಕಳೆದ ಐದು ವರ್ಷಗಳಲ್ಲಿ .16.33 ಕೋಟಿ ಆಸ್ತಿ ಹೆಚ್ಚಳವಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios